ಹೊಸ ವರ್ಷದ ಆರಂಭದಲ್ಲೇ 5 ಹೊಸ ರೈಲು ಸೇವೆ ಆರಂಭ, ಯಾವ ಮಾರ್ಗದಲ್ಲಿ ಸಂಚಾರ?

First Published | Dec 31, 2024, 6:38 PM IST

ರೈಲು ಪ್ರಯಾಣಿಕರು, ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೊಸ ವರ್ಷದ ಆರಂಭದಲ್ಲೇ 5 ಹೊಸ ರೈಲು ಸೇವೆ ಆರಂಭಗೊಳ್ಳುತ್ತಿದೆ. ಈ ರೈಲಿನಲ್ಲಿ ಕೆಲ ವಿಶೇಷ ಸೌಲಭ್ಯಗಳು ಇವೆ. ಯಾವ ಮಾರ್ಗದಲ್ಲಿ ಈ ರೈಲು ಸೇವೆ ನೀಡಲಿದೆ?

ರೈಲು ಪ್ರಯಾಣಿಕರೇ ಗಮನಿಸಿ, ಹೊಸ ವರ್ಷದಿಂದ ಹೊಸ 5 ರೈಲು ಸೇವೆಗಳು ಆರಂಭಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ 5 ರೈಲುಗಳಿಗೆ ಹೊಸ ವರ್ಷದ ಆರಂಭಿಕ ದಿನಗಳಲ್ಲೇ ಚಾಲನೆ ನೀಡಲಿದ್ದಾರೆ. ಹೊಸ ರೈಲು ಸೇವೆ ಜನವರಿ 2025ರಲ್ಲೇ ಆರಂಭಗೊಳ್ಳುತ್ತಿದೆ. ಎಲ್ಲಾ ತಯಾರಿಗಳು ಬಹುತೇಕ ಅಂತಿಮಗೊಂಡಿದೆ.

ಯಾವ ಮಾರ್ಗದಲ್ಲಿ ಸಂಚಾರ?
ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿರುವ 5 ರೈಲುಗಳು ದೆಹಲಿಯಿಂದ ಕಾಶ್ಮೀರಕ್ಕೆ ಸಂಚಾರ ಮಾಡಲಿದೆ. ಕಾಶ್ಮೀರಕ್ಕೆ ಮತ್ತಷ್ಟು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಕಾಶ್ಮೀರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. 

Tap to resize

ಕಾಶ್ಮೀರಕ್ಕೆ ತೆರಳು ರೈಲಿನ ಕಾರಣ ಈ ರೈಲಿನ ಪ್ರತಿ ಬೋಗಿ, ಪ್ರೀತಿ ಸೀಟಿನಲ್ಲೂ ಹೀಟರ್ ಸಿಸ್ಟಮ್ ಇದೆ. ಇದರಿಂದ ಕಾಶ್ಮೀರದ ಕೊರವ ಚಳಿಯಲ್ಲಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕನಿಗೆ ಚಳಿ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಹೀಟರ್ ಸಿಸ್ಟಮ್ ಅಳವಡಿಸಲಾಗಿದೆ. ಇನ್ನು ಕೊರೆವ ಚಳಿಯಲ್ಲೂ ರೈಲಿನ ಒಳಗೆ ಬೆಚ್ಚಿಗಿರುವಂತೆ ಮಾಡುವ ಕೆಲ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ.

ಪ್ರತಿ ರೈಲು 22 ಬೋಗಿಗಳನ್ನು ಹೊಂದಿರಲಿದೆ. ಎಸಿ, ಸ್ಲೀಪರ್, ಜನರಲ್ ಬೋಗಿಗಳು ಇರಲಿದೆ. ಕಾಶ್ಮೀರಕ್ಕೆ ತೆರಳುವ ರೈಲು ಪ್ರಯಾಣಿಕರ ಭದ್ರತಾ ತಪಾಸಣೆಗಳು ನಡೆಯಲಿದೆ. ಸುರಕ್ಷತಾ ದೃಷ್ಟಿಯಿಂದ ಭದ್ರತಾ ತಪಾಸಣೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ರೈಲ್ವೇ ಇಲಾಖೆ ಮನವಿ ಮಾಡಿಕೊಂಡಿದೆ.

ಈ ರೈಲಿನ ಭದ್ರತಾ ತಪಾಸಣೆ ವಿಮಾನ ನಿಲ್ದಾಣಗಳಲ್ಲಿರುವ ಭದ್ರತಾ ತಪಾಸಣೆಯಂತೆ ಇರಲಿದೆ. ಈ ಮೂಲಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ. ಪ್ರತಿ ರೈಲು ಹೊರಡುವ ಮುನ್ನ ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

CRS ಅನುಮತಿ ಸಿಕ್ಕ ಬೆನ್ನಲ್ಲೇ ರೈಲು ಉದ್ಘಾಟನೆ ದಿನಾಂಕ ಘೋಷಣೆಯಾಗಲಿದೆ.ಉಧಮಪುರ ಬಾರಮುಲ್ಲಾ-ಶ್ರೀನಗರ ರೈಲು ಲಿಂಕ್‌ನ ಕತ್ರಾದಿಂದ ರೆಸಾಯಿ ವರೆಗೆ 17 ಕಿಲೋಮೀಟರ್ ರೈಲು ಮಾರ್ಗದ ಕಾಮಾಗಾರಿ ಅಂತಿಮ ಹಂತದಲ್ಲಿದೆ. ಜನವರಿ ಮೊದಲ ವಾರದಲ್ಲಿ ಈ ರೈಲು ಮಾರ್ಗದ ತಪಾಸಣೆ ನಡೆಯಲಿದೆ. ಬಳಿಕ ಉದ್ಘಾಟನೆ ದಿನಾಂಕ ಬಹಿರಂಗವಾಗಲಿದೆ.

Latest Videos

click me!