ಬಾಯ್‌ಫ್ರೆಂಡ್ ಯಶ್ ಮಡಿಲಲ್ಲಿ ಸಂಸದೆ ನುಸ್ರತ್ ಮಗು, ನೆಟ್ಟಿಗರ ಪ್ರಶ್ನೆಗೆ ನಟಿ ದಂಗು!
First Published | Sep 1, 2021, 2:10 PM ISTತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ಬಂಗಾಳಿ ಚಲನಚಿತ್ರ ನಟಿ ನುಸ್ರತ್ ಜಹಾನ್ ಆಗಸ್ಟ್ 25 ರಂದು ಪುಟ್ಟ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಪಾರ್ಕ್ ಸ್ಟ್ರೀಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿಅವರ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ಕೊಟ್ಟಿರುವ ನುಸ್ರತ್ 4 ದಿನಗಳ ಬಳಿಕ, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಆಕೆ ಆಸ್ಪತ್ರೆಯಿಂದ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ನುಸ್ರತ್ ಮಗ ಆಕೆಯ ಗೆಳೆಯ ಯಶ್ ದಾಸ್ ಗುಪ್ತಾರ ತೋಳಿನಲ್ಲಿತ್ತು ಎಂಬುವುದು ವಿಶೇಷ. ಯಶ್ ಅವರ ಮಡಿಲಲ್ಲಿ, ನುಸ್ರತ್‌ನ ಮಗನನ್ನು ಕಂಡು ನೆಟ್ಟಿಗರು ನಿಮ್ಮ ಮಗುವಿನ ತಂದೆಯ ಹೆಸರೇನು ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ನುಸ್ರತ್ ತನ್ನ ಮಗನಿಗೆ ಇಶಾನ್(Yishaan) ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರು ಯಶ್‌ಗೆ ಹೋಲಿಕೆಯಾಗುತ್ತದೆ.