ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳ ಬೃಹತ್ ಪ್ರತಿಭಟನೆ

First Published | Aug 27, 2024, 6:02 PM IST

ಆರ್‌ಜೆ ಆಸ್ಪತ್ರೆ ವೈದ್ಯೆಯ ಕೊಲೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆ ಕರೆ ನೀಡಿದ್ದ ನಬನ್ನಾ ಅಭಿಯಾನದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮತ್ತು ಹೌರಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ, ಜಲಫಿರಂಗಿಗಳು ಮತ್ತು ಅಶ್ರುವಾಯು, ಶೆಲ್ ಗಳನ್ನು ಲೆಕ್ಕಿಸದೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. 

ನಬನ್ನಾ ಅಭಿಯಾನ

ಆರ್‌ಜೆ ಆಸ್ಪತ್ರೆ, ಕಾಲೇಜಿನ ವಿದ್ಯಾರ್ಥಿಯ ಕೊಲೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆ ಕರೆ ನೀಡಿದ್ದ ನಬನ್ನ ಅಭಿಯಾನದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮತ್ತು ಹೌರಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು.

ಬೆಳಗ್ಗೆಯಿಂದಲೇ ಅಭಿಯಾನವನ್ನು ತಡೆಯಲು ರಾಜ್ಯ ಮತ್ತು ಕೋಲ್ಕತ್ತಾ ಪೊಲೀಸರು ಸಜ್ಜಾಗಿದ್ದರು. ಆದರೆ ವಿದ್ಯಾರ್ಥಿ ಸಂಘಟನೆ ಅಭಿಯಾನದಿಂದ ಹಿಂದೆ ಸರಿಯಲಿಲ್ಲ. ವಿವಿಧ ದಿಕ್ಕುಗಳಿಂದ ಮೆರವಣಿಗೆ ನಡೆಸಿದರು.

Tap to resize

ಬ್ಯಾರಿಕೇಡ್‌ಗಳನ್ನು ಭೇದಿಸಿದ ಪ್ರತಿಭಟನಾಕಾರರು

ನಬನ್ನ ಅಭಿಯಾನದ ಹೆಸರಿನಲ್ಲಿ, ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುಂದೆ ಸಾಗಿದರು. ನಬನ್ನ ಅಭಿಯಾನವನ್ನು ತಡೆಯಲು ರಾಜ್ಯ ಆಡಳಿತ ಸುಮಾರು 19 ಕಡೆ ಪೊಲೀಸರನ್ನು ನಿಯೋಜಿಸಿತ್ತು.

ಜಲಫಿರಂಗಿ

ಅಭಿಯಾನವನ್ನು ತಡೆಯಲು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಆಶ್ರವಾಯು ಸಹ ಪ್ರಯೋಗಿಸಿದರೂ ವಿದ್ಯಾರ್ಥಿಗಳು ಹಿಂದೆ ಸರಿಯಲಿಲ್ಲ.

ಪ್ರತಿಭಟನೆಯನ್ನು ತಡೆಯಲು ಅಶ್ರುವಾಯು ಸಿಡಿಸಿ ಶೆಲ್‌ಗಳನ್ನು ಪ್ರಯೋಗಿಸಲಾಯಿತು. ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಹೌರಾ ಸೇತುವೆಯಲ್ಲಿ ತೀವ್ರ ಅಶಾಂತಿ

ಹೌರಾ ಸೇತುವೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ಉಂಟಾಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಪೊಲೀಸರ ಮೇಲೆ ಕಲ್ಲು ತೂರಾಟ

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟದ ಘಟನೆಯೂ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು.

ಹೌರಾ ನಿಲ್ದಾಣದಲ್ಲಿ ಜಮಾವಣೆ

ಪ್ರತಿಭಟನಾಕಾರರ ದೊಡ್ಡ ಗುಂಪು ಹೌರಾ ಮತ್ತು ಸಂತರಾಗಚಿ ನಿಲ್ದಾಣದಲ್ಲಿ ಜಮಾಯಿಸಿತು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಅಲ್ಲಿಗೆ ಆಗಮಿಸಿದರು.

ಪೊಲೀಸ್ ಮೂಲಗಳ ಪ್ರಕಾರ, ಪ್ರತಿಭಟನಾಕಾರರು ನಬನ್ನದಿಂದ ಕೇವಲ 100 ಮೀಟರ್ ದೂರದಲ್ಲಿ ಇದ್ದರು. ಆದಾಗ್ಯೂ, ಕೇವಲ ಮೂರು ನಿಮಿಷಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು  ಚದುರಿಸಿದರು 

ಮಹಿಳಾ ಪ್ರತಿಭಟನಾಕಾರರು ಮುಂದೆ

ಮಹಿಳಾ ಪ್ರತಿಭಟನಾಕಾರರ ಒಂದು ಗುಂಪು ಬಹುತೇಕ ನಬನ್ನ ಚೌಕವನ್ನು ತಲುಪಿತು. ಆದರೆ ಜಲಫಿರಂಗಿಗಳು ಮತ್ತು ಅಶ್ರುವಾಯು ಶೆಲ್‌ ಗಳೊಂದಿಗೆ ಸಜ್ಜಾಗಿರುವ ಪೊಲೀಸರು ಅವರನ್ನು ತಡೆದರು.

Latest Videos

click me!