ಮುಸ್ಲಿಂ ಪುರುಷ ಬಹುಪತ್ನಿತ್ವ ಹೊಂದಬಹುದು, ಆದರೆ....... ಅಲಹಾಬಾದ್ ಹೈಕೋರ್ಟ್‌ ತೀರ್ಪು

Published : May 15, 2025, 12:44 PM ISTUpdated : May 15, 2025, 12:45 PM IST

ಮುಸ್ಲಿಂ ಪುರುಷನು ತನ್ನ ಎಲ್ಲಾ ಪತ್ನಿಯರನ್ನು ಸಮಾನವಾಗಿ ಪರಿಗಣಿಸಿದರೆ ಬಹುಪತ್ನಿತ್ವಕ್ಕೆ ಅರ್ಹ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಸಂವಿಧಾನಾತ್ಮಕ ಮಿತಿಗಳಿಗೆ ಒಳಪಟ್ಟಿರುತ್ತದೆ ಮತ್ತು ಧಾರ್ಮಿಕ ಹಕ್ಕುಗಳು ಸಾರ್ವಜನಿಕ ಶಿಸ್ತು, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

PREV
15
ಮುಸ್ಲಿಂ ಪುರುಷ ಬಹುಪತ್ನಿತ್ವ ಹೊಂದಬಹುದು, ಆದರೆ....... ಅಲಹಾಬಾದ್ ಹೈಕೋರ್ಟ್‌ ತೀರ್ಪು

 ಮುಸ್ಲಿಂ ಪುರುಷನು ತನ್ನ ಎಲ್ಲಾ  ಪತ್ನಿಯರನ್ನು ಸಮಾನವಾಗಿ ಪರಿಗಣಿಸಿದರೆ, ಅವನು ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಲು ಅರ್ಹನಾಗಿರುತ್ತಾನೆ ಎಂದು  ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್  ತೀರ್ಪು ನೀಡಿದೆ. ಒಬ್ಬ ಮುಸ್ಲಿಂ ಪುರುಷನು ತನ್ನ ಎಲ್ಲಾ ಹೆಂಡತಿಯರನ್ನು ಸಮಾನವಾಗಿ ನಿರ್ವಹಿಸಿದರೆ ಮಾತ್ರ ಅವನು ಬಹುಪತ್ನಿತ್ವಕ್ಕಾಗಿಯೆ ಅರ್ಹನು ಎಂದಿರುವ ಕೋರ್ಟ್ ಈ ತೀರ್ಪು ಸಂವಿಧಾನ್ಮಕ ಮಿತಿಗಳಿಗೆ ಒಳಪಡುತ್ತದೆ ಎಂದಿದೆ.  ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಫರ್ಕಾನ್ ಎಂಬ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರ ಏಕ ಸದಸ್ಯ ಪೀಠದಿಂದ  ಈ ತೀರ್ಪು ಹೊರ ಬಿದ್ದಿದೆ.
 

25

ಧಾರ್ಮಿಕ ಹಕ್ಕುಗಳು ನಿರ್ಬಂಧಿತ:
ನ್ಯಾಯಾಲಯದ  ತಿಳಿಸಿರುವಂತೆ "ಖುರಾನ್ ಬಹುಪತ್ನಿತ್ವವನ್ನು 'ಸರಿಯಾದ ಕಾರಣಕ್ಕಾಗಿ' ಮಾತ್ರ ಅನುಮತಿಸುತ್ತದೆ, ಆದರೆ ಹಲವಾರು ಬಾರಿ ಇದನ್ನು ಪುರುಷರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ" ಎಂದು ಹೇಳಲಾಗಿದೆ. ಭಾರತ ಸಂವಿಧಾನದ 25ನೇ ವಿಧಿ ಧಾರ್ಮಿಕ ಸ್ವಾತಂತ್ರ್ಯ ನೀಡುತ್ತದೆ ಎಂಬುದು ಸತ್ಯವಾದರೂ, ಈ ಹಕ್ಕು ಸಾರ್ವಜನಿಕ ಶಿಸ್ತು, ನೈತಿಕತೆ, ಆರೋಗ್ಯ ಮತ್ತು ಇತರ ಸಂವಿಧಾನಾತ್ಮಕ ಮಿತಿಗಳ ಒಳಪಡುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

35

ಐತಿಹಾಸಿಕ ಹಿನ್ನೆಲೆ:
ಪೀಠವು ಬಹುಪತ್ನಿತ್ವಕ್ಕೆ ಐತಿಹಾಸಿಕ ಹಿನ್ನೆಲೆಯನ್ನೂ ಉಲ್ಲೇಖಿಸಿದ್ದು, "ಇಸ್ಲಾಮಿಕ್ ಸಮುದಾಯದ ಆರಂಭಿಕ ದಿನಗಳಲ್ಲಿ, ಸಂಘರ್ಷಗಳಿಂದ ವಿಧವೆಯಾದ ಮಹಿಳೆಯರ ಹಾಗೂ ಅನಾಥ ಮಕ್ಕಳ ಸಂಖ್ಯೆಯು ಹೆಚ್ಚಾಗಿತ್ತು. ಅಂತಹ ಸಂದರ್ಭಗಳಲ್ಲಿ ಅವರ ರಕ್ಷಣೆಗಾಗಿ ಬಹುಪತ್ನಿತ್ವವನ್ನು ಖುರಾನ್ ಶರತ್ತುಬದ್ಧವಾಗಿ ಅನುಮತಿಸಿತು" ಎಂದು ಹೇಳಿದೆ. ಈ ಪ್ರಕರಣವು 2020ರಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನಿಂದ ಆರಂಭವಾಯಿತು. ಫರ್ಕಾನ್ ತನ್ನ ಮೊದಲ ಹೆಂಡತಿಯ ಉಪಸ್ಥಿತಿಯ ಕುರಿತು ಯಾವುದೇ ಮಾಹಿತಿ ನೀಡದೆ ಆಕೆಯನ್ನು ಎರಡನೇ ಮದುವೆಯಾದ ಎಂದು ಅವರು ಆರೋಪಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ ಲೈಂಗಿಕ ಅತ್ಯಾ*ಚಾರವೂ ನಡೆದಿದೆ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲೀಸರು ಫರ್ಕಾನ್ ಹಾಗೂ ಇನ್ನಿಬ್ಬರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
 

45

ವಿವಾದದ ಮೂಲ:
ಫರ್ಕಾನ್ ಮೊದಲೇ ಮದುವೆಯಾಗಿರುವುದನ್ನು ಮದುವೆಯ ಸಮಯದಲ್ಲಿ ನನಗೆ ತಿಳಿಸಿರಲಿಲ್ಲ ಎಂದು ಮಹಿಳೆ ದೂರಿದರು. ಆದರೆ ಫರ್ಕಾನ್ ಪರ ವಕೀಲರು, "ಮುಸ್ಲಿಂ ಕಾನೂನಿನ ಪ್ರಕಾರ ಒಬ್ಬ ಪುರುಷನು ನಾಲ್ಕು ಹೆಂಡತಿಯರನ್ನು ಮದುವೆಯಾಗಬಹುದು" ಎಂಬ ವಾದವನ್ನು ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ವಿವಾಹ ಮಾನ್ಯವಾಗಿರುವುದರಿಂದ ಅತ್ಯಾ*ಚಾರ ಅಥವಾ ದ್ವಿಪತ್ನಿತ್ವದ ಆರೋಪಗಳು ತಕ್ಷಣಕ್ಕೆ ಅನ್ವಯಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಆದರೂ ಈ ವಿಷಯದಲ್ಲಿ ಇನ್ನಷ್ಟು ಪರಿಶೀಲನೆ ಅಗತ್ಯವಿದೆ ಎಂದು ಹೇಳಿ ದೂರುದಾರಿಗೆ ನೋಟಿಸ್ ನೀಡಿತು. ಅಲ್ಪಕಾಲದವರೆಗೆ ಫರ್ಕಾನ್ ಅಥವಾ ಇತರ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಆದೇಶಿಸಲಾಗಿದೆ. ಫರ್ಕಾನ್ ಪರವಾಗಿ ಅಲೋಕ್ ಕುಮಾರ್ ಪಾಂಡೆ, ಪ್ರಶಾಂತ್ ಕುಮಾರ್ ಮತ್ತು ಸುಶೀಲ್ ಕುಮಾರ್ ಪಾಂಡೆ ಎಂಬವರು ವಾದ ಮಂಡಿಸಿದರು.
 

55

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರ ವಾದ ಮಂಡಿಸಿದ ನ್ಯಾಯಮೂರ್ತಿ ದೇಸ್ವಾಲ್, ಮುಸ್ಲಿಂ ಪುರುಷನಿಗೆ ನಾಲ್ಕು ಬಾರಿ ಮದುವೆಯಾಗಲು ಅವಕಾಶವಿರುವುದರಿಂದ ಆ ವ್ಯಕ್ತಿಯ ತಪ್ಪಿಲ್ಲ. ಕುರಾನ್ ಬಹುಪತ್ನಿತ್ವವನ್ನು ಅನುಮತಿಸುವುದರ ಹಿಂದೆ ಒಂದು ಐತಿಹಾಸಿಕ ಕಾರಣವಿದೆ, ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು 1937 ರ ಶರಿಯತ್ ಕಾಯ್ದೆಯ ಪ್ರಕಾರ ನಿರ್ಧರಿಸಬೇಕು ಎಂದರು. ಅಲಹಾಬಾದ್ ಹೈಕೋರ್ಟ್ ತನ್ನ 18 ಪುಟಗಳ ತೀರ್ಪಿನಲ್ಲಿ, ಫರ್ಕಾನ್ ಅವರ ಇಬ್ಬರೂ ಪತ್ನಿಯರು ಮುಸ್ಲಿಮರಾಗಿರುವುದರಿಂದ ಅವರ ಎರಡನೇ ವಿವಾಹವು ಮಾನ್ಯವಾಗಿದೆ  ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು.   ಮುಂದಿನ ವಿಚಾರಣೆಯನ್ನು ಮೇ 26ಕ್ಕೆ  ಮುಂದೂಡಿದೆ.
 

Read more Photos on
click me!

Recommended Stories