ಲೇಸರ್ ಶೋ, ಸಂಗೀತ ಕಾರಂಜಿ; ದಾಲ್ ಲೇಕ್‌ನಲ್ಲಿ ಹೌಸ್‌ಬೋಟ್ ಉತ್ಸವಕ್ಕೆ ಅಮಿತ್ ಶಾ ಚಾಲನೆ!

First Published Oct 25, 2021, 8:26 PM IST
  • ಶ್ರೀನಗರದ ದಾಲ್ ಲೇಕ್‌ ಸರೋವದಲ್ಲಿ ಹೌಸ್‌ಬೋಟ್ ಉತ್ಸವ
  • ಹೌಸ್‌ಬೋಟ್ ಉತ್ಸವ ಉದ್ಘಾಟಿಸಿದ ಅಮಿತ್ ಶಾ
  • ಲೇಸರ್ ಲೈಟ್, ಮ್ಯೂಸಿಕಲ್ ಫೌಂಟೈನ್ ಚಿತ್ತಾರ
  • ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿ ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರದ ಮೂರು ದಿನಗಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂದು ಸಂಜೆ ಶ್ರೀಗನರದ ಐತಿಹಾಸಿಕ ದಾಲ್ ಲೇಕ್ ಸರೋವರದಲ್ಲಿ ಹೌಸ್ ಬೋಟ್ ಉತ್ಸವ ಉದ್ಘಾಟಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಉತ್ಸವ ಅಮಿತ್ ಶಾ ಮನಸೂರೆಗೊಳಿಸಿತು.

ಅತ್ಯಾಕರ್ಷಕ ಹಾಗೂ ಮನಸ್ಸಿಗೆ ಮುದ ನೀಡುವ ಸಂಗೀತ ಕಾರಂಜಿ, ಲೇಸರ್ ಶೋ ವೀಕ್ಷಿಸಿದ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಮಿತ್ ಶಾ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಸುಂದರ ಲೇಸರ್ ಶೋ ಹಾಗೂ ಸಂಗೀತ ಕಾರಂಜಿ ಫೋಟೋಗಳನ್ನು ಶಾ ಶೆೇರ್ ಮಾಡಿದ್ದಾರೆ.

ಹೌಸ್ ಬೋಟ್ ಉತ್ಸವ ಉದ್ಘಾಟಿಸಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೊತೆ ಮ್ಯೂಸಿಕಲ್ ಫೌಂಟೈನ್ ಹಾಗೂ ವಿವದ ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರು. ಸದ್ಯ ಅಮಿತ್ ಶಾ ಮೂರು ದಿನಗಳ ಕಣಿವೆ ರಾಜ್ಯ ಪ್ರವಾಸದಲ್ಲಿದ್ದಾರೆ.
 

ಶ್ರೀಗನದ ಹೌಸ್‌ಬೋಟ್ ಉತ್ಸವ ಅತ್ಯಂತ ಜನಪ್ರಿಯವಾಗಿದೆ. ವಿಶೇಷವಾಗಿ ಅಕ್ಟೋಬರ್ ತಿಂಗಳನಿಂದ ದಾಲ್ ಲೇಕ್ ಸರೋವರ ವೀಕ್ಷಣೆಗೆ ಪ್ರವಾಸಿಗರ ಆಗಮನ ಹೆಚ್ಚಾಗುತ್ತದೆ. ಈ ವೇಳೆ ಈ ಹೌಸ್‌ಬೋಟ್ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಂದು ಶ್ರೀಗನರಕ್ಕೆ ಆಗಮಿಸಿದ ಅಮಿತ್ ಶಾ ಗಂದರ್ಬಾಲ್ ಜಿಲ್ಲೆಯಲ್ಲಿರುವ ಖೀರ್ ಭವಾನಿ ದುರ್ಗಾ ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಅಮಿತ್ ಶಾ ಜೊತೆ ಗರ್ವನರ್ ಮನೋಜ್ ಸಿನ್ಹ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಯುವ ಸಮೂಹದ ಜೊತೆ ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಕಲ್ 370 ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ಸತತ ದಾಳಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಭೇಟಿ ಮಹತ್ವ ಪಡೆದುಕೊಂಡಿದೆ. ಭೇಟಿಯ ಮೊದಲ ದಿನ ಅಮಿತ್ ಶಾ ಭದ್ರತಾ ಅಧಿಕಾರಿಗಳ ಜೊತೆ ಭದ್ರತಾ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

click me!