ಕಳಂಕಿತ ಎಂಪಿ, ಶಾಸಕ ಬಂದಾಗ ಪೊಲೀಸರು ಸಲ್ಯೂಟ್ ಹೊಡಿಬೇಕಿಲ್ಲ! ಸರ್ಕಾರದ ಖಡಕ್ ತೀರ್ಮಾನ

Published : Apr 30, 2026, 11:56 AM IST

ಮುಂಬೈ: ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸವೊಂದನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಈ ಹಿಂದೆ ರೂಪಿಸಿದ್ದ ಸರ್ಕಾರದ ಆದೇಶದಲ್ಲಿ ಇದೀಗ ತಿದ್ದುಪಡಿ ಮಾಡಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ. 

PREV
15
ಜನಪ್ರತಿನಿಧಿಗಳ ಪ್ರೊಟೋಕಾಲ್‌ನಲ್ಲಿ ಮಹತ್ವದ ಬದಲಾವಣೆ

ಚುನಾಯಿತ ಪ್ರತಿನಿಧಿಗಳನ್ನು ಸರ್ಕಾರಿ ಅಧಿಕಾರಿಗಳು ಗೌರವಿಸುವ ಶಿಷ್ಟಾಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತಿದ್ದುಪಡಿ ಮಾಡಿದೆ.

25
ಕಳಂಕಿತರಿಗೆ ಎದ್ದು ನಿಂತು ಸ್ವಾಗತಿಸುವ ಅಗತ್ಯವಿಲ್ಲ

ಅದರನ್ವಯ, ‘ಶಾಸಕರು, ಸಂಸದರು ಶಿಕ್ಷೆಗೊಳಗಾಗಿದ್ದರೆ, ವಿಚಾರಣೆ ಎದುರಿಸುತ್ತಿದ್ದರೆ, ಅಂಥವರಿಗೆ ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿ ಅವರಿಗೆ ಎದ್ದುನಿಂತು ಸ್ವಾಗತಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

35
ಕಳೆದ ನವೆಂಬರ್‌ನಲ್ಲಿ ಜಾರಿಗೆ ತಂದಿದ್ದ ಆದೇಶಕ್ಕೆ ತಿದ್ದುಪಡಿ

ಕಳೆದ ವರ್ಷದ ನ.20ರಂದು ಸರ್ಕಾರ ಮಾಡಿದ್ದ ಆದೇಶದಲ್ಲಿ, ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರಿಗಳು ಎದ್ದು ನಿಂತು ಸ್ವಾಗತಿಸಬೇಕು ಎನ್ನುವ ನಿಯಮ ಜಾರಿಗೆ ತರಲಾಗಿತ್ತು. ಆದರೆ ಇದೀಗ ಸರ್ಕಾರ ಅದರಲ್ಲಿ ತಿದ್ದುಪಡಿ ಮಾಡಿದೆ.

45
ಕಳಂಕಿತರಿಗೆ ಸೆಲ್ಯೂಟ್ ಬೇಡ

ಆ ಪ್ರಕಾರ, ‘ಒಬ್ಬ ಚುನಾಯಿತ ಪ್ರತಿನಿಧಿಯು ಕ್ರಿಮಿನಲ್ ಅಥವಾ ಇತರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರೆ, ಅವರ ವಿಚಾರಣೆಗೆ ಸಮನ್ಸ್‌ ಜಾರಿಯಾಗಿಬೇಕಿದ್ದರೆ, ಚುನಾವಣಾ ಸಂಬಂಧಿತ ಕೆಲಸಗಳಿಗೆ ಅವರು ಕಚೇರಿಗೆ ಬಂದಿದ್ದರೆ ಅವರು ಆಗಮಿಸುವಾಗ ಅಥವಾ ನಿರ್ಗಮಿಸುವಾಗ ಎದ್ದುನಿಂತು ಸ್ವಾಗತಿಸಬೇಕಿಲ್ಲ’ ಎಂದು ತಿದ್ದುಪಡಿ ಮಾಡಿದೆ.

55
ಸರ್ಕಾರದ ನಡೆಗೆ ನೆಟ್ಟಿಗರ ಮೆಚ್ಚುಗೆ

ಹೀಗೆ ಮಾಡುವುದರಿಂದ ಪೊಲೀಸರ ಘನತೆ ಹಾಗೂ ಆತ್ಮಸ್ಥೈರ್ಯ ಹೆಚ್ಚಾಗಲಿದೆ ಎನ್ನುವುದು ಮಹಾರಾಷ್ಟ್ರ ಸರ್ಕಾರದ ಲೆಕ್ಕಾಚಾರವಾಗಿದೆ. ಸರ್ಕಾರದ ಈ ಹೊಸ ತಿದ್ದುಪಡಿಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories