ದೇಶಕ್ಕೆ ಕೊರೋನಾ ಅಪ್ಡೇಟ್ಸ್ ಕೊಡುವ ಲವ್ ಅಗರ್ವಾಲ್ ಯಾರು? ಇಂಟರೆಸ್ಟಿಂಗ್ ಮಾಹಿತಿ

First Published Apr 15, 2020, 12:55 PM IST
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರತಿದಿನ ಸುದ್ದಿಗೋಷ್ಟಿ ನಡೆಸಿ ದೇಶದ ಪರಿಸ್ಥಿತಿಯ ಮಾಹಿತಿ ನಿಡುತ್ತಿದೆ. ಈ ಸುದ್ದಿಗೋಷ್ಟಿಯಲ್ಲಿ ಪ್ರತಿದಿನ ಓರ್ವ IAS ಅಧಿಕಾರಿ ಪಾಲ್ಗೊಳ್ಳುತ್ತಾರೆ.  ಇವರು ಬೇರಾರು ಅಲ್ಲ, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್. ಅವರ ಕುರಿತಾದ ಕೆಲ ಮಾಹಿತಿ ಇಲ್ಲಿದೆ.
ಆಂದ್ರ ಪ್ರದೇಶದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಸದ್ಯ ಆರೋಗ್ಯ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲವ್ ಅಗರ್ವಾಲ್ ಓರ್ವ ಇನ್ನೋವೇಟಿವ್ ಐಎಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
undefined
ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಗಳೆಲ್ಲರೂ, ತಂತ್ರಜ್ಞಾನದ ಸಹಾಯದೊಂದಿಗೆ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರುವ ಆಸಕ್ತಿ ಲವ್ ಅಗರ್ವಾಲ್‌ ಅವರಲ್ಲಿದೆ ಎಂದಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿ ಎಚ್ಚರದಿಂದಿರುವುದು ಬುದೊಡ್ಡ ಆಯುಧ ಎಂಬುವುದು ಅವರ ಅಭಿಪ್ರಾಯ.
undefined
ಮೂಲತಃ ಉತ್ತರ ಪ್ರದೇಶದ ಸಹಾರನ್ಪುರ್‌ ನಿವಾಸಿಯಾಗಿರುವ ಲವ್ ಅಗರ್ವಾಲ್ ಆಂಧ್ರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ.
undefined
IIT ದೆಹಲಿಯಿಂದ 1993ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾದರು. 1996 ರಲ್ಲಿ ಅವರಿಇಗೆ ಆಂಧ್ರ ಪ್ರದೇಶ ಕೇಡರ್ ಸಿಕ್ಕಿತು.
undefined
ಲವ್ ಆಂಧ್ರ ಪ್ರದೇಶದಲ್ಲಿ ಮಾಧ್ಯಮಿಕ ಶಿಕ್‌ಷಣ ವಿಭಾಗದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಅಲ್ಲಿ ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರದಲ್ಲೂ ಬಹಳಷ್ಟು ಕೆಲಸ ಮಾಡಿದ್ದರು. ಅವರು ಆಂಧ್ರ ಪ್ರದೇಶದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.
undefined
2016ರಲ್ಲಿ ಲವ್‌ ಅಗರ್ವಾಲ್‌ರಿಗೆ ಕೇಂದ್ರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಬೇಕೆಂದೆನಿಸಿತು. ಇದಾದ ಬಳಿಕ ಅವರು ಈ ಹುದ್ದೆಗೆ ಮರುನೇಮಕಗೊಳಿಸುವಂತೆ ಮನವಿ ಮಾಡಿಕೊಂಡರು.
undefined
ಉತ್ತಮ ಕಾರ್ಯ ವೈಖರಿ ಹೊಂದಿದ್ದ ಲವ್ ಅವರನ್ನು 28 ಆಗಸ್ಟ್ 2016 ರಲ್ಲಿ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯ್ತು. ಅವರನ್ನು ಈ ಹುದ್ದೆಗೆ ಐದು ವರ್ಷಕ್ಕೆ ನೇಮಕಗೊಳಿಸಲಾಯ್ತು.
undefined
46 ವರ್ಷದ ಲವ್ ಅಗರ್ವಾಲ್ ಹೆಗಲ ಮೇಲೆ ಆರೋಗ್ಯ ಇಲಾಖೆಯಲ್ಲಿ ಗ್ಲೋಬಲ್ ಹೆಲ್ತ್, ಮೆಂಟಲ್ ಹೆಲ್ತ್, ತಂತ್ರಜ್ಞಾನ, ಪಬ್ಲಿಕ್ ಪಾಲಿಸಿಯ ಜವಾಬ್ದಾರಿ ಇದೆ. ಲವ್ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
undefined
ಮೋದಿ ಸರ್ಕಾರ ಅವರನ್ನು ಹಲವಾರು ಅಂತಾರಾಷ್ಟ್ರೀಯ ಸಂವಾದ ಕಾರ್ಯಕ್ರಮಗಳಲ್ಲಿ ಭಾರತದ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ.
undefined
click me!