ವಾರ್ಷಿಕ ಜೀವನ್ ಪ್ರಮಾಣ ಪತ್ರ
ಕೇಂದ್ರ ಸರ್ಕಾರಿ ಪಿಂಚಣಿದಾರರು ತಮ್ಮ ಪಿಂಚಣಿ ಮುಂದುವರಿಯಲು ಪ್ರತಿ ವರ್ಷ ನವೆಂಬರ್‌ನಲ್ಲಿ ಜೀವನ್ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ, ಈ ವರ್ಷದಿಂದ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಕ್ಟೋಬರ್ 1 ರಿಂದ ಈ ಪ್ರಮಾಣ ಪತ್ರವನ್ನು ಸಲ್ಲಿಸಬಹುದು. ಸಾಮಾನ್ಯ ವರ್ಷಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಅವಧಿಯನ್ನು ಆರಂಭಿಸಿದೆ.
ಜೀವನ್ ಪ್ರಮಾಣ ಆಧಾರ್ ಆಧಾರಿತ ಮತ್ತು ಬಯೋಮೆಟ್ರಿಕ್ ಡಿಜಿಟಲ್ ಪ್ರಮಾಣಪತ್ರ. ಸಾಮಾನ್ಯವಾಗಿ, ವಾರ್ಷಿಕ ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿದೆ. ಸರ್ಕಾರ ಅಗತ್ಯವಿದ್ದರೆ ದಿನಾಂಕವನ್ನು ವಿಸ್ತರಿಸುತ್ತದೆ. ಇಲ್ಲವಾದರೆ, ಇದೇ ದಿನಾಂಕವನ್ನು ಅಂತಿಮಗೊಳಿಸಬಹುದು.
ಜೀವನ್ ಪ್ರಮಾಣ ಆ್ಯಪ್
ಈಗಾಗಲೇ ಸರ್ಕಾರದ ಸೇವೆ ಸಲ್ಲಿಸಿ 58 ರಿಂದ 62 ವರ್ಷದಲ್ಲಿ ನಿವೃತ್ತಿ ಹೊಂದಿರುವ ಈಗ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸು ಆಗಿರುವ ಪಿಂಚಣಿದಾರರು ನವೆಂಬರ್ 1ರ ಬದಲು ಅಕ್ಟೋಬರ್ 1 ರಿಂದಲೇ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜೀವನ್ ಪ್ರಮಾಣ ಫೇಸ್ ಆ್ಯಪ್
ಡಿಜಿಟಲ್ ಆಗಿ ಜೀವನ್ ಪ್ರಮಾಣ ಪತ್ರವನ್ನು ಸುಲಭವಾಗಿ ಸಲ್ಲಿಸಬಹುದು. ಜೀವನ್ ಪ್ರಮಾಣ ಪತ್ರ ಪಡೆಯಲು ಆಧಾರ್ ಸಂಖ್ಯೆ ಅಗತ್ಯ. 'AadhaarFaceRD' ಮತ್ತು 'Jevan Pramaan Face App' ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ. ಈ ಆ್ಯಪ್‌ಗಳ ಮೂಲಕ ಮುಖವನ್ನು ಸ್ಕ್ಯಾನ್ ಮಾಡಿ ಮತ್ತು ಪಿಂಚಣಿದಾರರ ವಿವರಗಳನ್ನು ಭರ್ತಿ ಮಾಡಿ. ಫೋನ್‌ನಲ್ಲಿ ಸೆಲ್ಫಿ ಕ್ಯಾಮೆರಾದಲ್ಲಿ ಫೋಟೋ ತೆಗೆದು ಸಲ್ಲಿಸಿ. ಜೀವನ್ ಪ್ರಮಾಣ ಪತ್ರ ಡೌನ್‌ಲೋಡ್ ಲಿಂಕ್‌ನೊಂದಿಗೆ SMS ಬರುತ್ತದೆ.
ಪಿಂಚಣಿದಾರರು
ಒಂದು ವೇಲೆ ಜೀವನ್ ಪ್ರಮಾಣ ಪತ್ರ ಸಲ್ಲಿಸದಿದ್ದರೆ ನಿಮ್ಮ ಪಿಂಚಣಿ ನಿಲ್ಲುತ್ತದೆ. ಆದರೆ, ಮುಂದಿನ ತಿಂಗಳಲ್ಲಿ ಈ ಪತ್ರ ಸಲ್ಲಿಸಿದರೆ ಪಿಂಚಣಿ ಮತ್ತೆ ಸಿಗುತ್ತದೆ. ಬಾಕಿ ಹಣವೂ ಸಿಗುತ್ತದೆ. ಆದರೆ, ಮೂರು ವರ್ಷದೊಳಗೆ ಪತ್ರ ಸಲ್ಲಿಸಿದರೆ ಮಾತ್ರ ಪಿಂಚಣಿ ಮುಂದುವರಿಯುತ್ತದೆ. ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಜೀವನ್ ಪ್ರಮಾಣ ಪತ್ರ ಸಲ್ಲಿಸದಿದ್ದರೆ, ಸೂಕ್ತ ಪ್ರಕ್ರಿಯೆಯನ್ವಯ CPAO ಮೂಲಕ ಅಧಿಕಾರಿಯ ಅನುಮತಿ ಪಡೆದ ನಂತರ ಪಿಂಚಣಿ ಮುಂದುವರಿಯುತ್ತದೆ.