Parents TIps: ಪೋಷಕರೇ, ಸೋಷಿಯಲ್ ಮೀಡಿಯಾಗಳಲ್ಲಿ ಫಾಲೋವರ್ಸ್ ಮೆಚ್ಚಿಸಲೋ, ಲೈಕ್ಸ್, ಕಾಮೆಂಟ್ಸ್‌ಗಾಗಿಯೋ ಮಕ್ಕಳ ಫೋಟೋ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ, ಮಕ್ಕಳ ರಕ್ಷಣೆಗಾಗಿ NCE ಮತ್ತು ICW ಪೋಷಕರಿಗೆ ಎಚ್ಚರಿಕೆ ನೀಡಿದ್ದೇನು?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ಜಾಲತಾಣವು ಜೀವನದ ಅತ್ಯಗತ್ಯ ಭಾಗವಾಗಿದೆ. ಸೋಷಿಯಲ್ ಮೀಡಿಯಾ ಇಂದು ಎಲ್ಲರಿಗೂ ಬೇಕೇಬೇಕು ಎಂಬುದೇನೋ ನಿಜ. ಆದರೆ ಇನ್ನೊಂದೆಡೆ ಹೊಸ ಹೊಸ ವಂಚನೆಗಳ ಅಪಾಯವೂ ಹೆಚ್ಚುತ್ತಿದೆ ಎಂಬುದು ಅಷ್ಟೇ ನಿಜ.
24
ಪೋಷಕರೇ, ಫಾಲೋವರ್ಸ್‌ಗಾಗಿ ಮಕ್ಕಳಿಗೆ ಅಪಾಯ ಬೇಡ
ಇವತ್ತಿನ ಎಐ ಯುಗದಲ್ಲಿ ಮಕ್ಕಳಿಂದ ಮುದುಕರವರೆಗೂ ಪ್ರತಿದಿನ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್‌ಗಳಲ್ಲಿ ವಿಷಯಗಳನ್ನು, ಫೋಟೋ ವಿಡಿಯೋಗಳು ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಗು ಶಾಲೆಗೆ ಹೋಗುವುದು, ಆಟವಾಡವುದು, ಶಾಲೆಯಿಂದ ಬರುವುದು, ಹೋಗುವುದು ಪ್ರತಿಯೊಂದನ್ನು ಲೈಕ್‌ಗೋಸ್ಕರವೋ, ಫಾಲೋವರ್ಸ್ ಮೆಚ್ಚಿಸಲೆಂದೋ ಅಥವಾ ಅಲ್ಗರಿದಮ್ ಹೆಚ್ಚಿಸಲೋ ಒಟ್ಟಾರೆ ಸಣ್ಣ ಸಣ್ಣ ವಿಷಗಳಿಗೂ ಫೋಟೋ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ನೀವು ಮಾಡುವ ಒಂದು ಸಣ್ಣ ತಪ್ಪಿಗೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಸಂದರ್ಭವೂ ಬರಬಹುದು. ಈ ಹಿನ್ನೆಲೆ ಸೋಷಿಯಲ್ ಮೀಡಿಯಾಗಳಲ್ಲಿ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುವುದು ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಹೇಗೆ ಅಪಾಯಕಾರಿ ಎನ್ನುತ್ತೀರಾ? ಇಲ್ಲಿದೆ ಉತ್ತರ.
34
ಮಗುವಿನ ಫೋಟೋ ಶೇರ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
ಇತ್ತೀಚೆಗೆ ಆನ್‌ಲೈನ್ ಬೆದರಿಕೆಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ NCA ಮತ್ತು IWF ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ . ನಿಮ್ಮ ಮಕ್ಕಳು ಮತ್ತು ನೀವು ಸುರಕ್ಷಿತವಾಗಿರಲು ನಿಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಮಗುವಿನ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ವಿವರಗಳನ್ನು ತಿಳಿಸುವಂತಹ ಯಾವುದೇ ಪೋಟೋ ಪೋಸ್ಟ್ ಮಾಡಿದ್ದರೆ ಅಳಿಸಿಹಾಕಬೇಕು. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರೆ ಪೋಷಕರು ಮೊದಲು ಈ ಕೆಲಸ ಮಾಡಬೇಕು ಎಂದು ಎಚ್ಚರಿಸಿದೆ.
ಪೋಷಕರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವಾಗ ಮಕ್ಕಳ ಪ್ರೈವೆಸಿ ಪಾಲಿಸಿ ತಿಳಿದಿರಬೇಕು. ಉದಾಹರಣೆ ನೋಡಿ, ನಿಮ್ಮ ಮಗು ಶಾಲೆಗೆ ಹೋಗುತ್ತದೆ. ನೀವು ಪ್ರತಿದಿನ ಒಂದು ಶಾಲೆಗೆ ಕರೆದುಕೊಂಡು ಬರುವುದು, ಕರೆದುಕೊಂಡು ಹೋಗುವುದು ಮಾಡುತ್ತೀರಿ, ಹೀಗೆ ಮಗುವನ್ನ ಮನೆಗೆ ಕರೆದೊಯ್ಯುವಾಗ ವಿಡಿಯೋ ಫೋಟೋ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೀರಿ. ನಿಮ್ಮ ವಿಡಿಯೋ ನೋಡುವವರಲ್ಲಿ ಸ್ಥಳೀಯ ಕ್ರಿಮಿನಲ್ ಗಳು, ಅಥವಾ ಆನಲೈನ್ ವಂಚಕರು ನೋಡುತ್ತಾರೆ. ನಿಮ್ಮ ಮಗುವಿನ ಸ್ಪಷ್ಟ ಗುರುತು ಇರುವುದರಿಂದ ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ಅಪಾಯವೂ ಉಂಟು. ಅಥವಾ ಬೇರೊಂದು ಸಮಸ್ಯೆಯೂ ಎದುರಾಗಬಹುದು.
ಬ್ರಿಟನ್‌ನ ಇಂಟರ್ನೆಟ್ ವಾಚ್ ಫೌಂಡೇಶನ್ (IWF) ಮತ್ತು ರಾಷ್ಟ್ರೀಯ ಅಪರಾಧ ಸಂಸ್ಥೆ (NCA) ಪ್ರಕಾರ, AI ತಂತ್ರಜ್ಞಾನ ಬಳಸಿಕೊಂಡು ಮಕ್ಕಳ ಚಿತ್ರಗಳನ್ನು ಸಂಪಾದಿಸುವ ಮೂಲಕ ನಕಲಿ ಮತ್ತು ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ರಚಿಸಲಾಗುತ್ತಿದೆ. ಏಜೆನ್ಸಿಯ ಮಾಹಿತಿಯ ಪ್ರಕಾರ, 2025 ರಲ್ಲಿ, ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ 8,000 ಕ್ಕೂ ಹೆಚ್ಚು AI- ರಚಿತ ಫೋಟೋಗಳು ಮತ್ತು ವೀಡಿಯೊಗಳು ಪತ್ತೆಯಾಗಿವೆ! ಈ ಸಂಖ್ಯೆ ಕಳೆದ ವರ್ಷಕ್ಕಿಂತ ಸರಿಸುಮಾರು 14 ಪ್ರತಿಶತ ಹೆಚ್ಚಾಗಿದೆ.
ಪೋಷಕರಾದ ನೀವು ಮಾಡಬೇಕಾದದ್ದೇನು?
ಹೊಸ ಫೋಟೋ ಹಂಚಿಕೊಳ್ಳುವುದಕ್ಕಿಂತ ಮಗುವಿನ ವಿವರಗಳನ್ನು ಹೊಂದಿರುವ ಹಳೆಯ ಫೋಟೋ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಅಂತಹ ಫೋಟೋ ಉಳಿದಿದ್ದರೆ ತಕ್ಷಣವೇ ಡಿಲಿಟ್ ಮಾಡೋದು ಉತ್ತಮ. ಸಂಬಂಧಿಕರು, ಸ್ನೇಹಿತರು, ಶಾಲೆಗಳು ಮತ್ತು ಕ್ಲಬ್‌ಗಳು ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಪೋಷಕರ ಅನುಮತಿಯನ್ನು ಪಡೆಯುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ