ರೈಲಿನಲ್ಲಿ ಪಟಾಕಿಗಳು, ಅಡುಗೆ ಅನಿಲ ಸಿಲಿಂಡರ್‌ಗಳು, ಬಂದೂಕಿನ ಗುಂಡುಗಳಂತಹ ಸ್ಫೋಟಕ ವಸ್ತುಗಳನ್ನು ಸಾಗಿಸುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಅದೇ ರೀತಿ ರೈಲು ಪ್ರಯಾಣದಲ್ಲಿ ಸುಲಭವಾಗಿ ಸುಡುವ ಸ್ವಭಾವದ ಸೀಮೆಎಣ್ಣೆ, ಪೆಟ್ರೋಲ್‌ನಂತಹ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ತಮ್ಮ ಆದ್ಯತೆ ಎಂದಿದೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂತಹ ವಸ್ತುಗಳನ್ನು ಸಾಗಿಸುವುದರಿಂದ ರೈಲಿನಲ್ಲಿ ಸ್ಫೋಟ ಅಥವಾ ಅಗ್ನಿ ಅವಘಡ ಸಂಭವಿಸಿದರೆ ನೂರಾರು ಜನರು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಇಂತಹ ಅಪಘಾತಗಳು ಸಂಭವಿಸದಂತೆ ಜನರನ್ನು ರಕ್ಷಿಸಲು ರೈಲ್ವೆ ಕಠಿಣ ಕ್ರಮ ಕೈಗೊಳ್ಳುತ್ತಿದೆ.