ತಿರುಪತಿ ಲಡ್ಡುವಿನ ರಹಸ್ಯ: 500 ವರ್ಷಗಳ ಪರಂಪರೆ, ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ!

Published : Sep 21, 2024, 07:45 AM ISTUpdated : Sep 21, 2024, 08:57 AM IST

Tirupati laddu row ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದೇಗುಲದಷ್ಟೇ ಅಲ್ಲಿಯ ಲಡ್ಡು ಕೂಡಾ ಪ್ರಸಾದ ಪ್ರಸಿದ್ಧ. ಈ ಶ್ರೀವಾರಿ ಲಡ್ಡುಗೆ 500 ವರ್ಷಗಳ ಇತಿಹಾಸವಿದೆ. 

PREV
15
ತಿರುಪತಿ ಲಡ್ಡುವಿನ ರಹಸ್ಯ: 500 ವರ್ಷಗಳ ಪರಂಪರೆ, ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ!

ಈ ಶ್ರೀವಾರಿ ಲಡ್ಡುಗೆ 500 ವರ್ಷಗಳ ಇತಿಹಾಸವಿದೆ. ದೇಗುಲದಲ್ಲಿ ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಭಕ್ತರಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಮಾರಾಟದಿಂದಲೇ ದೇಗುಲಕ್ಕೆ ವಾರ್ಷಿಕ 500 ಕೋಟಿ ರು. 

25

ಆಸ್ಥಾನಂ ಲಡ್ಡೂ (750 ಗ್ರಾಂ.), ಕಲ್ಯಾಣೋಸ್ತವಂ ಲಡ್ಡೂ ಮತ್ತು ಪ್ರೋಕ್ತಂ ಲಡ್ಡೂ (175 ಗ್ರಾಂ.) ಎಂಬ 3 ವಿಧಗಳಲ್ಲಿ ಇದು ಲಭ್ಯ.

35

ಕಲ್ಯಾಣಂ ಅಯ್ಯಂಗಾರ್ ಎಂಬವರು ತಿರುಪತಿ ಲಡ್ಡುವಿನ ರೂವಾರಿ ಎನ್ನಲಾಗುತ್ತದೆ. ಅವರು ತಮ್ಮ ಕುಟುಂಬ ಸದಸ್ಯರಿಗೆ ಇದರ ತಯಾರಿಯ ರಹಸ್ಯ ಹೇಳಿಕೊಟ್ಟಿದ್ದು ಅದು ಇಂದೂ ಮುಂದುವರೆದಿದೆ.

45

ನಿತ್ಯ ಲಡ್ಡು ತಯಾರಿಗೆ 1 ಟನ್‌ ಕಡಲೆ ಹಿಟ್ಟು, 10 ಟನ್‌ ಸಕ್ಕರೆ, 700 ಕೆ.ಜಿ. ಗೋಡಂಬಿ, 150 ಕೆ.ಜಿ. ಏಲಕ್ಕಿ, 300-500 ಲೀಟರ್‌ ತುಪ್ಪ, 500 ಕೆ.ಜಿ. ಕಲ್ಲುಸಕ್ಕರೆ, 540 ಕೆ.ಜಿ. ದ್ರಾಕ್ಷಿ ಬಳಸಲಾಗುತ್ತದೆ. ವಿಶಿಷ್ಟ ಪ್ಯಾಕಿಂಗ್‌ನಿಂದಾಗಿ ಇವು 15 ದಿನ ತಾಜಾ ಉಳಿಯುತ್ತವೆ.

55

ವಿಶಿಷ್ಠ ಗುರುತು: 2009ರಲ್ಲಿ ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಮೂಲವನ್ನು ಗುರುತಿಸುವ ಜಿಐ ಟ್ಯಾಗ್‌ ಮತ್ತು ಬೌದ್ಧಿಕ ಆಸ್ತಿ ಹಕ್ಕು ಶ್ರೀವಾರಿ ಲಡ್ಡುಗೆ ಒಲಿದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories