ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

First Published | Sep 18, 2020, 3:23 PM IST

ಬೆಂಗಳೂರು( ಸೆ.18) ಭಾರತದ ಸೇನಾ ಶಕ್ತಿ ಹೇಗಿದೆ? ಚೀನಾಕ್ಕಿಂತ ನಾವು ಎಷ್ಟು ಶಕ್ತಿಶಾಲಿ ಎನ್ನುವುದನ್ನು ನೋಡಿದ್ದೇವು. ಗಡಿಯಲ್ಲಿನ ಪರಿಸ್ಥಿತಿಯನ್ನು ಸಮಗ್ರವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಮತ್ತೊಂದು ಕ್ರಮ ತೆಗೆದುಕೊಂಡಿದೆ.

ಭಾರತ ಮತ್ತು ಚೀನಾ ಗಡಿಯಲ್ಲಿನ ಭಾರತದ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಮೀಸಲಿಟ್ಟ ಬಜೆಡ್ ನ್ನು ಕೇಂದ್ರ ಸರ್ಕಾರ ದ್ವಿಗುಣ ಮಾಡಿದೆ.
undefined
ಚೀನಾ ತನ್ನ ಮೂಲಸೌಕರ್ಯ ಹೆಚ್ಚಳ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಹೊರಬರುತ್ತಲೇ ಕೇಂದ್ರ ಸರ್ಕಾರ ಅಖಾಡಕ್ಕೆ ಧುಮುಕಿದೆ.
undefined

Latest Videos


ಭಾರತ ಹೇಗೆ ಶಕ್ತಿ ಹೆಚ್ಚಳ ಮಾಡಿಕೊಳ್ಳುತ್ತಿದೆ ಎಂಬ ವಿವರಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜ್‌ ನಾಥ್ ಸಿಂಗ್ ನೀಡಿದ್ದಾರೆ.
undefined
ಸಂಸತ್ ನಲ್ಲಿ ಮಾತನಾಡಿದ ಸಿಂಗ್, ಸೂಕ್ಷ್ಮ ಪ್ರದೇಶದಲ್ಲಿ ಚೀನಾ ತನ್ನ ಸಾಮರ್ಥ್ಯ ಹೆಚ್ಚಳ ಮಾಡಿಕೊಳ್ಳುತ್ತಿರುವ ವರದಿ ಬಂದಿದ್ದು ಭಾರತ ಅದಕ್ಕೆ ತಕ್ಕದಾದ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
undefined
ರಸ್ತೆ ನಿರ್ಮಾಣ ಮಾಡಿಕೊಂಡರೆ ಸೇನೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಮತ್ತು ಶೀಘ್ರವಾಗಿ ರವಾನೆ ಮಾಡುವುದು ಸಾಧ್ಯವಾಗುತ್ತದೆ.
undefined
2016 ರಲ್ಲಿ 4,600 ಕೋಟಿ ರೂ. ಇದ್ದ ಬಜೆಟ್ ನ್ನು 2020-21 ಸಾಲಿಗೆ 1,800 ಕೋಟಿ ರೂ ಗೆ ಏರಿಕೆ ಮಾಡಲಾಗಿದೆ ಎಂದು ಸರ್ಕಾರದ ದಾಖಲೆಗಳೆ ತಿಳಿಸಿವೆ.
undefined
ಲೈನ್ ಆಫ್ ಕಂಟ್ರೋಲ್ ನಲ್ಲಿ ನೂರು ಕಿಲೋಮೀಟರ್ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ 2014ರಲ್ಲಿಯೇ ಒಪ್ಪಿಗೆ ನೀಡಲಾಗಿತ್ತು. ಸಂಬಂಧಿಸಿದ ರಾಜ್ಯಗಳಿಂದ ಭೂಮಿ ನೀಡಿಕೆ ವಿಚಾರದಲ್ಲಿ ಕೊಂಚ ಹಿನ್ನಡೆಯಾಗಿದ್ದು ಕೇಂದ್ರ ಸರ್ಕಾರ ಎಲ್ಲವನ್ನು ಮೀರಿ ನಡೆದಿದೆ.
undefined
ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಅತಿ ವೇಗವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿಮ ತೆರವು ಯಂತ್ರ, ಹೆವಿ ಡ್ಯೂಟಿ ಕಲ್ಲು ಒಡೆಯುವ ಯಂತ್ರಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
undefined
click me!