1.5 ವರ್ಷ ಕೃಷಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11ನೇ ಸುತ್ತಿನ ಸಭೆ ಪ್ರಮುಖಾಂಶ!

Published : Jan 22, 2021, 10:32 PM IST

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಎಲ್ಲಿಗೆ ತಲುಪುತ್ತೆ ಅನ್ನೋ ಆತಂಕ ಇದೀಗ ಆರಂಭವಾಗತೊಡಗಿದೆ. ರೈತರ ಪ್ರತಿಭಟನೆ ಎರಡು ತಿಂಗಳು ಪೂರೈಸುತ್ತಿದೆ. ಇತ್ತ ಕೇಂದ್ರ ಸರ್ಕಾರ ರೈತರೊಂದಿಗೆ 11ನೇ ಸುತ್ತಿನ ಮಾತುಕತೆಯೂ ಮುಗಿಸಿದೆ. ಇಂದು(ಜ.22) ನಡೆದ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.  

PREV
18
1.5 ವರ್ಷ ಕೃಷಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11ನೇ ಸುತ್ತಿನ ಸಭೆ ಪ್ರಮುಖಾಂಶ!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ರೈತ ಸಂಘಟೆಗಳ ಮುಖಂಡರ ಜೊತೆಗೆ 11ನೇ ಸುತ್ತಿನ ಮಾತುಕತೆ ನಡೆಸಿತು.

28

ಕಳೆದ 10 ಸುತ್ತಿನ ಮಾತುಕತೆಗಳಂತೆ 11ನೇ ಸುತ್ತಿನ ಸಭೆಯೂ ವಿಫಲಗೊಂಡಿದೆ. ರೈತ ಸಂಘಟನೆಗಳ ಬೇಡಿಕೆ ಒಂದೇ ಮಸೂದೆಯಲ್ಲಿ ಏನಿದೆಯೂ ಇಲ್ವೋ, ಮಸೂದೆಯನ್ನೇ ಹಿಂಪಡೆಯಿರಿ ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ. 

38

ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹಾಗೂ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಪಾಲ್ಗೊಂಡಿದ್ದರು.

48

ಕೇಂದ್ರ ಸರ್ಕಾರ ಇತ್ತೀಗೆ ಘೋಷಣೆ ಮಾಡಿದಂತೆ ಒಂದೂವರೆ ವರ್ಷ ಕೃಷಿ ಕಾಯ್ದೆ ತಡೆಹಿಡಿಯಲು ಬದ್ಧ ಎಂದು ಮತ್ತೆ ಪುನರುಚ್ಚರಿಸಿತು. ಆದರೆ ರೈತರು ಒಂದೂವರೆ ವರ್ಷದ ಆಫ್ ಬೇಡ ಮಸೂದೆ ಹಿಂಪಡೆಯಿರಿ ಎಂದು ಹೇಳಿದೆ.

58

ಮಸೂದೆಯಲ್ಲಿನ ಒಂದೊಂದೆ ಅಂಶಗಳನ್ನು ಚರ್ಚಿಸಲು ಸಿದ್ಧ. ಅದರಲ್ಲಿ ಯಾವುದಾದರು ತಿದ್ದುಪಡಿ ಅಗತ್ಯವಿದ್ದರೆ ಹೇಳಿ, ಅದನ್ನು ಮಾಡಲು ಸಿದ್ದ, ಸಂಪೂರ್ಣ ಮಸೂದೆಯಲ್ಲಿ ಇರುವ ತಪ್ಪೇನು ಎಂದು ಕೇಂದ್ರ ರೈತರನ್ನು ಕೇಳಿದೆ.

68

ಇದಕ್ಕೆ ರೈತ ಸಂಘಟನೆಗಳ ಮುಖಂಡರು, ಕಾಯ್ದೆಯಲ್ಲಿ ಯಾವ ಅಂಶ ಮಾರಕ ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸಿದ್ದಾರೆ. ಆದರೆ ಈ ಕಾಯ್ದೆ ಕಾರ್ಪೋರೆಟ್ ಕಂಪನಿಗಳ ಪರವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ಅಂಶ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿದೆ ಎಂದರೆ ಉತ್ತರ, ಕಾಯ್ದೆ ಹಿಂಪಡೆಯಿರಿ ಎಂದು ರೈತರು ಹೇಳಿದ್ದಾರೆ.

78

ಒಂದೂವರೆ ವರ್ಷ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ಒಪ್ಪಿಕೊಳ್ಳಲು ರೈತರು ತಯಾರಿಲ್ಲ. ಇದೀಗ ಕೇಂದ್ರ ಪ್ರಸ್ತಾಪ ಒಪ್ಪಿದರೆ ಮುಂದಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದಿದೆ. 

88

11 ಸುತ್ತಿನ ಮಾತುಕತೆ ಬಳಿಕ ರೈತರು ಇದೀಗ ಕೇಂದ್ರದ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪ ಒಪ್ಪಿಕೊಂಡರೆ ಮಾತ್ರ ಮುಂದಿನ ಮಾತುಕತೆ ನಡೆಯಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೈತರು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories