ಕೈ-ಕೈ ಹಿಡಿದು ಮಾತನಾಡಿದ ಮೋದಿ-ನಿತೀಶ್‌, ನಿರ್ಮಲಾ ಜೊತೆ ಸ್ಟ್ಯಾಲಿನ್‌ ಮಾತು..ಜಿ20 ಔತಣಕೂಟದಲ್ಲಿ ಕಂಡ ಚಿತ್ರಗಳು!

Published : Sep 11, 2023, 03:36 PM IST

ಜಿ20 ಶೃಂಗಸಭೆಯ ಅಂತ್ಯ ಎನ್ನುವಂತೆ ಭಾನುವಾರ ನಡೆದ ಅಧಿಕೃತ ಔತಣಕೂಟದಲ್ಲಿ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ರಾಜಕೀಯ ಲೆಕ್ಕಾಚಾರದ ಹಲವು ಚಿತ್ರಗಳು ಕಂಡಿವೆ.  

PREV
120
ಕೈ-ಕೈ ಹಿಡಿದು ಮಾತನಾಡಿದ ಮೋದಿ-ನಿತೀಶ್‌, ನಿರ್ಮಲಾ ಜೊತೆ ಸ್ಟ್ಯಾಲಿನ್‌ ಮಾತು..ಜಿ20 ಔತಣಕೂಟದಲ್ಲಿ ಕಂಡ ಚಿತ್ರಗಳು!

ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಜಿ20 ಗಣ್ಯರ ಅಧಿಕೃತ ಔತಣ ಕೂಟದಲ್ಲಿ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ವಿದೇಶಾಂಗ ಸಚಿವ ಜೈಶಂಕರ್‌ ಜೊತೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಮಾತು.

220

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ ಕ್ಷಣ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

320

ಸನಾತನ ಧರ್ಮ ಟೀಕೆ ಮಾಡಿದ ಕಾರಣಕ್ಕೆ ಸುದ್ದಿಯಲ್ಲಿರುವ ಉದಯನಿಧಿ ಸ್ಟ್ಯಾಲಿನ್‌ ಅವರ ತಂದೆ ಎಂಕೆ ಸ್ಟ್ಯಾಲಿನ್‌ ಅವರ ಜೊತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತು.

420

ಆಸ್ಟ್ರೇಲಿಯಾದ ಪ್ರಧಾನಿ ಅಂಥೋಣಿ ಅಲ್ಬನೀಸ್‌ ಹಾಗೂ ಅವರ ಪತ್ನಿ ಜೂಡಿ ಹೇಡನ್‌ ಅವರೊಂದಿಗೆ ಜಿ20 ಗಣ್ಯರ ಮಾತುಕತೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

520

ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಯೊಂದಿಗೆ ಜಿ20 ಮಹಿಳಾ ಗಣ್ಯರ ಮಾತು. ಅಂದಾಜು 300ಕ್ಕೂ ಅಧಿಕ ಅತಿಥಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು.

620

ಜಿ20 ಶೃಂಗಸಭೆ ಅಯೋಜನೆಯಾಗಿದ್ದ ಭಾರತ ಮಂಟಪದಲ್ಲಿಯೇ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು. ಜಪಾನ್‌ ಪ್ರಧಾನಿ ಫ್ಯೂಮಿಯೋ ಕಿಶಿದಾ ಪತ್ನಿ ಸೀರೆ ಧರಿಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು.

720

ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಅಜಯ್‌ ಬಂಗಾ ತಮ್ಮ ಪತ್ನಿ ರಿತು ಬಂಗಾ ಜೊತೆ ಔತಣ ಕೂಟಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪೂರಿ ಅವರ ಜೊತೆ ಕಾಣಿಸಿಕೊಂಡರು.

820

ತಮ್ಮ ಸರಳ ಸ್ವಭಾವದ ಕಾರಣದಿಂದಾಗಿ ಸುದ್ದಿಯಲ್ಲಿರುವ ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ಕೂಡ ಜಿ20 ಔತಣಕೂಟದಲ್ಲಿ ಭಾಗಿಯಾಗಿದ್ದರು.

920

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಔತಣ ಕೂಟದ ವೇಳೆ ವಿದೇಶಿ ಗಣ್ಯರೊಂದಿಗೆ ಮಾತುಕತೆ ನಡೆಸಿದರು. ಔತಣಕೂಟಕ್ಕಾಗಿ ಭಾರತದ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ದಪಡಿಸಲಾಗಿತ್ತು.

1020

ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪೀಯುಷ್‌ ಗೋಯೆಲ್‌ ಜೊತೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮಾತು. ರಿಷಿ ಸುನಕ್‌ ಪತ್ನಿ, ಅಕ್ಷತಾ ಮೂರ್ತಿ ಕೂಡ ಈ ವೇಳೆ ಉಪಸ್ಥಿತರಿದ್ದರು.

1120

ಔತಣಕೂಟದಲ್ಲಿ ಜಪಾನ್‌ ಪ್ರಧಾನಿಯ ಪತ್ನಿ ಹಾಗೂ ಜಪಾನ್‌ ದೇಶದ ನಿಯೋಗದ ಜೊತೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಾತುಕತೆ ನಡೆಸಿದರು.

1220

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಔತಣಕೂಟದಲ್ಲಿ ವಿವಿಧ ಗಣ್ಯರೊಂದಿಗೆ ಮಾತನಾಡಿದರು. ನಿರ್ಮಲಾ ಸೀತಾರಾಮನ್‌ ಜೊತೆ ಸುನಕ್‌ ಹೆಎಚ್ಚು ಹೊತ್ತು ಮಾತನಾಡಿದ್ದು ಕಂಡುಬಂತು.

1320

ರಾಷ್ಟ್ರಪತಿ ದ್ರೌಪದು ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಔತಣ ಕೂಟಕ್ಕೆ ಬಂದಾಗ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮೋದಿ ಅವರ ಕೈಕುಲುಕಿ ಸ್ವಾಗತಿಸಿದರು.

1420

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಮಾತುಕತೆ.

1520

ಜಿ20 ಔತಣಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ ಆಗಮಿಸಿದ ಬೇಳೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಕೈಮುಗಿದು ಸ್ವಾಗತಿಸಿದರು.

1620

ಆಸ್ಟ್ರೇಲಿಯಾದ ಪ್ರಧಾನಿ ಅಂಥೋಣಿ ಅಲ್ಭನೀಸ್‌ ಹಾಗೂ ಅವರ ಪತ್ನಿ ಜೋ ಹೇಡೆನ್‌ ಜೊತೆ ಸೆಲ್ಫಿಗೆ ಪೋಸ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ.

1720

ವಿಶ್ವಬ್ಯಾಂಕ್‌ನ ಅಧ್ಯಕ್ಷ ಅಜಯ್‌ ಬಂಗಾ, ಐಎಂಎಫ್‌ ಅಧ್ಯಕ್ಷೆ ಕ್ರಿಸ್ಟಲಿನಾ ಜಾರ್ಜಿವಾ ಜೊತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ.

1820

ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡಿಡೋಗೆ ಪ್ರಧಾನಿ ನರೇಂದ್ರ ಮೋದಿ ಕೈಹಿಡಿದು ಸ್ವಾಗತಿಸಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಇದ್ದರು.

1920

ಔತಣಕೂಟದಲ್ಲಿ ದೇಶವೊಂದರ ಪ್ರಧಾನಿಯ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾತನಾಡಿದ ವೈಖರಿ.

ಕೇರಳ ಕುಟ್ಟಿ ಲುಕ್ಕಲ್ಲಿ ಸನ್ನಿ ಲಿಯೋನ್, ಸ್ವಲ್ಪ ಸೆರಗು ಸರಿ ಹಾಕೊಳ್ಳಿ ಅಂದ್ರು ನೆಟ್ಟಿಗರು!

2020

ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸಕ್ಕು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯ ಆಪ್ತ ಮಾತುಕತೆ

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

Read more Photos on
click me!

Recommended Stories