ಮೋದಿ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ; ಕಾರಣ ಹೇಳಿದ ರಾಹುಲ್ ಗಾಂಧಿ!

First Published Dec 30, 2020, 8:51 PM IST

ರೈತ ಪ್ರತಿಭಟನೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರು ಮೋದಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದಕ್ಕೆ ಮೋದಿ ಇತಿಹಾಸವೇ ಕಾರಣ ಎಂದಿದ್ದಾರೆ. ಇಷ್ಟೇ ಅಲ್ಲ ರೈತರು ನಂಬಿಕೆ ಕಳೆದುಕೊಳ್ಳಲು ಕಾರಣವನ್ನು ರಾಹುಲ್ ಬಹಿರಂಗ ಪಡಿಸಿದ್ದಾರೆ. ಈ ಕಾರಣಗಳು ಇಲ್ಲಿವೆ.
 

ರೈತ ಪ್ರತಿಭಟನೆ ನಡುವೆ ಇಟಲಿಗೆ ಹಾರಿರುವ ರಾಹುಲ್ ಗಾಂಧಿ ಇದೀಗ ಇಟಲಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
undefined
ರೈತ ಪ್ರತಿಭಟನೆಗೆ ಪರವಾಗಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಯಾವುದೇ ಅಶ್ವಾಸನೆ, ಮಾತುಕತೆ ಮೇಲೆ ರೈತರಿಗೆ ನಂಬಿಕೆ ಇಲ್ಲ ಎಂದು ರಾಹುಲ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
undefined
ಆರಂಭದಲ್ಲಿ ಪ್ರಧಾನಿ ವಿದೇಶದಲ್ಲಿರು ಕಪ್ಪು ಹಣ ಭಾರತಕ್ಕೆ ಮರಳಿ ತಂದು ಎಲ್ಲರ ಖಾತೆಗೆ 15 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೆ ಅದು ಪೊಳ್ಳು ಭರವಸೆಯಾಗಿತ್ತು ಎಂದು ರಾಹುಲ್ ಹೇಳಿದ್ದಾರೆ.
undefined
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಭಾರತದಲ್ಲಿ ನಿರುದ್ಯೋಗ ತಾರಕಕ್ಕೇರಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
undefined
ಡಿಮಾನಿಟೈಸೇಶನ್ ವೇಳೆ ಪ್ರಧಾನಿ ಮೋದಿ ಕೇವಲ 50 ದಿನ ಸಮಯ ನೀಡಿ ಎಂದಿದ್ದರು. ಆದರೆ ವರ್ಷಗಳೇ ಉರುಳಿದರೂ ಆರ್ಥಿಕತೆ, ಡಿಮಾನಿಟೈಸೇಶನ್ ಪರಿಣಾಮ ಈಗಲೂ ಕಾಣುತ್ತಿದೆ ಎಂದಿದ್ದಾರೆ.
undefined
ಕೊರೋನಾವನ್ನು ಕೇವಲ 21 ದಿನದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಇತ್ತ ನಮ್ಮ ಪ್ರದೇಶ ಆಕ್ರಮಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಇದ್ಯಾವುದು ಆಗಿಲ್ಲ ಎಂದು ರಾಹುಲ್, ಮೋದಿಯನ್ನು ಕುಟುಕಿದ್ದಾರೆ.
undefined
ಮೋದಿಯ ಇದೇ ಇತಿಹಾಸದಿಂದ ರೈತರು ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಮೋದಿ ಈಗ ಏನೂ ಹೇಳಿದರೂ ನಂಬುವ ಪರಿಸ್ಥಿತಿಯಲ್ಲಿ ರೈತರು ಇಲ್ಲ ಎಂದು ರಾಹುಲ್ ಹೇಳಿದ್ದಾರೆ
undefined
ರೈತರ ಕುರಿತು ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಎಂದು ಇಟಲಿಯಿಂದ ಮೋದಿಗೆ ಕುಟುಕಿದ್ದಾರೆ.
undefined
click me!