ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಲು ರೈತರು ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆಯಂದ ಟ್ರಾಕ್ಟರ್ ರ‍್ಯಾಲಿನಡೆಸಲು ರೈತರಿಗೆ ಅನುಮತಿ ಸಿಕ್ಕಿದೆ.
ರೈತರ ಟ್ರಾಕ್ಟರ್ ರ‍್ಯಾಲಿ ಕುರಿತು ದೆಹಲಿ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಇದೀಗ ದೆಹಲಿ ಪೊಲೀಸರು ಟ್ರಾಕ್ಟರ್ ರ‍್ಯಾಲಿಗೆ ಅನುಮತಿ ನೀಡಿದ್ದಾರೆ.
ಅನುತಿ ಜೊತೆಗೆ ಕೆಲ ಸೂಚನೆಗಳನ್ನು ದೆಹಲಿ ಪೊಲೀಸರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಸಾಚಾರಕ್ಕೆ ಪ್ರಚೋದಿಸಬಾರದು ಎಂದಿದೆ. ಇತ್ತ ದೆಹಲಿ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಲು ಮುಂದಾಗಿದೆ.
ಕೆಲ ನಾಯಕರು, ಸರ್ಕಾರಿ ಅಧಿಕಾರಿಗಳು ಟ್ರಾಕ್ಟರ್ ರ‍್ಯಾಲಿಯಿಂದ ಅಪಾಯ ಹೆಚ್ಚಿದೆ. ಇದು ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಇದೆ. ಹೀಗಾಗಿ ಟ್ರಾಕ್ಟರ್ ರ‍್ಯಾಲಿ ತಡೆ ಹಿಡಿಯಬೇಕು ಎಂದಿತ್ತು.
ಕೇಂದ್ರ ಹಾಗೂ ರೈತರ ಜೊತೆಗಿನ 11ನೇ ಸುತ್ತಿನ ಮಾತುಕತೆ ವಿಫಲಗೊಂಡ ಬಳಿಕ ದೆಹಲಿ ಪೊಲೀಸರು ಟ್ರಾಕ್ಟರ್ ರ‍್ಯಾಲಿಗೆ ಅನುಮತಿ ನೀಡಿದ್ದಾರೆ.
11ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರ, ಕಾಯ್ದೆ ಒಂದೂವರೆ ವರ್ಷ ತಡೆ ಹಿಡಿಯುವುದಾಗಿ ಹೇಳಿತ್ತು. ಆದರೆ ರೈತರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು
ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ರೈತರ ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಇತ್ತ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಕಾರ್ಯ ಆರಂಭಿಸಿದೆ. ಕೃಷಿ ಮಸೂದೆಗಳ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.