DRDO Ghatak UCAV: ಭಾರತ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳಿಗೆ ಕೈಹಾಕಿದೆ. ಈಗ DRDO ಅತ್ಯಾಧುನಿಕ ಸ್ಟೆಲ್ತ್ ಡ್ರೋನ್ (UCAV) ಅಭಿವೃದ್ಧಿಗೆ ವೇಗ ನೀಡಿದೆ. ಪೈಲೆಟ್ ಬೇಕಿಲ್ಲ, ರಾಡಾರ್ ಕಣ್ಣಿಗೂ ಸಿಗೋಲ್ಲ, ಹೇಗಿದೆ ಗೊತ್ತಾ ಘಾತಕ್ ತಾಕತ್ತು?
ವಾಯುಪಡೆ ಸಾಮರ್ಥ್ಯ ಹೆಚ್ಚಿಸಲು ಮಹತ್ವದ ಯೋಜನೆಗೆ ಕೈಹಾಕಿದ ಭಾರತ!
ಭಾರತ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳಿಗೆ ಕೈಹಾಕಿದೆ. ಈಗಾಗಲೇ 36 ರಫೇಲ್ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸಿರುವ ಭಾರತೀಯ ವಾಯುಪಡೆ (IAF), ಮತ್ತಷ್ಟು 114 ರಫೇಲ್ ವಿಮಾನಗಳನ್ನು ಖರೀದಿಸಲು ಸುಮಾರು ₹3.25 ಲಕ್ಷ ಕೋಟಿ ಮೌಲ್ಯದ ಒಪ್ಪಂದದತ್ತ ಹೆಜ್ಜೆ ಇಟ್ಟಿದೆ. ಈ ಒಪ್ಪಂದ ಪೂರ್ಣಗೊಂಡರೆ ರಫೇಲ್ ವಿಮಾನಗಳ ಸಂಖ್ಯೆ 150ಕ್ಕೆ ಏರಲಿದೆ.
25
ಶತ್ರು ರಾಷ್ಟ್ರಗಳ ರಾಡಾರ್ ಕಣ್ಣಿಗೂ ಬೀಳಲ್ಲ!
ರಫೇಲ್ ಮತ್ತು ತೇಜಸ್ ಯುದ್ಧ ವಿಮಾನಗಳ ಜೊತೆಗೆ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈಗ ಅತ್ಯಾಧುನಿಕ ಸ್ಟೆಲ್ತ್ ಡ್ರೋನ್ (UCAV) ಅಭಿವೃದ್ಧಿಗೆ ವೇಗ ನೀಡಿದೆ. ಈ ಡ್ರೋನ್‌ಗಳನ್ನು ಶತ್ರು ರಾಷ್ಟ್ರಗಳ ರಾಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸಿಕೊಂಡು ದಾಳಿ ನಡೆಸುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
35
₹39 ಸಾವಿರ ಕೋಟಿ ಅವಕಾಶ
ಭಾರತೀಯ ವಾಯುಪಡೆಯ ಈ ಯೋಜನೆಯಿಂದ ದೇಶೀಯ ರಕ್ಷಣಾ ಉದ್ಯಮಕ್ಕೆ ಸುಮಾರು ₹39,000 ಕೋಟಿ ಮೌಲ್ಯದ ಅವಕಾಶ ಸಿಗುವ ನಿರೀಕ್ಷೆ ಇದೆ.. ಯೋಜನೆಯ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳಿಗೂ ಅವಕಾಶ ನೀಡಲಾಗುತ್ತಿದೆ.
ಈ ಯೋಜನೆಗೆ SWIFT (Stealth Wing Flying Testbed) ತಂತ್ರಜ್ಞಾನ ಅಡಿಪಾಯವಾಗಿದೆ. ಇದರ ಮೂಲಕ ಸ್ವಯಂಚಾಲಿತ ಹಾರಾಟ, ಕಡಿಮೆ ರಾಡಾರ್ ಪತ್ತೆ ಹಾಗೂ ಆಂತರಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಂತಹ ಹಲವು ಪ್ರಮುಖ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಈ ತಂತ್ರಜ್ಞಾನ ವಿಮಾನದ ರಾಡಾರ್ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಮಾಡುತ್ತೆ. ಅಲ್ಲದೆ ರಕ್ಷಣೆ ಇರುವ ಶತ್ರು ವಾಯುಪ್ರದೇಶದಲ್ಲೂ ದಾಳಿ ನಡೆಸುವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲು ವಿನ್ಯಾಸಗೊಳಿಸಲಾಗುತ್ತಿದೆ.
55
ರಫೇಲ್-ತೇಜಸ್‌ಗಿಂತ ಸ್ಟೆಲ್ತ್ ಡ್ರೋನ್ ಯೋಜನೆ ಅಪಾಯಕಾರಿ?
ಈ ಯೋಜನೆ ಹಿಂದೆ 'ಘಾತಕ್' (Ghatak) ಎಂದು ಕರೆಯಲಾಗುತ್ತಿತ್ತು. ಆರಂಭದಲ್ಲಿ ಸುಮಾರು ₹6,000 ಕೋಟಿ ವೆಚ್ಚದಲ್ಲಿ ಆರು ಮೂಲಮಾದರಿಗಳನ್ನು ನಿರ್ಮಿಸಲಾಗುತ್ತದೆ. ಬಳಿಕ 60ಕ್ಕೂ ಹೆಚ್ಚು ಸ್ಟೆಲ್ತ್ ಡ್ರೋನ್‌ಗಳನ್ನು ನಿರ್ಮಿಸಿ ನಾಲ್ಕು ಸ್ಕ್ವಾಡ್ರನ್‌ಗಳನ್ನು ರಚಿಸುವ ಗುರಿಯಿದೆ.
ಯುದ್ಧದಲ್ಲಿ ಹೇಗೆ ಬಳಸಲಾಗುತ್ತದೆ?
ಈ ಸ್ಟೆಲ್ತ್ ಡ್ರೋನ್‌ಗಳು Su-30MKI ಮತ್ತು ಭವಿಷ್ಯದ AMCA ಯುದ್ಧ ವಿಮಾನಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಅವು ಶತ್ರುಗಳ ಮೇಲೆ ದಾಳಿ, ಮಾಹಿತಿ ಸಂಗ್ರಹಣೆ ಹಾಗೂ ಎಲೆಕ್ಟ್ರಾನಿಕ್ ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ