ಏರೋ ಇಂಡಿಯಾ 2021: ಭಾರತಕ್ಕೆ ಎಫ್‌-18 ನೀಡಲು ಸಿದ್ಧ, ಅಮೆರಿಕ

Kannadaprabha News   | Asianet News
Published : Feb 03, 2021, 09:13 AM ISTUpdated : Feb 03, 2021, 12:43 PM IST

ಬೆಂಗಳೂರು(ಫೆ.03): ಕೋವಿಡ್‌ ಸವಾಲಿನ ನಡುವೆಯೂ ಭಾರತ ಆಯೋಜಿಸಿರುವ ‘ಏರೋ ಇಂಡಿಯಾ 2021’ ಪ್ರದರ್ಶನದಲ್ಲಿ ಅಮೆರಿಕ ಪಾಲ್ಗೊಳ್ಳುತ್ತಿರುವುದು ರಕ್ಷಣಾ ಮತ್ತು ಕಾರ್ಯತಂತ್ರ ಕ್ಷೇತ್ರದಲ್ಲಿ ಉಭಯ ದೇಶಗಳ ಗಟ್ಟಿಬಾಂಧವ್ಯಕ್ಕೆ ಸಾಕ್ಷಿ. ಭಾರತಕ್ಕೆ ಅಮೆರಿಕ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭಾರತದ ಅಮೆರಿಕ ರಾಯಭಾರಿ ಕಚೇರಿಯ ಪ್ರಭಾರಿ ರಾಯಭಾರಿ ಡಾನ್‌ ಹೆಫ್ಲಿನ್‌ ಹೇಳಿದ್ದಾರೆ.

PREV
15
ಏರೋ ಇಂಡಿಯಾ 2021: ಭಾರತಕ್ಕೆ ಎಫ್‌-18 ನೀಡಲು ಸಿದ್ಧ, ಅಮೆರಿಕ

ಏರ್‌ ಶೋದಲ್ಲಿ ಅಮೆರಿಕದ ಭಾಗವಹಿಸುವಿಕೆ ಸಂಬಂಧ ನಗರದಲ್ಲಿ ಬುಧವಾರ ಪೂರ್ವಭಾವಿ ಸುದ್ದಿಗೋಷ್ಠಿ ನಡೆಸಿದ ಡಾನ್‌ ಹೆಫ್ಲಿನ್‌ ಅವರು, ರಕ್ಷಣಾ ಹಾಗೂ ಯುದ್ಧ ಕಾರ್ಯತಂತ್ರ ವಿಭಾಗದಲ್ಲಿ ಭಾರತ ಮತ್ತು ಅಮೆರಿಕ ಉತ್ತಮ ಸಹಭಾಗಿತ್ವ ಹಾಗೂ ಭಾರೀದಾರ ರಾಷ್ಟ್ರಗಳಾಗಿವೆ. ಇದಕ್ಕೆ ಸಾಕ್ಷಿಯಾಗಿ ಅಮೆರಿಕ ಏರೋ ಇಂಡಿಯಾದಲ್ಲಿ ಭಾಗಿಯಾಗುತ್ತಿದೆ. ರಕ್ಷಣಾ ಕ್ಷೇತ್ರದ ನಂಬಿಕಸ್ಥ ಪಾಲುದಾರ ರಾಷ್ಟ್ರವಾದ ಭಾರತಕ್ಕೆ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ನೀಡಲು ಅಮೆರಿಕ ಸಿದ್ಧವಿದೆ ಎಂದು ಅವರು ಹೇಳಿದರು.

25

ಅಮೆರಿಕದ ಅನೇಕ ರಕ್ಷಣಾ ಸಂಸ್ಥೆಗಳು ಭಾರತದಲ್ಲಿ ಉತ್ಪಾದನೆ ನಡೆಸಲು ಮುಂದೆ ಬಂದಿವೆ. ಆತ್ಮ ನಿರ್ಭರ ಯೋಜನೆ ಜಾರಿ ಮೂಲಕ ಭಾರತದ ರಕ್ಷಣಾ ಸಾಮರ್ಥ್ಯ ಸಾಕಷ್ಟು ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

35

ರಷ್ಯಾದಿಂದ ಎಸ್‌-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ಮುಂದಾದರೆ ಯುಎಸ್‌ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾನ್‌ ಹೆಫ್ಲಿನ್‌, ಈ ಖರೀದಿ ವ್ಯವಹಾರ ಅಮೆರಿಕದ ಗಮನಕ್ಕೆ ಬಂದಿದೆ. ನಾವು ರಕ್ಷಣಾ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಸಂಪೂರ್ಣ ನಿರ್ಬಂಧ ಹೇರುವ ಪ್ರಸ್ತಾಪವನ್ನು ಯಾವತ್ತೂ ಮಾಡಿಲ್ಲ. ಪ್ರಕರಣ ಆಧಾರಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

45

ಯುಎಸ್‌ಎನ ಅಂತಾರಾಷ್ಟ್ರೀಯ ವ್ಯವಹಾರಗಳ ವಾಯುಪಡೆಯ ಉಪ ಅಧೀನ ಕಾರ್ಯದರ್ಶಿ ಕೆಲ್ಲಿ ಎಲ್‌ ಸೆಬೋಲ್ಟ್‌ ಮಾತನಾಡಿ, ಅಮೆರಿಕದ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನಗಳಾದ ಎಫ್‌-18, ಎಫ್‌-15, ಎಫ್‌-21ಗಳನ್ನು ಭಾರತದ ವಾಯುಪಡೆಗೆ ನೀಡಲು ಸಿದ್ಧ ಎಂದು ಪ್ರಕಟಿಸಿದರು.

55

ಹಾಗೆಯೇ ಅಮೆರಿಕದಲ್ಲಿ ಸರ್ಕಾರ ಬದಲಾಗಿದ್ದರೂ ಭಾರತದೊಂದಿಗೆ ಸಂಬಂಧ ಇನ್ನಷ್ಟುಬಲಗೊಳ್ಳಲಿದೆ. ಈ ಹಿಂದೆ ಬರಾಕ್‌ ಒಬಾಮಾ ನೇತೃತ್ವದ ಸರ್ಕಾರ ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಿತ್ತು. ಆ ಬಳಿಕ ಡೊನಾಲ್ಡ್‌ ಟ್ರಂಪ್‌ ಸರ್ಕಾರವು ಸಂಬಂಧವನ್ನು ಇನ್ನಷ್ಟು ಆಳಕ್ಕೆ ಇಳಿಸಿತ್ತು. ಹೊಸ ಸರ್ಕಾರ ಇದೇ ನೀತಿಯನ್ನು ಮುಂದುವರಿಸುವುದರೊಂದಿಗೆ ಈ ಸಂಬಂಧಕ್ಕೆ ಇನ್ನಷ್ಟು ವೈವಿಧ್ಯತೆಯನ್ನು ತುಂಬುವ ಬಯಕೆ ಹೊಂದಿದೆ ಎಂದು ಕೆಲ್ಲಿ ಸೆಬೋಲ್ಟ್‌ ತಿಳಿಸಿದರು. ಅಮೆರಿಕದ ವಾಯಪಡೆಯ ಲೆಫ್ಟಿನೆಂಟ್‌ ಜನರಲ್‌ ಡೇವಿಡ್‌ ಕ್ರುಮ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

click me!

Recommended Stories