ಮಹಾಕುಂಭದಲ್ಲಿ ಹೃದಯಾಘಾತಕ್ಕೊಳಗಾಗಿದ್ದ 100ಕ್ಕೂ ಹೆಚ್ಚು ಭಕ್ತರ ಪ್ರಾಣ ಉಳಿಸಿದ ವೈದ್ಯರು

Published : Jan 22, 2025, 01:26 PM IST

ಮಹಾಕುಂಭ ಮೇಳದಲ್ಲಿ 100ಕ್ಕೂ ಹೆಚ್ಚು ಹೃದಯಾಘಾತಕ್ಕೊಳಗಾದ ಭಕ್ತರಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಭಕ್ತರಿಗಾಗಿ ಕ್ಲಿನಿಕ್‌ಗಳನ್ನು ಸ್ಥಾಪಿಸಿದ್ದು, 1,00,0998 ಜನರು ಒಪಿಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

PREV
15
ಮಹಾಕುಂಭದಲ್ಲಿ ಹೃದಯಾಘಾತಕ್ಕೊಳಗಾಗಿದ್ದ  100ಕ್ಕೂ ಹೆಚ್ಚು ಭಕ್ತರ ಪ್ರಾಣ ಉಳಿಸಿದ ವೈದ್ಯರು

ಮಹಾಕುಂಭದಲ್ಲಿ ಹೃದಯಾಘಾತಕ್ಕೊಳಗಾಗಿದ್ದ 100ಕ್ಕೂ ಅಧಿಕ ಭಕ್ತರ ಪ್ರಾಣ ಉಳಿಸಲಾಗಿದೆ. ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ಉತ್ತರ ಪ್ರದೇಶ ಸರ್ಕಾರದಿಂದ ಕ್ಲಿನಿಕ್ ಸಹ ಆರಂಭಿಸಲಾಗಿತ್ತು.

25

ಭಾರತ ಮತ್ತು ವಿದೇಶದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿರುವ ಭಕ್ತರು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಮಧ್ಯಪ್ರದೇಶ ಮೂಲದ ಇಬ್ಬರು ಭಕ್ತರು ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮಹಾಕುಂಭ ಮೇಳದ ನೋಡಲ್ ವೈದ್ಯಕೀಯ ಸಂಸ್ಥೆಯ ವೈದ್ಯ ಗೌರವ್ ದುಬೆ ಹೇಳಿದ್ದಾರೆ.

35

ಮಹಾಕುಂಭ ಮೇಳದ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ 10 ಹಾಸಿಗೆಗಳ ಐಸಿಯು ಸಿದ್ಧಪಡಿಸಲಾಗಿದೆ. ರೋಗಿಗಳ ಮೇಲೆ ನಿಗಾ ಇರಿಸಲು ಎಐ ಆಧಾರಿತ ಕ್ಯಾಮೆರಾಗಳನ್ನು ಉತ್ತರ ಪ್ರದೇಶ ಸರ್ಕಾರ ಬಳಕೆ ಮಾಡಿಕೊಂಡಿದೆ. ದಂತ ಶಸ್ತ್ರಚಿಕಿತ್ಸಕರು, ಆರ್ಥೋ, ಮಗು, ಸ್ತ್ರೀರೋಗ ತಜ್ಞ ಮತ್ತು ಮಕ್ಕಳ ತಜ್ಞರನ್ನು ಸಹ ಸೆಂಟ್ರಲ್ ಆಸ್ಪತ್ರೆಗೆ ನಿಯೋಜಿಸಲಾಗಿದೆ.

45

ಇದುವರೆಗೂ ಹೃದಯಾಘಾತಕ್ಕೆ ಒಳಗಾಗಿದ್ದ 100 ರೋಗಿಗಳು ಸೇರಿದಂತೆ 183  ಜನರಿಗೆ ಚಿಕಿತ್ಸೆ ನೀಡಲಾಗಿದೆ. ತಾತ್ಕಾಲಿಕ ಐಸಿಯುನಲ್ಲಿ 580 ಸಣ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. 1,00,0998 ಜನರು ಒಪಿಡಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಹಾಕುಂಭದಲ್ಲಿ 1,70,727 ರಕ್ತಪರೀಕ್ಷೆ ನಡೆಸಲಾಗಿದೆ.

55

ಮಧ್ಯಪ್ರದೇಶದ ಇಬ್ಬರು ಭಕ್ತರಿಗೆ ಎದೆನೋವು ಕಾಣಿಸಿಕೊಂಡಿದ್ದಾಗ ಡಾ.ಎಸ್.ಕೆ.ಪಾಂಡೆ ನೇತೃತ್ವದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದೆ. ಹನುಮಗಂಜ್ ಮೂಲದ 105 ವರ್ಷದ ಬಾಬಾ ರಾಮ್ ಜೇನ್ ದಾಸ್ ಅವರು ಸಹ ಹೊಟ್ಟೆ ನೋವಿನ ಸಮಸ್ಯೆಯಿಂದ ಸೆಂಟ್ರಲ್ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಂಡಿದ್ದರು.

Read more Photos on
click me!

Recommended Stories