ಭಾರತದಲ್ಲಿ ಸಸ್ಯಾಹಾರ ಸೇವನೆಯ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಾಂಸಾಹಾರ ಸೇವನೆಯ ಮಾದರಿಗಳನ್ನು ಬಹಿರಂಗಪಡಿಸುತ್ತದೆ.
ಕೇವಲ ಸಸ್ಯಹಾರ ಸೇವನೆ ಮಾಡುವ ದೇಶದ ಪ್ರಪಂಚದ ಯಾವುದೇ ಮೂಲೆಯಲ್ಲಿಲ್ಲ. ಮಾಂಸ, ಮೀನು ಮತ್ತು ಮೊಟ್ಟೆ ಸೇವಿಸುವ ಜನರು ಎಲ್ಲಾ ಭಾಗದಲ್ಲಿಯೂ ಕಂಡು ಬರುತ್ತಾರೆ. ವೈವಿದ್ಯಮ ಆಹಾರ ಅಂದ್ರೆ ಎಲ್ಲರಿಗೂ ನೆನಪಾಗುವ ದೇಶವೇ ಭಾರತ. ಇಲ್ಲಿ ಎಲ್ಲಾ ರೀತಿಯ ಆಹಾರ ಸೇವನೆ ಮಾಡುವ ಜನರು ಸಿಗುತ್ತಾರೆ.
25
ಭಾರತದಲ್ಲಿ ಸಸ್ಯಹಾರ ಸೇವನೆ ಮಾಡುವ ಜನರ ಸಂಖ್ಯೆ ಎಷ್ಟಿದೆ ಗೊತ್ತಾ? ಭಾರತದ ಈ ಒಂದು ರಾಜ್ಯದಲ್ಲಿ ಶೇ.80ರಷ್ಟು ಜನರು ಸಸ್ಯಹಾರ ಸೇವಿಸುತ್ತಾರೆ. ಆದ್ರೆ ಇನ್ನೊಂದು ರಾಜ್ಯದಲ್ಲಿ ಶೇ.1ಕ್ಕಿಂತಲೂ ಕಡಿಮೆ ಜನರು ಸಸ್ಯಹಾರಿಗಳಿದ್ದಾರೆ.
35
2019-21ರ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ, ಗ್ರಾಮೀಣ ಭಾಗದಲ್ಲಿ ಶೇ. 57.3 ರಷ್ಟು ಪುರುಷರು ಮತ್ತು ಶೇ. 45.1 ರಷ್ಟು ಮಹಿಳೆಯರು ವಾರಕ್ಕೆ ಒಮ್ಮೆಯಾದರು ಕೋಳಿ ಅಥವಾ ಮೀನು ಅಥವಾ ಇತರೆ ಮಾಂಸಾಹಾರ ತಿನ್ನುತ್ತಾರೆ. ನಗರಗಳಲ್ಲಿ, ಶೇ. 60 ರಷ್ಟು ಪುರುಷರು ಮತ್ತು ಶೇ. 50.8 ರಷ್ಟು ಮಹಿಳೆಯರು ವಾರಕ್ಕೊಮ್ಮೆಯಾದರೂ ಮಾಂಸಾಹಾರ ಸೇವಿಸುತ್ತಾರೆ.
45
ಪ್ರಪಂಚದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳು ಇರುವ ದೇಶಗಳಲ್ಲಿ ಭಾರತ ಸಹ ಒಂದಾಗಿದೆ. ಆದರೆ ಇಲ್ಲಿ ಕೆಲವು ರಾಜ್ಯಗಳಲ್ಲಿ 99% ಜನರು ಮಾಂಸಾಹಾರಿಗಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳು ರಾಜಸ್ಥಾನದಲ್ಲಿ ಕಂಡುಬರುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ರಾಜಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ಸಸ್ಯಹಾರಿಗಳಿದ್ದಾರೆ.
55
ರಾಜಸ್ಥಾನದ ಜನರು ದಾಲ್, ಅನ್ನ, ರೊಟ್ಟಿ, ತರಕಾರಿಗಳು ಮತ್ತು ಹಾಲಿನ ಉತ್ಪನ್ನಗಳನ್ನು ಅಧಿಕವಾಗಿ ಬಳಸುತ್ತಾರೆ. ನಾಗಾಲ್ಯಾಂಡ್ ರಾಜ್ಯದಲ್ಲಿಯ ಸಸ್ಯಹಾರಿಗಳ ಸಂಖ್ಯೆ ಶೇ.1ಕ್ಕಿಂತ ಕಡಿಮೆ. ಇಲ್ಲಿಯ ಶೇ.99ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ.