ರಕ್ಷಾ ಬಂಧನ 2023: ಪ್ರಧಾನಿ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದ ವಿದ್ಯಾರ್ಥಿನಿಯರು!

Published : Aug 30, 2023, 10:49 PM IST

ಬಾಲಕಿಯರು ಮೋದಿ ಅವರಿಗೆ ರಾಖಿ ಕಟ್ಟುತ್ತಿರುವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಈ ನಡುವೆ ಪ್ರಧಾನಿ ಮೋದಿ ಅವರು ರಾಷ್ಟ್ರದ ಜನತೆಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ. 

PREV
18
ರಕ್ಷಾ ಬಂಧನ 2023: ಪ್ರಧಾನಿ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದ ವಿದ್ಯಾರ್ಥಿನಿಯರು!

ನವದೆಹಲಿ (ಆ.30): ದೇಶಾದ್ಯಂತ ಬುಧವಾರ ರಕ್ಷಾ ಬಂಧನ ಆಚರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದ್ಯಾರ್ಥಿನಿಯರು ‘ರಾಖಿ’ ಕಟ್ಟಿದ್ದಾರೆ. 

28

ಪ್ರತಿ ವರ್ಷ ಈ ಹಬ್ಬದ ಸಂಧರ್ಭದಲ್ಲಿ ಮೋದಿ ಅವರನ್ನು ಭೇಟಿಯಾಗುವ ಅನೇಕ ಮಕ್ಕಳು ಮತ್ತು ಮಹಿಳೆಯರು, ಅವರಿಗೆ ರಾಖಿ ಕಟ್ಟುವ ಆಚರಣೆ ಈ ವರ್ಷವೂ ಮುಂದುವರೆದಿದೆ.

38

ಬಾಲಕಿಯರು ಮೋದಿ ಅವರಿಗೆ ರಾಖಿ ಕಟ್ಟುತ್ತಿರುವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಈ ನಡುವೆ ಪ್ರಧಾನಿ ಮೋದಿ ಅವರು ರಾಷ್ಟ್ರದ ಜನತೆಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ. 

48

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಸಹೋದರ ಮತ್ತು ಸಹೋದರಿಯರ ನಡುವಿನ ಅವಿನಾಭಾವ ವಿಶ್ವಾಸ ಮತ್ತು ಪ್ರೀತಿಗೆ ಸಮರ್ಪಿತರಾಗಿರುವ ಈ ಪವಿತ್ರ ಹಬ್ಬವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. 

58

ಇದು ಜನರ ಜೀವನದಲ್ಲಿ ವಾತ್ಸಲ್ಯ ಮತ್ತು ಸಾಮರಸ್ಯದ ಭಾವನೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

68

ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರಬಾಕಿ. ಇದರ ಬೆನ್ನಲ್ಲೇ  ಹಲವು ಸಂಸ್ಥೆಗಳು ಸಮೀಕ್ಷಾ ವರದಿಗಳನ್ನು ಬಿಡುಗಡೆ ಮಾಡುತ್ತಿದೆ.  

78

ಇದೀಗ Pew ಸಂಶೋಧನಾ ಸಂಸ್ಥೆ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಶೇಕಡಾ 80 ರಷ್ಟು ಭಾರತೀಯರು ಪ್ರಧಾನಿ ಮೋದಿಯೇ ಅಚ್ಚು ಮೆಚ್ಚು ಎಂದಿದ್ದಾರೆ.  3ನೇ ಬಾರಿ ಪ್ರಧಾನಿ  ಪಟ್ಟಅಲಂಕರಿಸಲು  ಮೋದಿಗೆ ಬೆಂಬಲಿಸಿದ್ದಾರೆ.

88

Pew ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇಕಡಾ 80 ರಷ್ಟು ಭಾರತೀಯರು ಪ್ರಧಾನಿ ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories