ತೀವ್ರ ಕುತೂಹಲ ಮೂಡಿಸಿದ್ದ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸದ್ಯ ಮಿನಿ ಮಫ್ಲರ್ ಮ್ಯಾನ್ ನೆಟ್ಟಿಗರ ಮನ ಕದ್ದಿದ್ದಾನೆ.
ದೆಹಲಿ ಚುನಾವಣಾ ಮತದಾನ ಎಣಿಕೆ ಕಾರ್ಯ ಆರಂಭಕ್ಕೂ ಮುನ್ನ ಪುಟ್ಟ ಪುಟ್ಟ ಮಕ್ಕಳು ಸಿಎಂ ಅರವಿಂದ್ ಕೇಜ್ರೀವಾಲ್ ರನ್ನು ಭೇಟಿಯಾಗಿದ್ದಾರೆ.
ಈ ಮಕ್ಕಳಲ್ಲಿ ಮಫ್ಲರ್, ಟೋಪಿ, ಕನ್ನಡಕ ಹಾಗೂ ಆಪ್ ಪಕ್ಷದ ಟೋಪಿ ಹಾಕಿ ಕೇಜ್ರೀವಾಲ್ ರಂತೆ ವೇಷ ತೊಟ್ಟು ಬಂದ ಪುಟ್ಟ ಕಂದ ವಿಶೇಷವಾಗಿ ಗಮನ ಸೆಳೆದಿದ್ದಾನೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚುನಾವಣಾ ಫಲಿತಾಂಶಕ್ಕಿಂತ ಈ ಮಫ್ಲರ್ ಮ್ಯಾನ್ ಹೆಚ್ಚು ಸದ್ದು ಮಾಡುತ್ತಿದ್ದಾನೆ.
ಈ ಪುಟ್ಟ ಕಂದನ ಕ್ಯೂಟ್ ನೆಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ನು ತನ್ನಂತೆಯೇ ವೇಷ ಧರಿಸಿ ಬಂದಿದ್ದ ಈ ಮಫ್ಲರ್ ಮ್ಯಾನ್ ಕಂಡು ಸಿಎಂ ಅರವಿಂದ್ ಕೇಜ್ರೀವಾಲ್ ಸಂತಸಗೊಂಡಿದ್ದಾರೆ.
ಪುಟ್ಟ ಕಂದನನ್ನು ಎತ್ತಿ ಮುದ್ದಾಡಿದ್ದಾರೆ
ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಪುಟ್ಟ ಕೇಜ್ರೀವಾಲ್ ಫೋಟೋ ಟ್ವೀಟ್ ಮಾಡಲಾಗಿದೆ.
ಅರವಿಂದ್ ಕೇಜ್ರೀವಾಲ್ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಬಟ್ಟೆಗಳಲ್ಲೇ ಈ ಪುಟ್ಟ ಬಾಲಕ ಕಾಣಿಸಿಕೊಂಡಿದ್ದಾನೆ.
ಸದ್ಯ ದೆಹಲಿ ಚುನಾವಣೆಯಲ್ಲಿ ಆಪ್ 'ಪೊರಕೆ' ಧೂಳೆಬ್ಬಿಸಿದ್ದು, ಕೇಜ್ರೀವಾಲ್ ಮತ್ತೆ ಸಿಎಂ ಆಗುವುದು ಖಚಿತವಾಗಿದೆ.