ದೆಹಲಿ ಸ್ಫೋಟಕ್ಕೆ 10 ಸಾವು ಹಲವರಿಗೆ ಗಾಯ, ಬ್ಲಾಸ್ಟ್ ತೀವ್ರತೆ ಸಾರಿ ಹೇಳುತ್ತಿದೆ ಫೋಟೋಸ್

Published : Nov 10, 2025, 09:07 PM IST

ದೆಹಲಿ ಸ್ಫೋಟಕ್ಕೆ 10 ಸಾವು ಹಲವರಿಗೆ ಗಾಯ, ಬ್ಲಾಸ್ಟ್ ತೀವ್ರತೆ ಸಾರಿ ಹೇಳುತ್ತಿದೆ ಫೋಟೋಸ್, ಭೀಕರ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಬಳಿ ಪಾರ್ಕ್ ಮಾಡಿದ್ದ ಎರಡು ಕಾರು ಸ್ಫೋಟಗೊಂಡಿದೆ. ಘಟನೆಯ ತೀವ್ರತೆಯನ್ನು ಫೋಟೋಗಳು ಹೇಳುತ್ತಿದೆ.

PREV
16
ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ

ದೆಹಲಿ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಿದ್ದ ಎರಡು ಕಾರುಗಳು ಸ್ಫೋಟಗೊಂಡು ಭಾರಿ ಅನಾಹುತ ಸಂಭವಿಸಿದೆ. ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಇನ್ನು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

26
ಭಯೋತ್ಪಾದಕ ಕೃತ್ಯದ ಶಂಕೆ

ದೆಹಲಿ ಸ್ಫೋಟದ ಹಿಂದೆ ಭಯೋತ್ಪಾದಕ ಕೃತ್ಯದ ಶಂಕೆಗಳು ವ್ಯಕ್ತವಾಗಿದೆ. ಎರಡು ಕಾರು ಸ್ಫೋಟಗೊಂಡ ಪರಿಣಾಮ ಹತ್ತಿರದ 8 ಕಾರುಗಳು ಸುಟ್ಟು ಭಸ್ಮವಾಗಿದೆ. ಹಲವು ದೇಹಗಳು ಛಿದ್ರವಾಗಿದೆ. ಶಾಂತವಾಗಿದ್ದ ದೆಹಲಿಯಲ್ಲಿ ನಡೆದ ಸ್ಫೋಟಕ್ಕೆ ಭಾರತವೇ ಬೆಚ್ಚಿ ಬಿದ್ದಿದೆ.ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

36
ಹರ್ಯಾಣ ನೋಂದಣಿ ಕಾರು

ಕೆಲ ವರದಿಗಳ ಪ್ರಕಾರ ಸಿಗ್ನಲ್‌ ಪಕ್ಕದಲ್ಲೇ ಕಾರು ಸ್ಫೋಟಗೊಂಡಿದೆ. ಮೊದಲು ಸ್ಫೋಟಗೊಂಡ ಕಾರು ಹರ್ಯಾಣ ನೋಂದಣಿಯ ಇಕೋ ಕಾರು ಎಂದು ವರದಿಯಾಗಿದೆ. ನಿಧಾನವಾಗಿ ತೆರಳುತ್ತಿದ್ದ ವೇಳೆ ಕಾರು ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಸ್ಫೋಟ ಪ್ಲಾನ್ ಮಾಡಿ ಮಾಡಿರುವ ಅನುಮಾನಗಳು ಹೆಚ್ಚಾಗುತ್ತಿದೆ.

46
ಸ್ಥಳಕ್ಕೆ ಎನ್ಐಎ ಅಧಿಕಾರಿಗಳು ದೌಡು

ಭಯೋತ್ಪಾದಕ ಕೃತ್ಯದ ಶಂಕೆ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಸ್ಥಳದಲ್ಲಿದೆ. ಸ್ಫೋಟಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಫರೀದಾಬಾದ್‌ನಲ್ಲಿ ಸ್ಫೋಟಕ ಪತ್ತೆ ಘಟನೆ ಬೆನ್ನಲ್ಲೇ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳಕ್ಕೆ ಎನ್ಐಎ ಅಧಿಕಾರಿಗಳು ದೌಡು

56
ಹಲವು ನಗರದಲ್ಲಿ ಹೈ ಅಲರ್ಟ್

ದೆಹಲಿ ಸ್ಫೋಟದಿಂದ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ತಪಾಸಣೆಗಳು ತೀವ್ರಗೊಂಡಿದೆ. ಭದ್ರತಾ ಪಡೆಗಳು ಪ್ರತಿ ವಾಹನಗಳ ತಾಪಸಣೆ ಆರಂಭಿಸಿದ್ದಾರೆ. ಬೆಂಗಳೂರು, ಮುಂಬೈ ನಗರ ಸೇರಿದಂತೆ ಹಲವು ನಗರಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಹಲವು ನಗರದಲ್ಲಿ ಹೈ ಅಲರ್ಟ್

66
7 ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಎರಡು ಕಾರು ಸ್ಫೋಟ, 10ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾದ ಕಾರಣ ಬೆಂಕಿ ಜ್ವಾಲೆ ಹೆಚ್ಚಾಗಿತ್ತು. ಹೀಗಾಗಿ 7 ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ದೆಹಲಿ ಸ್ಫೋಟದಿಂದ ಭಾರತವೇ ಬೆಚ್ಚಿ ಬಿದ್ದಿದೆ. ಹಲವೆಡೆ ಅಲರ್ಟ್ ಘೋಷಣೆಯಾಗಿದೆ.

7 ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

Read more Photos on
click me!

Recommended Stories