ಗ್ರೇಟಾ ಥನ್ಬರ್ಗ್ ರೈತ ಪ್ರತಿಭಟನಾಕಾರರಿಗೆ ಟೂಲ್ ಕಿಟ್ ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದಾರೆ. ರೈತರ ಹೆಸರಿನಲ್ಲಿ ಭಾರತವನ್ನು ಕೆಣಕಲು ಹಾಗೂ ಭಾರತ ವಿರೋಧಿ ಪಿತೂರಿಗೆ ಸಂಚು ರೂಪಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಗ್ರೇಟಾ ಧನ್ಬರ್ಗ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಗ್ರೇಟಾ ಥನ್ಬರ್ಗ್ ಮಾಡಿದ ಟ್ವೀಟ್ ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಭಾರತ ವಿರೋಧಿ ಅಲೆ ಸಷ್ಟಿಸುವ ಕಾರ್ಯ ಹೇಗೆ ನಡೆಯುತ್ತಿದೆ ಅನ್ನೋ ಮಾಹಿತಿಯನ್ನು ಈ ಪೋಸ್ಟ್ ಬೆಳಕು ಚೆಲ್ಲುತ್ತಿದೆ. ಆದರೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಥನ್ಬರ್ಗ್ ಟೂಲ್ ಕಿಟ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ
ಗ್ರೇಟಾ ಥನ್ಬರ್ಗ್ ಮಾಡಿದ ಟೂಲ್ ಕಿಟ್ ಪೋಸ್ಟ್, 8 ಪುಟಗಳನ್ನೊಳಗೊಂಡಿದೆ. ಈ ಕೈಪಿಯಲ್ಲಿ ರೈತ ಪ್ರತಿಭಟನೆಯನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
ರೈತ ಪ್ರತಿಭಟನೆ ಕುರಿತು ವಿಶ್ವದೆಲ್ಲೆಡೆ ಟ್ವೀಟ್ ಮಾಡಲು ಮೊದಲೆ ತಯಾರಿಸಿದ ಕೈಪಿಡಿಯನ್ನು ಈ ಟೂಲ್‌ಕಿಟ್‌ನಲ್ಲಿ ನೀಡಲಾಗಿದೆ. ಆದರೆ ರೈತ ಪ್ರತಿಭಟನೆ ಕಾರಣ, ಹಿನ್ನಲೆ, ನಡೆಯುತ್ತಿರುವ ರೀತಿ ಯಾವುದನ್ನು ಪರಿಗಣಿಸದೆ ಈ ಟೂಲ್ ಕಿಟ್ ಪೋಸ್ಟ್ ಮಾಡಲಾಗಿದೆ.
ರೈತರಿಗೆ ಬೆಂಬಲ ಸೂಚಿಸಿ ಈ ಟೂಲ್ ಕಿಟ್ ಪೋಸ್ಟ್ ಮಾಡಿದ ಗ್ರೇಟಾ ಥನ್ಬರ್ಗ್ ಬಳಿಕ ಇದನ್ನು ಡಿಲೀಟ್ ಮಾಡಿದ್ದಾರೆ. ಆದರೆ ದೆಹಲಿ ಪೊಲೀಸರು ದೇಶ ವಿರೋಧಿ ಪಿತೂರಿ, ದ್ವೇಷ ಬಿತ್ತಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗ್ರೇಟಾ ಪೋಸ್ಟ್ ಮಾಡಿರುವ 8 ಪುಟದ ಟೂಲ್ ಕಿಟ್ ಪವರ್‌ಪಾಯಿಂಟ್ ಟೆಂಪ್ಲೇಟ್‌ನ್ನು ಪೊಯೆಟಿಕ್ ಫೌಂಡೇಷನ್ ತಯಾರಿಸಿದೆ. ಈ ಪೊಯೆಟಿಕ್ ಫೌಂಡೇಷನ್ , ಪಂಜಾಬ್ ಪ್ರತ್ಯಕೇ ದೇಶವನ್ನಾಗಿ ಮಾಡಲು ಹೋರಾಡುತ್ತಿರುವ ಉಗ್ರ ಗಾಮಿ ಗುಂಪಾದ ಖಲಿಸ್ತಾನ ಸಪೋರ್ಟರ್ಸ್ ಮೋ ಧಲಿವಾಲ್ ಸಂಘಟನೆ ಸಹ ಸಂಸ್ಥೆಯಾಗಿದೆ.
ಟೂಲ್ ಕಿಟ್ ಮತ್ತೊಂದು ಅಂಶದ ಮೇಲೆ ಬೆಳಕು ಚೆಲ್ಲಿದೆ. ಜನವರಿ 26 ರಂದು ನಡೆದ ಟ್ರಾಕ್ಟರ್ ರ್ಯಾಲಿ ಪ್ರತಿಭಟೆನೆ ಕಾರ್ಯಗತಗೊಳಿಸಿದಂತೆ, ಫೆಬ್ರವರಿ 13-14ರಂದು ಮತ್ತೊಂದು ಸುತ್ತಿನ ಹಿಂಸಾತ್ಮಕ ಹೋರಾಟಕ್ಕೆ ದಿನಾಂಕ ನಿಗಧಿ ಪಡಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು, ಮಾಧ್ಯಮ ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಿ ಕಚೇರಿಗಳ ಬಳಿ ಪ್ರತಿಭಟನೆಗೆ ಸೂಚನೆ ನೀಡಲಾಗಿದೆ.
ಪೊಲೀಸರು FIR ದಾಖಲಿಸಿದ ಬಳಿಕ ಮತ್ತೆ ಟ್ವೀಟ್ ಮಾಡಿರುವ ಗ್ರೇಟಾ ಥನ್ಬರ್ಗ್ ಏನೇ ಆದರೂ ತಾನೂ ರೈತರ ಪರ ಎಂದು ಕಣ್ಣೊರೆಸುವ ಟ್ವೀಟ್ ಮಾಡಿದ್ದಾರೆ. ಪಾಪ್ ಗಾಯಕಿ ರಿಹಾನ ರೈತ ಪ್ರತಿಭಟನೆ ಕುರಿತ ಟ್ವೀಟ್ ಮಾಡಿದ್ದರು. ಇದಕ್ಕೆ ಭಾರತದ ಸೆಲೆಬ್ರೆಟಿಗಳು, ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದರು. ಆಂತರಿಕ ವಿಚಾರ ಅರಿಯದೆ ಮತಾನಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು.
ರಿಹಾನ ಟ್ವೀಟ್ ಬೆನ್ನಲ್ಲೇ ಇದೀಗ ಗ್ರೇಟಾ ಥನ್ಬರ್ಗ್ ತಮ್ಮ ಬೇಳೆ ಬೆಯಿಸಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲಲ್ಲಿ ಭಾರತದ ಮಾನ ಹರಾಜು ಹಾಕುವ ಯತ್ನ ಮಾಡಿದ್ದಾರೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಆದರೆ ಕೆಲ ಗುಂಪುಗಳನ್ನು ಗ್ರೇಟಾ ಥನ್ಬರ್ಗ್‌ಗೆ ಬೆಂಬಲ ಸೂಚಿಸಿದೆ.