ಕಾನ್ಫರೆನ್ಸ್ ಕಾಲ್‌ನಿಂದ ಆಯ್ತು ಮದುವೆ ಕ್ಯಾನ್ಸಲ್; ಹುಡುಗನ ಎಡವಟ್ಟಿನಿಂದ ಬಯಲಾಯ್ತು ರಹಸ್ಯ

ಟೆಕ್ನಾಲಜಿ ಜೀವನವನ್ನು ತುಂಬಾ ಸರಳವಾಗಿಸಿದೆ. ಇದೇ ತಂತ್ರಜ್ಞಾನದಿಂದ ಜನರ ಖಾಸಗಿತನ ಅನ್ನೋದು ಸಾರ್ವಜನಿಕವಾಗಿದೆ ಕಾನ್ಫರೆನ್ಸ್ ಕಾಲ್‌ನಿಂದ ಮದುವೆಯೊಂದು ಕ್ಯಾನ್ಸಲ್ ಆಗಿದೆ. ಏನಾಯ್ತು ಅಂತ ತಿಳ್ಕೋಬೇಕಾ, ಹಾಗಾದ್ರೆ ಓದಿ.

Conference Call Affair Groom s Secret Exposed Wedding Called Off mrq

ಆದಿಲಾಬಾದ್ ಜಿಲ್ಲೆಯ ಹುಡುಗನಿಗೆ ಬೇರೆ ಊರಿನ ಹುಡುಗಿಯ ಜೊತೆ ಮದುವೆ ಫಿಕ್ಸ್ ಆಯ್ತು. ಎರಡು ಕಡೆಯವರು ಸೇರಿ ಎಂಗೇಜ್ಮೆಂಟ್ ಕೂಡಾ ಮಾಡಿಕೊಂಡ್ರು. ಆಮೇಲೆ ಇಬ್ಬರೂ ಫೋನಿನಲ್ಲಿ ಮಾತಾಡ್ತಿದ್ರು. ಮದುವೆ ಕೆಲಸದಲ್ಲಿ ಎರಡು ಕಡೆಯವರು ಬ್ಯುಸಿ ಇದ್ರು.

Conference Call Affair Groom s Secret Exposed Wedding Called Off mrq

ಮದುವೆ ಹತ್ತಿರ ಬರ್ತಿದೆ ಅಂದ್ಕೊಳ್ಳುವಾಗ ಒಂದು ಫೋನ್ ಕಾಲ್ ಲೈಫ್ ಚೇಂಜ್ ಮಾಡಿದೆ. ಹುಡುಗಿ ತನ್ನ ಗಂಡನಿಗೆ ಕಾಲ್ ಮಾಡಿದಾಗ, ಆತ ಇನ್ನೊಂದು ಕಾಲ್‌ನಲ್ಲಿ ಇದ್ದ. ಆತ ಆ ಕಾಲ್ ಹೋಲ್ಡ್ ಮಾಡಿ, ಈ ಕಾಲ್ ರಿಸೀವ್ ಮಾಡಿದ. ಬ್ಯುಸಿ ಇದ್ದೀನಿ ಅಂತ ಹೇಳಿ ಕಾಲ್ ಕಟ್ ಮಾಡೋಣ ಅಂದ್ಕೊಂಡಿದ್ದಾನೆ.


ಆದ್ರೆ, ಕಾಲ್ ಕಟ್ ಮಾಡೋ ಬದಲು 'ಮೆರ್ಜಿಂಗ್' ಆಪ್ಷನ್ ಕ್ಲಿಕ್ ಮಾಡಿದ್ದಾನೆ. ಆತ ಮಾತಾಡ್ತಿದ್ದಿದ್ದು ತನ್ನ ಗರ್ಲ್ ಫ್ರೆಂಡ್ ಜೊತೆ! ಆವಾಗಲೇ ಇನ್ನೊಬ್ಬ ಹುಡುಗಿನ ಲವ್ ಮಾಡ್ತಿದ್ದ ಆತ, ಮದುವೆಗೆ ರೆಡಿ ಆಗಿದ್ದ. ವಿಷಯ ಗೊತ್ತಾದ ತಕ್ಷಣ ಹುಡುಗಿ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ರೆಕಾರ್ಡ್ ಮಾಡಿದ ಕಾಲ್ ಅನ್ನು ಪೋಷಕರಿಗೆ ಕಳುಹಿಸಿದ್ದಾಳೆ. ಕೂಡಲೇ ಹುಡುಗಿ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಮದುವೆ ಶಾಸ್ತ್ರಕ್ಕೆ ಮುಂಗಡವಾಗಿ ನೀಡಿದ್ದ ಹಣವನ್ನು ಸಹ ವಾಪಸ್ ಪಡೆದುಕೊಂಡಿದ್ದಾರೆ. ಮದುವೆ ಆಗಬೇಕಿದ್ದ ಟೈಮಲ್ಲಿ ಕಾನ್ಫರೆನ್ಸ್ ಕಾಲ್‌ನಿಂದ ಮದುವೆ ಕ್ಯಾನ್ಸಲ್ ಆಯ್ತು. ಇದು ಊರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Latest Videos

vuukle one pixel image
click me!