ಹಾಡಲ್ಲಿ ಮಾತ್ರವಲ್ಲ ಚುನಾವಣೆಯಲ್ಲೂ ಮೋಡಿ, ಇದುವರೆಗೆ ಗೆಲ್ಲದ ಕ್ಷೇತ್ರದಲ್ಲಿ ಬಿಜೆಪಿಯ ಮೈಥಿಲಿ ಮುನ್ನಡೆ, ಬಿಜೆಪಿ ಅಭ್ಯರ್ಥಿ ಮೈಥಿಲಿ 28 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಳೆದ 17 ವರ್ಷಗಳಿಂದ ಬಿಜೆಪಿಗೆ ಸಾಧ್ಯವಾಗದ ದಾಖಲೆಯನ್ನು ಮೈಥಿಲಿ ಬರೆಯಲು ಸಜ್ಜಾಗಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಮತ ಎಣಿಕೆ ಭರದಿಂದ ಸಾಗಿದೆ. ಎಕ್ಸಿಟ್ ಪೋಲ್ ಭವಿಷ್ಯ ನುಡಿದಂತೆ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಸದ್ಯದ ವರದಿ ಪ್ರಕಾರ ಎಕ್ಸಿಟ್ ಭವಿಷ್ಯ ಮೀರಿ ಎನ್‌ಡಿಎ ಮುನ್ನಡೆಯಲ್ಲಿದೆ. ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎ ಬರೋಬ್ಬರಿ 194 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂದನ್ 42 ಸ್ಥಾನದಲ್ಲಿ ಮುನ್ನಡೆಯಲಿದೆ.ಬಿಜೆಪಿಯ ಅಭ್ಯರ್ಥಿ ಮೈಥಿಲಿ ಠಾಕೂರ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
25
ಮೈಥಿಲಿ ಠಾಕೂರ್‌ಗೆ 28 ಸಾವಿರ ಮತಗಳ ಮುನ್ನಡೆ
ಬಿಜೆಪಿಯ 87 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ, ಈ ಪೈಕಿ ಭಾರಿ ಸಂಚಲನ ಸೃಷ್ಟಿಸಿದ ಸಿಂಗರ್ ಮೈಥಿಲಿ ಠಾಕೂರ್ ಭರ್ಜರಿ ಮುನ್ನಡೆಯಲ್ಲಿದ್ದಾರೆ. ಈ ಮೂಲಕ ಕಳೆದ 17 ವರ್ಷಗಳಿಂದ ಬಿಜೆಪಿಗೆ ಸಾಧ್ಯವಾಗದೆ ದಾಖಲೆ ಬರೆಯಲು ಮೈಥಿಲಿ ಠಾಕೂರ್ ಸಜ್ಜಾಗಿದ್ದಾರೆ. ಸದ್ಯದ ವರದಿ ಪ್ರಕಾರ ಮೈಥಿಲಿ ಠಾಕೂರ್ 28 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
35
ಅಲಿನಗರ ಗೆದ್ದೇ ಇಲ್ಲ ಬಿಜೆಪಿ
ಕ್ಷೇತ್ರ ಮರುವಿಂಗಡನೆ ವೇಳೆ 2008ರಲ್ಲಿ ಅಲಿನಗರ ಕ್ಷೇತ್ರ ಹುಟ್ಟಿಕೊಂಡಿತು. ಈ ಕ್ಷೇತ್ರ ಹುಟ್ಟಿಕೊಂಡ ಇಲ್ಲೀವರೆಗೆ ಬಿಜೆಪಿ ಅಲಿನಗರ್ ಗೆದ್ದೇ ಇಲ್ಲ. ಪ್ರತಿ ಭಾರಿ ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯಕಿ, ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಭರ್ಜರಿ ಗೆಲುವಿನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಮೈಥಿಲಿ ಠಾಕೂರ್ ಬಿಹಾರದ ಅತ್ಯಂತ ಪ್ರಸಿದ್ಧ ಜನಪದ ಹಾಗೂ ಭಕ್ತಿಗೀತೆಗಳ ಗಾಯಕಿ. ಭಾವಗೀತೆ, ಭಕ್ತಿಗೀತಿ ಸೇರಿದಂತೆ ಹಲವು ಪ್ರಕಾರ ಗೀತೆಗಳ ಮೂಲಕ ಅಪಾರ ಅಬಿಮಾನಿ ವರ್ಗ ಸೃಷ್ಟಿಸಿದ್ದಾರೆ. ಹಿಂದಿ ಹಾೂ ಬೋಜ್‌ಪುರಿಯಲ್ಲಿ ಭಾರಿ ಜನಪ್ರಿಯ ಗಾಯಕಿಯಾಗಿದ್ದಾರೆ. ಬಿಹಾರ ಚುನಾವಣೆಗೂ ಒಂದು ವಾರ ಮೊದಲು ಮೈಥಿಲಿ ಠಾಕೂರ್ ಬಿಜೆಪಿ ಸೇರಿಕೊಂಡಿದ್ದರು.
ಚುನಾವಣೆಗೆ ಒಂದು ವಾರ ಮೊದಲು ಬಿಜೆಪಿ ಸೇರಿದ್ದ ಮೈಥಿಲಿ
55
ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾಗಿರುವ ಮೈಥಿಲಿ
ಬಿಹಾರದ ಕಾರ್ಯಕ್ರಮದಲ್ಲಿ, ಹಲವು ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಥಿಲಿ ಠಾಕೂರ್ ಅದ್ಭುತ ಕಂಠವನ್ನು ಹೊಗಳಿದ್ದಾರೆ. ಮೈಥಿಲಿಯ ಸುಮುಧರ ಹಾಡುಗಳ ಕುರಿತು ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಸೇರುವ ಮುನ್ನವೇ ಮೈಥಿಲಿ ಠಾಕೂರ್ ಪ್ರತಿಭೆಯನ್ನು ಪ್ರಧಾನಿ ಮೋದಿ ಗೌರವಿಸಿದ್ದರು.