ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶಿ ಮಾಡೆಲ್ ಅರೆಸ್ಟ್, ನಕಲಿ ಆಧಾರ್ ವಶಕ್ಕೆ

Published : Aug 02, 2025, 02:33 PM IST

2023ರಲ್ಲಿ ಭಾರತಕ್ಕೆ ಬಂದ ಬಾಂಗ್ಲಾದೇಶಿ ಮಾಡೆಲ್ ಬಳಿಕ ಇಲ್ಲೇ ನೆಲೆಸಿದ್ದಾಳೆ. ನಕಲಿ ಆಧಾರ್ ಕಾರ್ಡ್, ನಕಲಿ ರೇಶನ್ ಕಾರ್ಡ್ ಕೂಡ ಪಡೆದುಕೊಂಡಿದ್ದಾಳೆ. ಮನೆ ಬಾಡಿಗೆ ಪಡೆದು ಭಾರತದಲ್ಲೇ ನೆಲೆಸಿದ್ದ ಮಾಡೆಲ್ ಇದೀಗ ಅರೆಸ್ಟ್ ಆಗಿದ್ದಾಳೆ.

PREV
16

ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತದಲ್ಲಿ ನುಸುಳಿ ಇಲ್ಲಿನ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಪಡೆದು ಭಾರತೀಯರ ಸೋಗಿನಲ್ಲಿ ಇಲ್ಲೇ ನೆಲೆಸಿರುವವರ ಕುರಿತು ಕಾರ್ಯಾಚರಣೆ ನಡೆಯುತ್ತಿದೆ. ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇದೀಗ ಅಕ್ರಮವಾಗಿ ನುಸುಲಿರುವ ಬಾಂಗ್ಲಾದೇಶಿಗಳು ಯಾರು ಅನ್ನೋದು ಪತ್ತೆ ಹಚ್ಚುವುದೇ ಸವಾಲಾಗಿ ಪರಿಣಮಿಸುತ್ತಿದೆ. ಇದರ ನಡುವೆ ಕಳೆದೆರಡು ವರ್ಷದಿಂದ ಭಾರತದಲ್ಲೇ ನೆಲೆಸಿದ್ದ ಬಾಂಗ್ಲಾದೇಶಿ ಮಾಡೆಲ್‌ನ ಅರೆಸ್ಟ್ ಮಾಡಲಾಗಿದೆ.

26

2023ರಲ್ಲಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶಿ ಮಾಡೆಲ್ ಶಾಂತಾ ಪೌಲ್, ಕೋಲ್ಕತಾದಲ್ಲಿ ಮನೆ ಬಾಡಿಗೆ ಪಡೆದು ಕಳೆದರಡು ವರ್ಷದಿಂದ ಭಾರತದ ಸೌಲಭ್ಯ ಬಳಸಿಕೊಳ್ಳುತ್ತಿದ್ದಾಳೆ. ಭಾರತೀಯ ಹೆಸರಿನಲ್ಲಿ ಏರ್‌ಲೈನ್ಸ್‌ನಲ್ಲೂ ಟ್ರಾವಲ್ ವ್ಲಾಗರ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಅರೆಸ್ಟ್ ಆಗಿದ್ದಾಳೆ.

36

ಭಾರತದ ನಕಲಿ ಆಧಾರ್ ಕಾರ್ಡ್, ನಕಲಿ ರೇಶನ್ ಕಾರ್ಡ್ ಮಾಡಿಸಿಕೊಂಡಿದ್ದಾಳೆ. 2023ರಲ್ಲಿ ಅಧಿಕತ ಪಾಸ್‌ಪೋರ್ಟ್ ಹಾಗೂ ವೀಸಾ ಬಳಸಿ ಭಾರತಕ್ಕೆ ಬಂದ ಈಕೆ, ಬಳಿಕ ಹಿಂತಿರುಗಿಲ್ಲ. ಭಾರತದ ಬರುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿರುವ ಎಜೆನ್ಸಿ ಮೂಲಕ ನಕಲಿ ದಾಖಲೆ ಮಾಡಿಸಿಕೊಂಡಿದ್ದಾಳೆ. ತಾನು ಭಾರತೀಯಳು ಎಂದು, ಪ್ರೌಡ್ ಬೆಂಗಾಲಿ ಎಂದು ಹೇಳಿಕೊಂಡು ಕೆಲ ಸಿನಿಮಾಗಳಲ್ಲೂ ನಟಿಸಿದ್ದಾಳೆ.

46

ಬಂಗಾಳಿ ಹಾಗೂ ತಮಿಳು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿರುವ ಈಕೆ, ಇದೀಗ ಒಡಿಯಾ ಸಿನಿಮಾ ಮಾಡಲು ಸಹಿ ಹಾಕಿದ್ದಾಳೆ. 2016ರಲ್ಲಿ ನಡೆದ ಇಂಡೋ ಬಾಂಗ್ಲಾ ಬ್ಯೂಟಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾಳೆ. ಈ ವೇಳೆ ಬಾಂಗ್ಲಾದೇಶ ಪ್ರತಿನಿದಿಸಿದ್ದ ಈ ಶಾಂತಾ ಪೌಲ್ 2023ರಲ್ಲಿ ಪಕ್ಕಾ ಪ್ಲಾನ್ ಮಾಡಿಕೊಂಡು ಭಾರತಕ್ಕೆ ಆಗಮಿಸಿದ್ದಾಳೆ.

56

ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿಯಾಗಿದೆ. ಈಕೆಯ ಕೋಲ್ಕಾತ ಫ್ಲ್ಯಾಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಶಾಂತಾ ಪೌಲ್‌ನ ಅರೆಸ್ಟ್ ಮಾಡಿದ್ದಾರೆ. ಈಕೆಯ ಬಳಿಯಿಂದ ಆಧಾರ್, ರೇಶನ್ ಮಾತ್ರವಲ್ಲ, ನಕಲಿ ವೋಟರ್ ಐಡಿ, ನಕಲಿ ಪಾನ್ ಕಾರ್ಡ್ ಸೇರಿದಂತೆ ಭಾರತದ ಎಲ್ಲಾ ಮಹತ್ವ ದಾಖಲೆಗಳನ್ನು ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

66

ಜೂನ್ 5 ರಂದು ಆಂಧ್ರ ಪ್ರದೇಶದ ಶೇಕ್ ಮೊಹಮ್ಮದ್ ಅಶ್ರಫನ್ ಮದುವೆಯಾಗಿದ್ದಾಳೆ. ಆಶ್ರಫ್ ಫಾಸ್‌ಪೋರ್ಟ್ ಬಳಸಿಕೊಂಡು ಎಲ್ಲಾ ದಾಖಲೆ ನಕಲಿ ಮಾಡಿ ಭಾರತೀಯಳಂತೆ ಪೋಸ್ ಕೊಟ್ಟಿದ್ದಾಳೆ. ಇದೀಗ ಈಕೆಯ ತಂತ್ರ ಬಯಲಾಗಿದೆ. ಇತ್ತ ಗಂಡ ಅಶ್ರಫ್ ಕೂಡ ಈಕೆಗೆ ಸಹಕಾರ ನೀಡಿರುವುದು ಪತ್ತೆಯಾಗಿದೆ.

Read more Photos on
click me!

Recommended Stories