Pahalgam attack victims: ಪಹಲ್ಗಾಂ ಸಂತ್ರಸ್ತರನ್ನ ಭೇಟಿಯಾದ ಅಮಿತಾ ಶಾ; ಭಾವುಕ ಕ್ಷಣದ ಫೋಟೋಗಳು

Published : Apr 23, 2025, 03:12 PM ISTUpdated : Apr 23, 2025, 03:15 PM IST

Union Minister Amit Shah: ಪಹಲ್ಗಾಂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಅಮಿತ್ ಶಾ ಅವರನ್ನು ನೋಡಿ ಭಾವುಕರಾದರು. ಕೇಂದ್ರ ಗೃಹ ಸಚಿವರು ಮಕ್ಕಳ ಕಣ್ಣೀರು ಒರೆಸಿ, ಸಾಂತ್ವನ ಹೇಳಿದರು.

PREV
110
Pahalgam attack victims: ಪಹಲ್ಗಾಂ ಸಂತ್ರಸ್ತರನ್ನ ಭೇಟಿಯಾದ ಅಮಿತಾ ಶಾ; ಭಾವುಕ ಕ್ಷಣದ ಫೋಟೋಗಳು

ಶ್ರೀನಗರ ಪೊಲೀಸ್ ಕಂಟ್ರೋಲ್ ರೂಮಿನಲ್ಲಿ ಅಮಿತ್ ಶಾ ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪುಷ್ಪಗುಚ್ಚ ಸಲ್ಲಿಸಿ ಅಂತಿಮ ನಮನಗಳನ್ನು ಸಲ್ಲಿಸಿದರು.

210
ಶಾ ಸಾಂತ್ವನ ಹೇಳಿದರು

ಶ್ರದ್ಧಾಂಜಲಿ ನಂತರ, ಶಾ ಮೃತರ ಕುಟುಂಬಸ್ಥರ ಸದಸ್ಯರನ್ನು ಭೇಟಿಯಾದರು. ಅಮಿತ್ ಶಾ ಅವರನ್ನು ನೋಡುತ್ತಿದ್ದಂತೆ ಸಂತ್ರಸ್ತ ಕುಟುಂಬದವರು ಭಾವುಕರಾದರು. ಈ ವೇಳೆ ಅಮಿತ್ ಶಾ ಅವರು ಸಾಂತ್ವನ ಹೇಳಿದರು.

310
ಶಾ ಜೊತೆ ಭಾವುಕ ಕ್ಷಣ

ಶಾ ಅವರನ್ನು ನೋಡಿ ಎಲ್ಲರೂ ದುಃಖಿತರಾಗಿದ್ದರು. ಎಲ್ಲರ ಕಣ್ಣುಗಳು ತುಂಬಿ ಬಂದವು. ಒಂದು ಕ್ಷಣ ಸುತ್ತಲೂ ಮೌನ ಆವರಿಸಿತ್ತು. ಸಂತ್ರಸ್ತ ಕುಟುಂಬಸ್ಥರು ನಡೆದ ಘಟನೆ ಕುರಿತು ಅಮಿತ್ ಶಾ ಅವರೊಂದಿಗೆ ಮಾತನಾಡಿದರು.

410
ಭಾವುಕರಾದ ಗೃಹ ಸಚಿವರು

ಕುಟುಂಬದವರ ದುಃಖ ನೋಡಿ ಅಮಿತ್ ಶಾ ಕೂಡ ಭಾವುಕರಾದರು. ಶಾ ಮಗುವಿನ ತಲೆ ನೇವರಿಸಿ, ಕಣ್ಣೀರು ಒರೆಸಿದರು. ಧೈರ್ಯವಾಗಿರಿ ಎಂದು ಹೇಳಿದರು.

510
ಮಗುವಿನ ತಲೆ ನೇವರಿಸಿದ ಶಾ

ಗೃಹ ಸಚಿವರು ಎಲ್ಲ ಕುಟುಂಬಗಳಿಗೂ ಸಾಂತ್ವನ ಹೇಳಿದರು. ದೋಷಿಗಳನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಈಗಾಗಲೇ ಮೂವರು ಉಗ್ರರ ಫೋಟೋಗಳನ್ನು ಬಿಡುಗಡೆಗೊಳಿಸಲಾಗಿದೆ.

610
ಸಾಂತ್ವನ ಹೇಳಿದ ಶಾ

ಭಾರತ ಭಯೋತ್ಪಾದನೆಯನ್ನು ಎಂದಿಗೂ ಸಹಿಸಲ್ಲ ಎಂದು ಅಮಿತ್ ಶಾ ಉಗ್ರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ನೋವು ಎಲ್ಲ ಭಾರತೀಯರಿಗೂ ಇದೆ ಎಂದರು. ನಿರಪರಾಧಿಗಳನ್ನು ಕೊಂದವರನ್ನು ಬಿಡುವುದಿಲ್ಲ ಎಂದು ಶಾ ಭರವಸೆ ನೀಡಿದರು.

710

ಕಾಶ್ಮೀರದ ಪಹಲ್ಗಾಂನಲ್ಲಿ, ಪ್ರವಾಸಿಗರು ಮುಸ್ಲಿಮರು ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಂಡು ಅವರ ಮೇಲೆ ಉಗ್ರರು ದಾಳಿ ಮಾಡಿದ ವಿಷಯವನ್ನು ದಾಳಿಯಿಂದ ಪಾರಾದವರು ಬಿಚ್ಚಿಟ್ಟಿದ್ದಾರೆ. ಉಗ್ರರು ಐಡಿ ಕಾರ್ಡ್‌ ಕೇಳಿ, ಪ್ರವಾಸಿಗರ ವಿವರ ಪಡೆದರು ಹಾಗೂ ಕೆಲವರ ಪ್ಯಾಂಟ್ ಬಿಚ್ಚಿಸಿ ಅವರ ಗುರುತು ಖಚಿತಪಡಿಸಿಕೊಂಡು ದಾಳಿ ಮಾಡಿದರು ಎಂದು ಗೊತ್ತಾಗಿದೆ. 

810

ದಾಳಿಗೆ ಒಳಗಾದ ಕುಟುಂಬದ ಮಹಿಳೆಯೊಬ್ಬರು ತನ್ನ ಗಂಡನ ತಲೆಗೆ ಗುಂಡು ಹಾರಿಸಲಾಗಿದೆ ಎಂದು ರೋದಿಸುತ್ತಾ ಪತ್ರಕರ್ತರ ಜತೆ ಮಾತನಾಡಿ, ‘ನನ್ನ ಗಂಡನ ತಲೆಗೆ ಗುಂಡು ಹಾರಿಸಲಾಗಿದೆ, ಅವರು ಮುಸ್ಲಿಂ ಅಲ್ಲ ಎಂಬ ಅಲ್ಲ ಕಾರಣಕ್ಕಾಗಿ ಗುಂಡು ಹಾರಿಸಲಾಗಿದೆ’ ಎಂದು ಹೇಳಿದಳು. ಇನ್ನೂ ಕೆಲವರು ಮಾತನಾಡಿ, ‘ಉಗ್ರರು ಪ್ರವಾಸಿಗರ ಜಾತಿ-ಧರ್ಮದ ಬಗ್ಗೆ ವಿಚಾರಿಸಿ, ಅವರ ಗುರುತಿನ ಪತ್ರ ನೋಡಿ ಮುಸ್ಲಿಮೇತರ ಎಂದು ಖಚಿತಪಡಿಸಿಕೊಂಡು ಗುಂಡು ಹಾರಿಸಿದರು’ ಎಂದಿದ್ದಾರೆ.

910

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಹಾಗೂ ಆಗಷ್ಟೇ ಮದುವೆ ಆಗಿ ಮಧುಚಂದ್ರಕ್ಕೆ ಆಗಮಿಸಿದವರು ನರಕ ದರ್ಶನ ಮಾಡುವಂತಾಗಿದೆ. ತಮ್ಮವರನ್ನು ರಕ್ಷಿಸಿ ಎಂದು ಅವರು ಗೋಗರೆಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

1010

ಕಾಶ್ಮೀರ ಸಹಾಯವಾಣಿ

ಸಂತ್ರಸ್ತರಿಗೆ ಸಹಾಯ ಮಾಡಲು ಅನಂತನಾಗ್ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾಡಳಿತ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ತೆರೆದಿದ್ದಾರೆ. ಅಗತ್ಯವಿದ್ದವರು 9596777669, 01932225870, 01932222337, 7780885759, 9697982527 ಮತ್ತು 6006365245 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಜೊತೆಗೆ 9419051940ಗೆ ವಾಟ್ಸಾಪ್‌ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Photos on
click me!

Recommended Stories