ಕಾಡನ್ನೇ ಸೃಷ್ಟಿಸಿದ ಆನಂದ್ ಅಂಬಾನಿ
ಆನೆ, ಸಿಂಹ, ಚಿರತೆ, ಜಿಂಕೆ, ಆಮೆ, ಕುದುರೆ ಮತ್ತು 100ಕ್ಕೂ ಹೆಚ್ಚು ಅಪರೂಪದ ಪ್ರಾಣಿಗಳಿಗೆ ಇಲ್ಲಿ ನೈಸರ್ಗಿಕ ವಾತಾವರಣ ಕಲ್ಪಿಸಲಾಗಿದೆ. ಈ ಪ್ರಾಣಿಗಳೆಲ್ಲವೂ ಆಫ್ರಿಕಾ, ಥೈಲ್ಯಾಂಡ್, ಅಮೆರಿಕ ಮತ್ತು ಭಾರತದಿಂದ ರಕ್ಷಿಸಲ್ಪಟ್ಟಿವೆ. ಆನಂದ್ ಅಂಬಾನಿಯವರ ವನತಾರ ಯೋಜನೆಯಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವು ಕಾಡಿನಲ್ಲಿರುವಂತೆ ಸ್ವಾತಂತ್ರ್ಯ ಅನುಭವಿಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.