ತಮಿಳನಾಡಿನ ಸೇಲಂನ ಮಲ್ಲಮೂಪಂಬಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್ ಲೋಗನಾಥನ್ ಎಂಬುವವರು ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಏಲಿಯನ್ ದೇವರ ಹೆಸರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಏಲಿಯನ್ ದೇವಸ್ಥಾನ ನಿರ್ಮಾಣ ಮಾಡುವ ಮುನ್ನ ಅನ್ಯಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅನುಮತಿ ಪಡೆದಿದ್ದೇನೆ ಎಂದು ಹೇಳುತ್ತಾನೆ ಲೋಗನಾಥನ್
"ವಿಶ್ವದಲ್ಲಿ ಶಿವನು ಸೃಷ್ಟಿಸಿದ ಮೊದಲ ಕಾಸ್ಮಿಕ್ ದೇವತೆಗಳು ಏಲಿಯನ್ಸ್. ಅವರನ್ನು ಆರಾಧಿಸುವುದರಿಂದ ಒಬ್ಬರ ಜೀವನ, ರೂಪ ಮತ್ತು ವೃತ್ತಿಜೀವನವನ್ನು ಉನ್ನತೀಕರಿಸಬಹುದು. ನಾನು ವೈಯಕ್ತಿಕವಾಗಿ ಅತೀಂದ್ರಿಯ ರೂಪದಲ್ಲಿ ಏಲಿಯನ್ ಜೊತೆಗೆ ಮಾತನಾಡಿದ್ದೇನೆ. ಅವರು ನನ್ನೊಂದಿಗೆ ಎರಡು ಬಾರಿ ಬಂದು ಮಾತನಾಡಿದ್ದಾರೆ. ಇದು ನಿಜ, ಮತ್ತು ಜಗತ್ತು ಅದನ್ನು ನಂಬುವ ಅಗತ್ಯವಿದೆ," ಎಂದು ಹೇಳ್ತಾನೆ ಆಸಾಮಿ. ಜೊತೆಗೆ ನನ್ನ ಅನುಭವಗಳನ್ನು ಕೇವಲ ಫ್ಯಾಂಟಸಿ ಎಂದು ತಳ್ಳಿಹಾಕದಂತೆ ಜನರನ್ನು ಒತ್ತಾಯಿಸಿದ್ದಾನೆ.
ಏಲಿಯನ್ ದೇವರು ಜೊತೆಗೆ ನೆಲಮಾಳಿಗೆಯಲ್ಲಿ ಶಿವ, ಪಾರ್ವತಿ, ಮುರುಗನ್, ಕಾಳಿ ಮುಂತಾದ ದೇವ-ದೇವತೆಗಳ ವಿಗ್ರಹಗಳನ್ನು ಸಹ ಸ್ಥಾಪಿಸಲಾಗಿದೆ. ದಿನನಿತ್ಯ ಏಲಿಯನ್ ದೇವರಿಗೆ ಆರತಿ ಬೆಳಗಿ ಪೂಜೆ ಮಾಡುವ ಲೋಗನಾಥನ್, ಪ್ರಕೃತಿ ವಿಕೋಪಗಳಿಂದ ಭಕ್ತರನ್ನು ರಕ್ಷಿಸುವ ಶಕ್ತಿ ಅನ್ಯದೇವತೆಗಳಿಗೆ ಇದೆ ಎಂದು ಪ್ರತಿಪಾದಿಸುತ್ತಾನೆ.
ತಮಿಳನಾಡಿನಲ್ಲಿ ದೇವಸ್ಥಾನ, ದೇವರುಗಳಿಗೆ ಕೊರತೆಯಿಲ್ಲ. ಇಲ್ಲಿ ಪ್ರತಿ ಊರಿನಲ್ಲೂ ಹಲವಾರು ದೇವಸ್ಥಾನಗಳು ಸಿಗುತ್ತವೆ. ಆದರೆ ಅವೆಲ್ಲವುಗಳಿಗಿಂತ ಏಲಿಯನ್ ದೇವಾಲಯ ಸಾಕಷ್ಟು ವೈರಲ್ ಆಗುತ್ತಿದೆ. ವಿಚಿತ್ರ ದೇವಾಲಯ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ..
ಏಲಿಯನ್ ಸಿನಿಮಾಗಳಲ್ಲಿ ತೋರಿಸಿದ್ದಂತೆ ಇಲ್ಲ. ಬೇರೆಯದೇ ರೀತಿಯಲ್ಲಿದ್ದಾರೆ. ನಾನು ಅನ್ಯಗ್ರಹದ ಜೀವಿಗಳೊಂದಿಗೆ ಮಾತಾನಾಡಿದ್ದೇನೆ ಎನ್ನುತ್ತಿರುವ ಆಸಾಮಿ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಅವೈಜ್ಞಾನಿಕ ಹೇಳಿಕೆಯನ್ನೂ ನೀಡಿರುವ ಏಲಿಯನ್ ಪೂಜಾರಿ!
ಕೆಲವರು ಮೆಮೆ ಮಾಡಿದ್ರೆ ಕೆಲವರು ಏಲಿಯನ್ ದೇವರು ಇದ್ದರೂ ಇರಬಹುದು ಎಂದು ನಂಬುವವರಿದ್ದಾರೆ. ತಮಿಳನಾಡು ಹೇಳಿ ಕೇಳಿ ಸಿನಿಮಾ ನಟ-ನಟಿಯರ ಹೆಸರಲ್ಲಿ ದೇವಸ್ಥಾನ ಕಟ್ಟಿದವರು. ಇನ್ನು ಅನ್ಯಗ್ರಹದ ದೇವರು ಬಿಟ್ಟಾರೆಯೇ