ಎಮರ್ಜೆನ್ಸಿ ನಿಭಾಯಿಸುವುದು ಹೇಗೆ? ದುರಂತಕ್ಕೂ ಮೊದ್ಲು ಕಾಕ್‌ಪಿಟ್‌ನಲ್ಲಿ ಮಾಹಿತಿ ಪಡೆದಿದ್ದ ರೂಪಾನಿ

Published : Jul 04, 2025, 03:13 PM ISTUpdated : Jul 04, 2025, 03:14 PM IST

ಏರ್ ಇಂಡಿಯಾ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 241 ಪ್ರಯಾಣಿಕರ ದುರಂತ ಅಂತ್ಯ ಘಟನೆ ಇನ್ನು ಮಾಸಿಲ್ಲ. ಇದರ ನಡುವೆ ವಿಜಯ್ ರೂಪಾನಿ ಇದೇ ಬೋಯಿಂಗ್ ವಿಮಾನದ ಕಾಕ್‌ಪಿಟ್‌ಗೆ ತೆರಳಿ ಪೈಲೆಟ್‌ಗಳಿಂದ ತುರ್ತು ಸಂದರ್ಭ ನಿಭಾಯಿಸುವುದು ಹೇಗೆ ಎಂದು ಮಾಹಿತಿ ಪಡೆದಿದ್ದರು.

PREV
16

ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಒಬ್ಬ ಪ್ರಯಾಣಿಕ ಹೊರತಪಡಿಸಿ ಇನ್ನುಳಿದ 241 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದರು. ಇದರ ಜೊತೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ದಾರುಣವಾಗಿ ಅಂತ್ಯಕಂಡಿದ್ದರು. ಈ ಘಟನೆ ಭಾರತದ ವಿಮಾನಯಾನ ಇತಿಹಾಸದಲ್ಲೇ ನಡೆದ ಅತೀ ದೊಡ್ಡ ದುರಂತಗಳಲ್ಲೊಂದು. ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದರು.

26

ದುರಂತಕ್ಕೂ ಒಂದು ತಿಂಗಳ ಮೊದಲು ವಿಜಯ್ ರೂಪಾನಿ ಇದೇ ಬೋಯಿಂಗ್ ವಿಮಾನದ ಕಾಕ್‌ಪಿಟ್‌ಗೆ ಭೇಟಿ ನೀಡಿದ್ದರು. ಪೈಲೆಟ್ ಹಾಗೂ ತಜ್ಞರ ಜೊತೆ ಮಾತನಾಡಿದ್ದರು. ಕಾಕ್‌ಪಿಟ್‌ನಲ್ಲಿ ಕುಳಿತು ಪೈಲೆಟ್ ವಿಮಾನ ಹಾರಾಟದ ಸಂದರ್ಭದಲ್ಲಿ ಏನು ಮಾಡಬೇಕು, ತುರ್ತು ಸಂದರ್ಭ ಬಂದಾಗ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಪ್ರಶ್ನಿಸಿದ್ದರು. ಇಷ್ಟೇ ತುರ್ತು ಸಂದರ್ಭ ಪೈಲೆಟ್ ಹೇಗೆ ಎದುರಿಸುತ್ತಾರೆ ಅನ್ನೋ ಕುರಿತು ಮಾಹಿತಿ ಪಡೆದಿದ್ದರು.

36

ತುರ್ತು ಸಂದರ್ಭ, ವಿಮಾನದಲ್ಲಿ ಎದುರಾಗವು ತಾಂತ್ರಿಕ ದೋಷಗಳ ಸಂದರ್ಭದಲ್ಲಿ ಏರ್ ಕಂಟ್ರೋಲ್ ರೂಂ ಜೊತೆಗೆ ಸಂವಹನ ನಡೆಸಿ ತುರ್ತಾಗಿ ಲ್ಯಾಂಡಿಂಗ್ ಪ್ರಕ್ರಿಯೆ ಸೇರಿದಂತೆ ಕಾಕ್‌ಪಿಟ್ ಸೇರಿದಂತೆ ಹಲವು ಮಾಹಿತಿಗಳನ್ನು ವಿಜಯ್ ರೂಪಾನಿ ಪಡೆದುಕೊಂಡಿದ್ದರು. ಈ ಮಾಹಿತಿ ಪಡೆದ ಒಂದು ತಿಂಗಳ ಬಳಿಕ ವಿಜಯ್ ರೂಪಾನಿ ಅದೇ ಬೋಯಿಂಗ್ ವಿಮಾನ ದುರಂತದಲ್ಲಿ ಅಂತ್ಯಕಂಡಿದ್ದರು.

46

ವಿಜಯ್ ರೂಪಾನಿ ಎಪ್ರಿಲ್ 8 ರಂದು ಅಹಮ್ಮದಾಬಾದ್‌ನಲ್ಲಿರುವ ಏವಿಯೇಶನ್ ಸಂಸ್ಥೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳು, ಎಂಜಿನೀಯರ್ಸ್ ಸೇರಿದಂತೆ ಹಲವು ಸಿಬ್ಬಂದಿಗಳನ್ನು ಭೇಟಿ ಮಾಡಿದ್ದ ವಿಜಯ್ ರೂಪಾನಿ ಮಾಹಿತಿಗಳನ್ನು ಪಡೆದಿದ್ದರು. ಏವಿಯೇಶನ್ ಸಂಸ್ಥೆಯ ಮೂಲಭೂತ ಸೌಕರ್ಯ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದ್ದರು. ಅಗತ್ಯ ಸೌಲಭ್ಯಗಳ ಪಟ್ಟಿ ಮಾಡಲು ಸೂಚಿಸಿದ್ದರು.

56

ಏವಿಯೇಶನ್ ಸಂಸ್ಥೆಗೆ ಭೇಟಿ ನೀಡಿದ ವೇಳೆ ಬೋಯಿಂಗ್ ವಿಮಾನದ ಕಾಕ್‌ಪಿಟ್‌ಗೆ ತೆರಳಿದ್ದರು. ಈ ವೇಳೆ ವಿಜಯ್ ರೂಪಾನಿ ಏವಿಯೇಶನ್ ವಿಶ್ವವಿದ್ಯಾಲಯದ ಡೀನ್ ರಾಧಿಕಾ ಬಂಡಾರಿ ಜೊತೆ ಚರ್ಚೆ ನಡೆಸಿದ್ದರು. ಈ ಕುರಿತು ಸಂತಸ ಹಂಚಿಕೊಂಡಿದ್ದ ವಿಜಯ್ ರೂೂಪಾನಿ ಬೋಯಿಂಗ್ 737, ಸೆಸ್ಸನಾ, ಝೆನಿತ್, ಮಿಗ್ 21 ಸೇರಿದಂತೆ ರಿಯಲ್ ಏರ್‌ಕ್ರಾಫ್ಟ್ ವೀಕ್ಷಿಸಿದೆ. ಉಪನ್ಯಾಸಕರು, ವಿದ್ಯಾರ್ಥಿಗಳ ಜೊತೆಗಿನ ಮಾತುಕತೆ ಖುಷಿ ನೀಡಿತ್ತು. ವಿದ್ಯಾರ್ಥಿಗಳು ತುಂಬಾ ಎನರ್ಜಿಟಿಕ್ ಆಗಿದ್ದರು. ಈ ಸಂದರ್ಭದಲ್ಲಿ ಏವಿಯೇಶನ್ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ವಿಜಯ್ ರೂಪಾನಿ ಹಾರೈಸಿದ್ದರು.

66

ವಿಜಯ್ ರೂಪಾನಿ 2016ರಿಂದ 2021ರ ವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವಿಜಯ್ ರೂಪಾನಿ ಗುಜರಾತ್ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದರು. ಬಿಜೆಪಿಯ ಹಿರಿಯ ನಾಯಕನಾಗಿದ್ದ ವಿಜಯ್ ರೂಪಾನಿ, ಅಹಮ್ಮದಾಬಾದ್‌ನಿಂದ ಲಂಡನ್‌ಗೆ ತೆರಳಿದ್ದರು. ಮಗಳ ಭೇಟಿ ಮಾಡಲು ತೆರಳಿದ್ದ ವಿಜಯ್ ರೂಪಾನಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅಂತ್ಯಕಂಡಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories