
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ವಿಜಯ್ ರೂಪಾನಿ ಅಹಮದಾಬಾದ್‌ನಲ್ಲಿ ಜೂ 12ರಂದು ನಡೆದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಈ ಮೂಲಕ ರೂಪಾನಿ ಅಕಾಲಿಕ ಮರಣ ವಿಮಾನ ಅಪಘಾತಗಳಲ್ಲಿ ಸಾವನ್ನಪ್ಪಿದ ಹಲವಾರು ಉನ್ನತ ಭಾರತೀಯ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ. ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ಓರ್ವ ಬದುಕುಳಿದಿದ್ದು 241 ಮಂದಿ ಮೃತಪಟ್ಟಿದ್ದಾರೆ. ಇದರ ಜೊತೆಗೆ ಹಾಸ್ಟೆಲ್ ಗೆ ವಿಮಾನ ಅಪ್ಪಳಿಸಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮೃತಪಟ್ಟು ಈ ದುರ್ಘಟನೆಯಲ್ಲಿ ಮೃತರ ಸಂಖ್ಯೆರ ಈಗ 297ಕ್ಕೆ ಏರಿಕೆಯಾಗಿದೆ.
1965 ಸೆಪ್ಟೆಂಬರ್ 19- ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಬಲವಂತರಾಯ್ ಮೆಹ್ತಾ ಅವರು 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ವಾಯು ದುರಂತದಲ್ಲಿ ನಿಧನರಾದರು. ಅವರ ವಿಮಾನವನ್ನು ಗಡಿಯ ಬಳಿ ಪಾಕಿಸ್ತಾನವು ಯುದ್ಧ ವಿಮಾನವೆಂದು ತಪ್ಪಾಗಿ ಗುರುತಿಸಿ ಹೊಡೆದುರುಳಿಸಿತು. ಮೆಹ್ತಾ ಅವರ ಪತ್ನಿ, ಅವರ ಮೂವರು ಸಿಬ್ಬಂದಿ, ಒಬ್ಬ ಪತ್ರಕರ್ತ ಮತ್ತು ಇಬ್ಬರು ಸಿಬ್ಬಂದಿಯೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದರು.
1973 ಮೇ 13- ಕಾಂಗ್ರೆಸ್ ನಾಯಕ, ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿದ್ದ ಸುರೇಂದ್ರ ಮೋಹನ ಕುಮಾರಮಂಗಲಂ ಅವರು 1973 ರಲ್ಲಿ ದೆಹಲಿ ಬಳಿ ಇಂಡಿಯನ್ ಏರ್ಲೈನ್ಸ್ ವಿಮಾನ 440 ಅಪಘಾತದಲ್ಲಿ ಸಾವನ್ನಪ್ಪಿದರು. ಅವರ ದೇಹವನ್ನು ಪಾರ್ಕರ್ ಪೆನ್ನು ಮತ್ತು ಅವರ ಶ್ರವಣ ಸಾಧನದಿಂದ ಮಾತ್ರ ಗುರುತಿಸಲು ಸಾಧ್ಯವಾಯಿತು.
1980ರ ಜೂನ್ 23 – ನವದೆಹಲಿ ಬಳಿ ಸಂಭವಿಸಿದ ಲಘು ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪುತ್ರ, ಯುವ ಕಾಂಗ್ರೆಸ್ ನಾಯಕರಾದ ಸಂಜಯ್ ಗಾಂಧಿ (33 ವರ್ಷ) ದುರ್ಮರಣ ಹೊಂದಿದರು. ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ಸಂಜಯ್ ತಮ್ಮ ವಿಮಾನವನ್ನು ಚಲಾಯಿಸುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿತ್ತು.
1994ರ ಜುಲೈ 9ರಂದು, ಹಿಮಾಚಲ ಪ್ರದೇಶದಲ್ಲಿ ಕೆಟ್ಟ ಹವಾಮಾನದ ನಡುವೆಯಲ್ಲಿ ಸರ್ಕಾರದ ಸೂಪರ್ ಕಿಂಗ್ ವಿಮಾನವು ಎತ್ತರದ ಪರ್ವತಗಳಿಗೆ ಢಿಕ್ಕಿಯಾಯಿತು. ಈ ದುರಂತದಲ್ಲಿ ಆಗಿನ ಪಂಜಾಬ್ ರಾಜ್ಯಪಾಲರಾದ ಸುರೇಂದ್ರ ನಾಥ್ ಅವರು, ಅವರ ಕುಟುಂಬದ ಒಟ್ಟು ಒಂಬತ್ತು ಸದಸ್ಯರುಗಳು ದುರ್ಮರಣವನ್ನಪ್ಪಿದರು.
2001ರ ಸೆಪ್ಟೆಂಬರ್ 30 – ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಕಾಂಗ್ರೆಸ್ ನಾಯಕ, ಭಾರತದ ಮಾಜಿ ನಾಗರಿಕ ವಿಮಾನಯಾನ ಸಚಿವ ಮಾಧವ್ ರಾವ್ ಸಿಂದಿಯಾ ಮೃತರಾದರು. ಕಾನ್ಪುರಕ್ಕೆ ಹೋಗುವ ಮಾರ್ಗಮಧ್ಯೆ ತಮ್ಮ ಸೆಸ್ನಾ ವಿಮಾನ ಅಪಘಾತಕ್ಕೀಡಾಗಿ ದುರಂತವಾಗಿ ನಿಧನರಾದರು. ಹಾರಾಟದ ಸಮಯದಲ್ಲಿ, ಪೈಲಟ್ ದೆಹಲಿಯಲ್ಲಿ ವಾಯು ಸಂಚಾರ ನಿಯಂತ್ರಣ (ಎಟಿಸಿ) ಯೊಂದಿಗೆ ಸಂಪರ್ಕವನ್ನು ಕಳೆದುಕೊಂಡರು.
2002ರ ಮಾರ್ಚ್ 3 – ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಟಿಡಿಪಿ ನಾಯಕ, ಲೋಕಸಭಾ ಸ್ಪೀಕರ್ ಜಿಎಂಸಿ ಬಾಲಯೋಗಿ ತಮ್ಮ ಪ್ರಾಣ ಕಳೆದುಕೊಂಡರು. ಕೃಷ್ಣ ಜಿಲ್ಲೆಯ ಕೊಲ್ಲೇರು ಪ್ರದೇಶದಲ್ಲಿರುವ ಕೊವ್ವಾಡಲಂಕಾ ಗ್ರಾಮದಲ್ಲಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದಾಗ ಈ ಘಟನೆ ಸಂಭವಿಸಿತ್ತು.
2005 ಮಾರ್ಚ್ 31 – ಕೈಗಾರಿಕೋದ್ಯಮಿ, ಹರಿಯಾಣದ ಇಂಧನ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್, ತಮ್ಮ ಸಹಯಾತ್ರಿಗಳೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣವನ್ನಪ್ಪಿದರು. ಹರಿಯಾಣ ವಿಕಾಸ್ ಪಕ್ಷದ ನಾಯಕ, ರಾಜ್ಯ ಸಭಾ ಸದಸ್ಯರಾಗಿದ್ದ ಸುರೇಂದ್ರ ಸಿಂಗ್ ಕೂಡ ಇದೇ ಘಟನೆಯಲ್ಲಿ ಮೃತಪಟ್ಟರು.
2009ರ ಸೆಪ್ಟೆಂಬರ್ 2 – ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ ರೆಡ್ಡಿ, ನಲ್ಲಮಲಾ ಅರಣ್ಯ ಪ್ರದೇಶದ ಪರ್ವತಮಯ ಭಾಗದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದರು. ಈ ಘಟನೆ ದೇಶಾದ್ಯಾಂತ ಆಘಾತ ಉಂಟುಮಾಡಿತ್ತು. ಚಿತ್ತೂರು ಜಿಲ್ಲೆಯ ಹಳ್ಳಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
2011 ಎಪ್ರಿಲ್ 30 – ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು, ಅವಳ ರಾಜ್ಯದ ದೂರದ ನಡು ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಜೀವಹಾನಿಗೊಳಗಾದರು. ಹೆಲಿಕಾಪ್ಟರ್ ತವಾಂಗ್‌ನಿಂದ ಹೊರಟು ಇಟಾನಗರಕ್ಕೆ ಹೋಗುವ ಮಾರ್ಗದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಸೆಲಾ ಪಾಸ್ ಬಳಿ ಹಾರಾಟ ನಡೆಸಿದ ಸುಮಾರು 20 ನಿಮಿಷಗಳಲ್ಲೇ ಸಂಪರ್ಕ ಕಳೆದುಕೊಂಡಿತ್ತು.