ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಅಕ್ಟೊಬರ್‌ನಿಂದ ವೇತನ ಹೆಚ್ಚಳ!

First Published Sep 26, 2024, 3:49 PM IST

ಸೆಪ್ಟೆಂಬರ್ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ.  ಸರ್ಕಾರಿ ನೌಕರರ (Government Employees) ತುಟ್ಟಿಭತ್ಯೆ (Dearness Allowance) ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ.  

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಲಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಮೋದಿ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ. 

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಅಕ್ಟೋಬರ್ ಆರಂಭದಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸುವ ಸಾಧ್ಯತೆ ಇದ. ಈ ಕುರಿತು ಹಲವ ವರದಿಗಳು ಪ್ರಕಟಗೊಂಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ದುಬಾರಿ ದುನಿಯಾದಲ್ಲಿನ ವೇತನ ಹೆಚ್ಚಳ ಸುದ್ದಿ ಕೇಂದ್ರ ಸರ್ಕಾರಿ ನೌಕರರ ನೆಮ್ಮದಿಗೆ ಕಾರಣವಾಗಿದೆ.

Latest Videos


ಈ ಬಾರಿ ಕೇಂದ್ರ ಸರ್ಕಾರ ಶೇಕಡಾ 3 ರಿಂದ 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದು ಕೇಂದ್ರ ಸರ್ಕಾರಿ ನೌಕರರ ಒಟ್ಟು ವೇತನದಲ್ಲೂ ಹೆಚ್ಚಳ ಮಾಡಲಿದೆ. 2024ರ ಮಾರ್ಚ್ ತಿಂಗಳಲ್ಲಿ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿತ್ತು. 7ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮಾಡಲಾಗಿತ್ತು.

ಮಾರ್ಚ್ ತಿಂಗಳ ಬಳಿಕ ಇದೀಗ ಮತ್ತೆ ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತಿದೆ. ಈ ಮೂಲಕ ಒಂದು ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸುತ್ತದೆ. ಪಿಂಚಣಿದಾರರಿಗೂ ಇದರ ಲಾಭ ಸಿಗಲಿದೆ. 

ಜನವರಿ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು 46% ರಿಂದ 50% ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ 50% ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತಿದೆ. ಈ ಬಾರಿ ತುಟ್ಟಿಭತ್ಯೆ ಹೆಚ್ಚಳ 53-54% ತಲುಪುವ ನಿರೀಕ್ಷೆಯಿದೆ. ಈ ಸುದ್ದಿ ಹೋರಬೀಳುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. 

ಕಳೆದ ಜುಲೈ 1 ರಿಂದ ಈ ತುಟ್ಟಿಭತ್ಯೆ ಹೆಚ್ಚಳ ಜಾರಿಗೆ ಬಂದಿತು. ಅಂದರೆ, ಹೆಚ್ಚಿದ ಸಂಬಳದೊಂದಿಗೆ ಬಾಕಿ ಮೊತ್ತವನ್ನು ನೌಕರರಿಗೆ ನೀಡಲಾಗುವುದು. 4% ತುಟ್ಟಿಭತ್ಯೆ ಹೆಚ್ಚಳ ಎಂದರೆ ಯಾರಿಗೆ ಎಷ್ಟು ಸಂಬಳ ಹೆಚ್ಚಳ? ಸ್ಪಷ್ಟ ಲೆಕ್ಕಾಚಾರವನ್ನು ನೋಡೋಣ. 4% ಹೆಚ್ಚಿಸಿದರೆ, 7 ನೇ ವೇತನ ಆಯೋಗದ ಅಡಿಯಲ್ಲಿ ಎಷ್ಟು ಪ್ರಯೋಜನ ಸಿಗುತ್ತದೆ? ಯಾವುದೇ ಸರ್ಕಾರಿ ನೌಕರರ ಮೂಲ ವೇತನ ರೂ.18,000 ಆಗಿದ್ದರೆ, 4% ತುಟ್ಟಿಭತ್ಯೆ ಹೆಚ್ಚಳ ಎಂದರೆ, ತಿಂಗಳಿಗೆ ರೂ.720 ಅಂದರೆ ವರ್ಷಕ್ಕೆ ರೂ.8,640 ಸಂಬಳ ಹೆಚ್ಚಳ ದೊರೆಯಲಿದೆ.

ಮೂಲ ವೇತನ ರೂ.20,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.400 ಮತ್ತು ವರ್ಷಕ್ಕೆ ಹೆಚ್ಚುವರಿಯಾಗಿ ರೂ.9,600 ಸಿಗುತ್ತದೆ ಎಂದು ನಿರೀಕ್ಷಿಸಬಹುದು. ಇದು ಶೇಕಡಾ 3 ರಿಂದ 4 ರಷ್ಟು ಹೆಚ್ಚಳದನ್ವಯದ ಲೆಕ್ಕಾಚಾರವಾಗಿದೆ.ಯಾವುದೇ ಸರ್ಕಾರಿ ನೌಕರರ ಮೂಲ ವೇತನ ರೂ.25,000 ಆಗಿದ್ದರೆ, ತಿಂಗಳಿಗೆ ರೂ.1000 ಮತ್ತು ವರ್ಷಕ್ಕೆ ರೂ.12,000 ಸಂಬಳ ಹೆಚ್ಚಳವಾಗಲಿದೆ.

ಮೂಲ ವೇತನ ರೂ.30,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.1200 ಮತ್ತು ವರ್ಷಕ್ಕೆ ರೂ.14,400 ಮತ್ತು ಮೂಲ ವೇತನ ರೂ.50,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.2,000 ಮತ್ತು ವರ್ಷಕ್ಕೆ ರೂ.24,000 ಹೆಚ್ಚುವರಿಯಾಗಿ ಸಿಗಲಿದೆ.ತುಟ್ಟಿಭತ್ಯೆ ಮಾತ್ರವಲ್ಲದೆ, ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ಹೊಸ ವೇತನ ಆಯೋಗ ರಚನೆ ಮತ್ತು ಹಿರಿಯ ನಾಗರಿಕರಿಗೆ ರೈಲು ದರ ರಿಯಾಯಿತಿ ಕುರಿತು ಮೋದಿ ಸರ್ಕಾರ ಪರಿಶೀಲಿಸುತ್ತಿದೆ.

click me!