ಭಾರತದ ಈ ರಾಜ್ಯಗಳಲ್ಲಿ ಒಂದು ಹನಿಯೂ ಮದ್ಯ ಸಿಗಲ್ಲ

First Published | Sep 6, 2024, 6:59 PM IST

ಮದ್ಯಪಾನವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಕುಟುಂಬಗಳ ಮೇಲೆ ಹಣಕಾಸಿನ ಹೊರೆಯನ್ನುಂಟುಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಮದ್ಯಪಾನಕ್ಕೆ ದಾಸನಾದವ ತ್ಯಜಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದಲೇ ಕೆಲವು ರಾಜ್ಯಗಳು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಮದ್ಯ ಸೇವಿಸಿದರೆ ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆ ರಾಜ್ಯಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಅಬಕಾರಿ ಇಲಾಖೆಗಳೇ ಸರ್ಕಾರದ ಮುಖ್ಯ ಆದಾಯ. ಈ ಇಲಾಖೆಯಿಂದಲೇ ಸರ್ಕಾರದ ಬಜೆಟ್ ನಿರ್ಧರಿತವಾಗುತ್ತದೆ. ಆದ್ದರಿಂದಲೇ ಸರ್ಕಾರಗಳು ಬೊಕ್ಕಸ ತುಂಬಿಸಿಕೊಳ್ಳಲು ಮದ್ಯದ ದರವನ್ನು ಸತತವಾಗಿ ಏರಿಕೆ ಮಾಡುತ್ತಲೇ ಇರುತ್ತದೆ. ಆದ್ರೆ ಭಾರತದ ಕೆಲವ ರಾಜ್ಯಗಳಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿವೆ.  ಆ ರಾಜ್ಯಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

ಬಿಹಾರ

ಏಪ್ರಿಲ್ 2016 ರಲ್ಲಿ ಬಿಹಾರ ರಾಜ್ಯಾದ್ಯಂತ ಮದ್ಯ ನಿಷೇಧವನ್ನು ಜಾರಿಗೆ ತಂದಿತು. ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಮದ್ಯ ನಿಷೇಧವನ್ನು ಜಾರಿಗೆ ತರಲಾಗಿದೆ. ಆದರೆ ಕಳ್ಳಸಾಗಣೆಯನ್ನು ತಡೆಯುವಲ್ಲಿ ಅದು ವಿಫಲವಾಗಿದೆ.  ಪಕ್ಕದ ರಾಜ್ಯಗಳಿಂದ ಬಿಹಾರಕ್ಕೆ ಮದ್ಯ ಬರುತ್ತೆ ಎಂಬ ವರದಿಗಳು ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ.  ಬಿಹಾರದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.

Tap to resize

ಗುಜರಾತ್

1960 ರಲ್ಲಿ ರಾಜ್ಯ ರಚನೆಯಾದಾಗಿನಿಂದ ಗುಜರಾತ್ ಮದ್ಯ ನಿಷೇಧವನ್ನು ಪಾಲಿಸುತ್ತಿದೆ. ಗಾಂಧೀಜಿಯವರ ತತ್ವಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದಲ್ಲದೆ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಚುನಾವಣೆ ಸಂದರ್ಭದಲ್ಲಿ ರಹಸ್ಯವಾಗಿ ಮದ್ಯ ಮಾರಾಟ ಮಾಡಲಾಗುತ್ತೆ ಎಂಬ ವರದಿಗಳು ಕೇಳಿ ಬರುತ್ತವೆ.

ಮಿಜೋರಾಂ

ಚರ್ಚ್, ಮಹಿಳಾ ಗುಂಪುಗಳ ನೇತೃತ್ವದಲ್ಲಿ ಮಿಜೋರಾಂ 1997 ರಲ್ಲಿ ಮದ್ಯ ನಿಷೇಧವನ್ನು ಜಾರಿಗೆ ತಂದಿತು. 2015-2019 ರ ನಡುವೆ ನಿಷೇಧವನ್ನು ತೆಗೆದುಹಾಕಲಾಯಿತು. ಆದಾಗ್ಯೂ, ನಿಷೇಧವನ್ನು ಮತ್ತೆ ಜಾರಿಗೆ ತರಲಾಗಿದೆ. ಮದ್ಯ ಮಾರಾಟ ನಿಷೇಧದ ಬಗ್ಗೆ ಇಲ್ಲಿ ಇಂದಿಗೂ ಪರ-ವಿರೋಧದ  ಚರ್ಚೆಗಳು ನಡೆಯುತ್ತಿರುತ್ತವೆ.

ಲಕ್ಷದ್ವೀಪ

ಲಕ್ಷದ್ವೀಪವು ಕಠಿಣ ಮದ್ಯಪಾನ ಕಾನೂನುಗಳನ್ನು ಹೊಂದಿದೆ. ದ್ವೀಪದಲ್ಲಿರುವ ಕೆಲವು ರೆಸಾರ್ಟ್‌ಗಳಿಗೆ ಮಾತ್ರ ಮದ್ಯ ಮಾರಾಟ ಮತ್ತು ಸೇವನೆಯನ್ನು ಸೀಮಿತಗೊಳಿಸಲಾಗಿದೆ. ಲಕ್ಷದ್ವೀಪ ಪ್ರವಾಸಿ ತಾಣವಾಗಿರುವ ಕಾರಣ ಕೆಲವೊಂದು ರೆಸಾರ್ಟ್‌ಗಳಲ್ಲಿ ಮಾತ್ರ ಮದ್ಯ ಲಭ್ಯವಾಗುತ್ತದೆ. ಲಕ್ಷದ್ವೀಪದಲ್ಲಿ ಸ್ಥಳೀಯವಾಗಿ ಮದ್ಯ  ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.

Latest Videos

click me!