ಈ ರಾಶಿಯ ಹುಡುಗಿಯರನ್ನು ಪ್ರೀತಿಯಲ್ಲಿ ಬೀಳಿಸುವುದು ಸುಲಭವಲ್ಲ
ಈ ಕೆಳಗಿನ ರಾಶಿಗಳ ಹುಡುಗೀರನ್ನ ಪ್ರೀತ್ಸೋದು ಅಷ್ಟು ಸುಲಭವಲ್ಲ. ಇವರ ಪ್ರೀತಿ ಗೆಲ್ಲೋಕೆ ತುಂಬಾ ವರ್ಷ ಕಷ್ಟ ಪಡಬೇಕಾಗುತ್ತೆ. ಹಾಗಾದ್ರೆ ಆ ರಾಶಿಗಳು ಯಾವ್ಯಾವು ನೋಡೋಣ.
ಈ ಕೆಳಗಿನ ರಾಶಿಗಳ ಹುಡುಗೀರನ್ನ ಪ್ರೀತ್ಸೋದು ಅಷ್ಟು ಸುಲಭವಲ್ಲ. ಇವರ ಪ್ರೀತಿ ಗೆಲ್ಲೋಕೆ ತುಂಬಾ ವರ್ಷ ಕಷ್ಟ ಪಡಬೇಕಾಗುತ್ತೆ. ಹಾಗಾದ್ರೆ ಆ ರಾಶಿಗಳು ಯಾವ್ಯಾವು ನೋಡೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜಾತಕ, ನಮ್ಮ ಭವಿಷ್ಯ ಮಾತ್ರ ಅಲ್ಲ, ನಮ್ಮ ವ್ಯಕ್ತಿತ್ವ, ನಡವಳಿಕೆ ಕೂಡ ತಿಳ್ಕೊಬಹುದು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಪ್ರೀತಿಯಲ್ಲಿ ಬೀಳ್ತಾರೆ. ಇದು ಸಹಜ. ಆದ್ರೆ ಈ ಕೆಳಗಿನ ರಾಶಿಗಳ ಹುಡುಗೀರನ್ನ ಪ್ರೀತ್ಸೋದು ಅಷ್ಟು ಸುಲಭವಲ್ಲ. ಇವರ ಪ್ರೀತಿ ಗೆಲ್ಲೋಕೆ ತುಂಬಾ ವರ್ಷ ಕಷ್ಟ ಪಡಬೇಕಾಗುತ್ತೆ. ಹಾಗಾದ್ರೆ ಆ ರಾಶಿಗಳು ಯಾವ್ಯಾವು ನೋಡೋಣ.
ಕುಂಭ ರಾಶಿಯ ಹುಡುಗಿಯರು ತುಂಬಾ ಸ್ವತಂತ್ರವಾಗಿ, ಫ್ರೀ ಆಗಿ ಇರಲು ಇಷ್ಟಪಡ್ತಾರೆ. ಈ ಹುಡುಗಿಯರು ತುಂಬಾ ಬುದ್ಧಿವಂತರು ಕೂಡ. ಯಾವ ವಿಷಯವನ್ನೂ ಲೈಟಾಗಿ ತಗೊಳಲ್ಲ. ತುಂಬಾ ಯೋಚನೆ ಮಾಡ್ತಾರೆ. ಇವರು ಪ್ರೀತಿ ಅಂತ ಯಾರಾದ್ರೂ ತಮ್ಮ ಹಿಂದೆ ಬಿದ್ರೆ ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ. ಅದಕ್ಕಿಂತ ತಮ್ಮ ಜೀವನದಲ್ಲಿ ಮುಖ್ಯವಾದ ವಿಷಯಗಳ ಮೇಲೆ ಗಮನ ಕೊಡ್ತಾರೆ. ತಮ್ಮ ಕನಸುಗಳ ಮೇಲೆ ಜಾಸ್ತಿ ಗಮನ ಕೊಡ್ತಾರೆ. ಇವರಿಗೆ ತಮ್ಮ ಗುರಿ ತಲುಪೋವರೆಗೂ ಬೇರೆ ಯೋಚನೆ ಬರಲ್ಲ. ಪ್ರೀತಿಯಲ್ಲಿ ಬಿದ್ರೆ ತಮ್ಮ ಗುರಿ ತಲುಪೋಕೆ ಆಗಲ್ಲ ಅಂತ ಇವರು ಭಾವಿಸ್ತಾರೆ. ಅದಕ್ಕೆ ಈ ರಾಶಿ ಹುಡುಗೀರನ್ನ ಬೇಗ ಪ್ರೀತಿಯಲ್ಲಿ ಕೆಡವೋಕೆ ಆಗಲ್ಲ.
ಕುಜ ಗ್ರಹ ಆಳುವ ಮೇಷ ರಾಶಿಯಲ್ಲಿ ಹುಟ್ಟಿದ ಮಹಿಳೆಯರು ಧೈರ್ಯವಾಗಿ, ಉದ್ವೇಗಭರಿತವಾಗಿ ಇರ್ತಾರೆ. ಈ ರಾಶಿ ಹುಡುಗಿಯರು ಯಾವ ಕ್ಷೇತ್ರದಲ್ಲಿ ಕಾಲಿಟ್ಟರೂ, ಗೆಲುವು ಸಾಧಿಸದೆ ಹಿಂದೆ ಬರಲ್ಲ. ಇವರಿಗೆ ಪ್ರೀತಿಯಲ್ಲಿ ಬೀಳಬೇಕು ಅನ್ನೋ ಆಸೆ ಇದ್ರೂ, ತಮ್ಮ ಹೃದಯವನ್ನ ಕಂಟ್ರೋಲ್ ಅಲ್ಲಿ ಇಟ್ಕೊಳ್ತಾರೆ. ಇವರು ಬೇಗ ಪ್ರೀತಿಯಲ್ಲಿ ಬೀಳಲ್ಲ. ಬೀಳಬೇಕಂದ್ರೆ ತಮ್ಮ ವ್ಯಕ್ತಿತ್ವಕ್ಕೆ ಸೂಟ್ ಆಗೋ ವ್ಯಕ್ತಿ ಸಿಗೋವರೆಗೂ ಕಾಯ್ತಾರೆ.
ಸಿಂಹ ರಾಶಿಯನ್ನು ಸೂರ್ಯ ಆಳ್ತಾನೆ. ಇವರು ಬಲವಾದ ನಂಬಿಕೆ ಹೊಂದಿರ್ತಾರೆ. ಪ್ರೀತಿ ವಿಷಯಕ್ಕೆ ಬಂದ್ರೆ ಇವರಿಗೆ ನಿರೀಕ್ಷೆಗಳು ತುಂಬಾ ಜಾಸ್ತಿ ಇರ್ತವೆ. ಇವರಿಗಂತೂ ಕೆಲವು ರೂಲ್ಸ್ ಇರ್ತವೆ. ಇಂಥ ವ್ಯಕ್ತಿನೇ ಪ್ರೀತಿಸಬೇಕು ಅಂತ ಒಂದು ಲಿಸ್ಟ್ ಮಾಡ್ಕೊಳ್ತಾರೆ. ಯಾರನ್ನ ಕಂಡ ಕಂಡವರನ್ನ ಪ್ರೀತಿಸಲ್ಲ. ಅದಕ್ಕೆ ಇವರು ಬೇಗ ಪ್ರೀತಿಯಲ್ಲಿ ಬೀಳಲ್ಲ. ತುಂಬಾ ಜಾಸ್ತಿ ಸಮಯ ತಗೊಳ್ತಾರೆ. ಅಷ್ಟೇ ಅಲ್ಲದೆ ಈ ರಾಶಿ ಹುಡುಗಿಯರಿಗೆ ತಮ್ಮನ್ನ ಯಾರಾದ್ರೂ ಹೊಗಳ್ತಾ ಇದ್ರೆ ತುಂಬಾ ಇಷ್ಟ ಆಗುತ್ತೆ. ತಮ್ಮನ್ನ ಪ್ರೀತಿಸೋರು ಕೂಡ ಯಾವಾಗಲೂ ಹೊಗಳ್ತಾ ಇರಬೇಕು ಅಂತ ಅನ್ಕೊಳ್ತಾರೆ.
ವೃಶ್ಚಿಕ ರಾಶಿ ಹುಡುಗೀರನ್ನ ಪ್ರೀತಿಯಲ್ಲಿ ಕೆಡವೋದು ಕೂಡ ಅಷ್ಟು ಸುಲಭವಲ್ಲ. ಯಾಕಂದ್ರೆ ಇವರು ಬೇಗ ಬೇರೆಯವರನ್ನ ನಂಬಲ್ಲ. ಅವರು ಒಬ್ಬರನ್ನ ನಂಬಬೇಕಂದ್ರೆ ತುಂಬಾ ಸಮಯ ಬೇಕಾಗುತ್ತೆ. ಈ ರಾಶಿ ಹುಡುಗಿಯರು ಯಾರ ಜೊತೆಗಾದ್ರೂ ಯಾವ ರಿಲೇಷನ್ ಅಲ್ಲಿ ಕಾಲಿಡಬೇಕು ಅಂದ್ರೂ ಒಂದು ನೂರು ಸಾರಿ ಯೋಚನೆ ಮಾಡ್ತಾರೆ. ಅಷ್ಟು ಸುಲಭವಾಗಿ ಯಾರನ್ನೂ ನಂಬಲ್ಲ. ಅದಕ್ಕೆ ಇವರು ಪ್ರೀತಿಯಲ್ಲಿ ಬೀಳೋಕೆ ತುಂಬಾ ಸಮಯ ತಗೊಳ್ತಾರೆ.
ಮಕರ ರಾಶಿಯನ್ನು ಶನಿ ಆಳ್ತಾನೆ. ಈ ರಾಶಿ ಹುಡುಗಿಯರು ಕೂಡ ಅಷ್ಟು ಬೇಗ ಪ್ರೀತಿಯಲ್ಲಿ ಬೀಳಲ್ಲ. ತುಂಬಾ ಪ್ರಾಕ್ಟಿಕಲ್ ಆಗಿ ಇರ್ತಾರೆ. ಇವರಿಗಂತೂ ಜೀವನದಲ್ಲಿ ಕೆಲವು ಗುರಿಗಳು ಇರ್ತವೆ. ಇವರಿಗೆ ಕೆರಿಯರ್ ಮೇಲೆ ಇರೋ ಗಮನ ಬೇರೆ ಯಾವುದರ ಮೇಲೂ ಇರಲ್ಲ. ಯಾವ ವಿಷಯದಲ್ಲೂ ಯೋಚನೆ ಮಾಡಿ ಹೆಜ್ಜೆ ಹಾಕ್ತಾರೆ. ಅದಕ್ಕೆ ಇವರಿಗೆ ಪ್ರೀತಿ ಬಗ್ಗೆ ಯೋಚನೆ ಮಾಡೋಕೆ ಸಮಯ ಕೂಡ ಇರಲ್ಲ. ಅದಕ್ಕೆ ಇವರು ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳಲ್ಲ.