ಹೆಣ್ಣನ್ನು ಬಲೆಗೆ ಬೀಳಿಸಿಕೊಳ್ಳಲು ಗಂಡಿಗೆ ಇರಲೇಬೇಕಾದ ಗುಣಗಳಿವು!

Published : Apr 18, 2024, 03:23 PM IST

ಹಿಂದೂ ಧರ್ಮದಲ್ಲಿ ಅನೇಕ ಗ್ರಂಥಗಳಿವೆ. ಅವುಗಳಲ್ಲಿ ಪುರುಷ ಮತ್ತು ಮಹಿಳೆಯರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸಲಾಗಿರುತ್ತದೆ. ಅಂತಹುದೇ ಒಂದು ಗ್ರಂಥ ನೀತಿ ಶಾಸ್ತ್ರ. ಇದರಲ್ಲಿ ಮಹಿಳೆಯರು ಎಂಥಹ ಪುರುಷರತ್ತ ಬೇಗನೆ ಆಕರ್ಷಿತರಾಗುತ್ತಾರೆ ಅನ್ನೋದನ್ನು ತಿಳಿಯೋಣ.   

PREV
17
ಹೆಣ್ಣನ್ನು ಬಲೆಗೆ ಬೀಳಿಸಿಕೊಳ್ಳಲು ಗಂಡಿಗೆ ಇರಲೇಬೇಕಾದ ಗುಣಗಳಿವು!

ಜೀವನ ನಿರ್ವಹಣೆಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಹಿಂದೂ ಧರ್ಮದಲ್ಲಿ ರಚಿಸಲಾಗಿದೆ. ಅವುಗಳಲ್ಲಿ ನೀತಿಶಾಸ್ತ್ರವೂ ಒಂದು. ಯಾವುದೇ ಮಹಿಳೆ ಪುರುಷನ ಕಡೆಗೆ ಆಕರ್ಷಿತಳಾಗುವ (attractive characters) ಗುಣಗಳು ಯಾವುವು ಎಂದು ನೀತಿಶಾಸ್ತ್ರದಲ್ಲಿ ಹೇಳಲಾಗಿದೆ.
 

27

ಪುರುಷರಲ್ಲಿ ಈ ಐದು ಗುಣಗಳಿರಬೇಕು ಎಂದು ಬಯಸುತ್ತಾರೆ ಮಹಿಳೆಯರು
ನೀತಿ ಶಾಸ್ತ್ರದ (Niti Shastra) ಅನುಸಾರ ಯಾವ ಪುರುಷನಲ್ಲಿ ಈ ಐದು ಗುಣಗಳಿವೆ, ಅವರತ್ತ ಮಹಿಳೆ ಬೇಗ ಆಕರ್ಷಿತರಾಗುತ್ತಾರೆ. ಇವು ಸಾಮಾನ್ಯ ಗುಣಗಳಾಗಿವೆ. ಹಾಗಿದ್ರೆ ಆ ಐದು ಗುಣಗಳು ಯಾವುವು ?

37

ಪುರುಷರ ಈ ಗುಣ ಸ್ಪೆಷಲ್ 
ನೀತಿಶಾಸ್ತ್ರದ ಅನುಸಾರ ಯಾವ ಪುರುಷರು ತುಂಬಾ ಪ್ರಾಮಾಣಿಕರು ಮತ್ತು ಪರಿಶ್ರಮಿಗಳು (hardworker) ಆಗಿರುತ್ತಾರೆ ಅಂತಹ ಪುರುಷರ ಕಡೆಗೆ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ. ಇಂತಹ ವ್ಯಕ್ತಿಗಳ ಕಡೆಗೆ ಮಹಿಳೆಯರು ಆಯಸ್ಕಾಂತದಂತೆ ಆಕರ್ಷಿತರಾಗುತ್ತಾರೆ. 

47

ಮಹಿಳೆಯರಿಗೆ ಗೌರವ ನೀಡುವ ಪುರುಷರು
ಯಾವ ಪುರುಷ ಮಹಿಳೆಯರಿಗೆ ಗೌರವ (respect women) ಕೊಡುತ್ತಾನೆ. ಅಂತವರತ್ತ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ. ಯಾಕೆಂದರೆ ಇಂತಹ ಪುರುಷರು ಮಹಿಳೆಯರ ಮಾತನ್ನು ಶಾಂತ ರೀತಿಯಲ್ಲಿ ಕೇಳುತ್ತಾರೆ ಮತ್ತು ಅವರನ್ನುಅರ್ಥಮಾಡಿಕೊಳ್ಳುತ್ತಾರೆ. 
 

57

ಸಿಹಿ ಮಾತುಗಳನ್ನಾಡುವವರು
ಯಾವ ಪುರುಷರು ಸಿಹಿಯಾಗಿ ಅಂದರೆ ಮೃದುವಾಗಿ ಮಾತನಾಡುತ್ತಾರೋ ಮತ್ತು ಯಾರೂ ಶಾಂತ ಸ್ವಭಾವವನ್ನು ಹೊಂದಿರುತ್ತಾರೋ ಅವರ ಜೊತೆ ಮಹಿಳೆಯರು ಬಹು ಬೇಗ ಅಟ್ಯಾಚ್ ಮೆಂಟ್ ಬೆಳೆಸಿಕೊಳ್ಳುತ್ತಾರೆ. ನಿಷ್ಠುರವಾಗಿ ಮಾತನಾಡುವ ಪುರುಷರಂದ್ರೆ ಮಹಿಳೆಯರಿಗೆ ಇಷ್ಟವೇ ಇರೋದಿಲ್ಲ. 

67

ಮನಸ್ಸಿನ ಮಾತು ಅರ್ಥ ಮಾಡಿಕೊಳ್ಳುವವರು
ಯಾವ ಪುರುಷನಿಗೆ ನಾವು ಒಂದು ಮಾತನ್ನು ಹೇಳದೆಯೂ ಮನಸ್ಸಿನ ಭಾವನೆಗಳು, ಮಾತು ಅರ್ಥವಾಗುತ್ತದೆಯೋ? ಅಂತಹ ಪುರುಷರಿಗೆ ಮಹಿಳೆಯರು ತಮ್ಮ ಜೀವನದಲ್ಲಿ ವಿಶೇಷ ಸ್ಥಾನ ನೀಡುತ್ತಾರೆ. ಇಂತಹ ಪುರುಷರು ಎಂತಹ ಪರಿಸ್ಥಿತಿಯಲ್ಲೂ ಮಹಿಳೆಯರ ಜೊತೆ ಸದಾ ಇರುತ್ತಾರೆ. 

77

ಉತ್ತಮ ಕೇಳುಗ
ಮಹಿಳೆಯರ ಮಾನಸ್ಸಿನಲ್ಲಿ ತುಂಬಾನೆ ವಿಷ್ಯಗಳು ಇರುತ್ತವೆ. ಆದರೆ ಅವರು ಯಾವಾಗಲೂ ಎಲ್ಲವನ್ನೂ ಹೇಳೋದಿಲ್ಲ. ಯಾವ ಪುರುಷ ಮಹಿಳೆ ಹೇಳುವ ಮಾತುಗಳನ್ನು ಗಮನವಿಟ್ಟು ಕೇಳುತ್ತಾನೋ (good listener) ಹಾಗೂ ಸೂಕ್ಷ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾನೋ, ಅವರನ್ನು ಮಹಿಳೆಯರು ಬೇಗನೆ ಇಷ್ಟಪಡ್ತಾರೆ. 

Read more Photos on
click me!

Recommended Stories