ವಿವಾಹಿತ ಮಹಿಳೆ ಈ ಒಂದು ಕೆಲಸ ಮಾಡಿದರೆ ಗಂಡನ ಆಯುಷ್ಯ ಕ್ಷೀಣವಾಗುತ್ತದೆ ಎಂದು ಆಚಾರ್ಯ ಚಾಣಕ್ಯ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಹಾಗಾಗಿ ಮುತ್ತೈದೆಯ ಸಾವನ್ನು ಬಯಸುವ ವಿವಾಹಿತ ಮಹಿಳೆ ಈ ರೀತಿ ಮಾಡಬಾರದು ಎಂದು ಆಚಾರ್ಯ ಚಾಣಕ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ.
ಪತಿಯ ಅನುಮತಿ ಮತ್ತು ಒಪ್ಪಿಗೆಯಿಲ್ಲದೆ ಉಪವಾಸ ಮಾಡುವ ಮಹಿಳೆ ತನ್ನ ಗಂಡನ ಆಯುಷ್ಯವನ್ನು ಕಡಿಮೆ ಮಾಡುತ್ತಾಳೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಿದ್ದಾನೆ. ಈ ರೀತಿ ಮಾಡುವುದರಿಂದ ಮಹಿಳೆ ತೊಂದರೆಗೆ ಸಿಲುಕುತ್ತಾಳೆ.
ವಿಶೇಷ ದಿನಗಳಲ್ಲಿ ಉಪವಾಸ ಮಾಡುವುದು ಹಿಂದೂ ಸಂಪ್ರದಾಯ. ಅದರಲ್ಲೂ ಮಹಿಳೆಯರು ಸಂಕಷ, ಏಕಾದಶಿ ಮೊದಲಾದ ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಈ ರೀತಿ ಉಪವಾಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ವಿಶೇಷ ಪೂಜೆಗಳನ್ನು ನಡೆಸುವಾಗ ಮನೆಯ ಮುಖ್ಯಸ್ಥರು ವಿದ್ವಾಂಸರ ಸಲಹೆಯಂತೆ ಉಪವಾಸ ಮಾಡುತ್ತಾರೆ. ಮಹಿಳೆಯರು ತಮ್ಮ ಗಂಡನ ಆಯುಷ್ಯವನ್ನು ಹೆಚ್ಚಿಸಲು ಕರ್ವಾ ಚೌತ್ ಹಬ್ಬದಂದು ಉಪವಾಸ ಮಾಡುತ್ತಾರೆ.
ಗಂಡ ವಿರೋಧಿಸಿದರೆ ಹೆಂಡತಿ ಉಪವಾಸ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಗಂಡನ ವಿರೋಧದ ನಡುವೆಯೂ ಮಹಿಳೆ ಉಪವಾಸ ಮಾಡಿದರೆ ಗಂಡನ ಆಯಸ್ಸು ಕ್ಷೀಣಿಸುತ್ತದೆ. ಮೇಲಾಗಿ ಹೆಣ್ಣಿನ ಕಷ್ಟ ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಎನ್ನುತ್ತಾರೆ.
ಭಾರತೀಯ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ನೂರಾರು ಪೂಜೆಗಳನ್ನು ಮಾಡುತ್ತಾರೆ. ನಮ್ಮ ಪುರಾಣಗಳಲ್ಲಿ ಸತಿ ಸಾವಿತ್ರಿಯು ಯಮನೊಂದಿಗೆ ಹೋರಾಡಿ ತನ್ನ ಗಂಡನ ಪ್ರಾಣವನ್ನು ಉಳಿಸಿದ ಕಥೆಗಳಿವೆ. ಅದಕ್ಕೇ ಚಾಣಕ್ಯ ಈ ತಪ್ಪನ್ನು ಮಾಡಬಾರದು ಎಂದರು.