ಓಪನ್ ಹೇರ್ ಬಿಡ್ಕೊಂಡು ಹೆಣ್ಮಕ್ಕಳು ರಾತ್ರಿ ಮನೆಯಿಂದ ಹೊರಗೆ ಹೋಗ್ಬಾರ್ದಂತೆ!

First Published | Jun 3, 2024, 6:26 PM IST

ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ವಿಷಯಗಳು ಖಂಡಿತವಾಗಿಯೂ ನಮ್ಮ ನಿಜ ಜೀವನದೊಂದಿಗೆ ಅಲ್ಪ, ಸ್ವಲ್ಪ ಸಂಬಂಧವನ್ನು ಹೊಂದಿದೆ. ನೀವು ಈ ನಿಯಮಗಳನ್ನು ಅನುಸರಿಸಿದರೆ, ಸಂತೋಷ ನಿಮ್ಮ ಬದುಕನ್ನು ತುಂಬೋದು ಖಚಿತ. 
 

ನಮ್ಮ ಧರ್ಮಗ್ರಂಥಗಳಲ್ಲಿ ಅನೇಕ ವಿಷಯಗಳನ್ನು ಬರೆಯಲಾಗಿದೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ,  ಅದರಿಂದ ಜೀವನದಲ್ಲಿ ಸಂತೋಷವಾಗಿರೋದು ಸಾಧ್ಯ. ಧರ್ಮಗ್ರಂಥಗಳಲ್ಲಿ ಬರೆದಿರುವ ಪ್ರತಿಯೊಂದೂ ವಿಷಯಕ್ಕೂ ಒಂದೊಂದು ಅರ್ಥವಿದೆ ಮತ್ತು ಅದು ನಮ್ಮ ಜೀವನಕ್ಕೆ ಸಂಬಂಧಿಸಿದೆ ಅನ್ನೋದು ನಿಜ. ಅಂತೆಯೇ, ನಮ್ಮ ದೇಹಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಧರ್ಮಗ್ರಂಥಗಳಲ್ಲಿ (Dharmagrantha) ಹೇಳಲಾಗಿದೆ, ಇವುಗಳಲ್ಲಿ ಒಂದು ಕೂದಲು ಫ್ರೀ ಆಗಿ ಬಿಟ್ಟು, ರಾತ್ರಿಯಲ್ಲಿ ಮನೆಯಿಂದ ಹೊರ ಬರಬಾರದು. ನೀವು ರಾತ್ರಿ ಮನೆಯಿಂದ ಹೊರಬಂದಾಗಲೆಲ್ಲಾ ಕೂದಲನ್ನು ಕಟ್ಟಿ ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಎಷ್ಟು ಬಾರಿ ಕೇಳಿದ್ದೀರಿ ಅಲ್ವಾ? ಅದು ಯಾಕೆ ಅನ್ನೋದನ್ನು ತಿಳಿಯೋಣ. 
 

ಇದು ವಿಶೇಷವಾಗಿ ಮಹಿಳೆಯರಿಗೆ ಅನ್ವಯಿಸುತ್ತದೆ ಮತ್ತು ಕೂದಲು ಬಿಚ್ಚಿ ಹೊರಗಡೆ ಹೋಗ್ಬೇಡಿ ಅಂತ ಮನೆಯ ಹಿರಿಯರು ರೇಗಾಡಿದ್ದು ಕೇಳಿರ್ತೀವಿ. ಹೀಗೆ ಮಾಡೋದರಿಂದ ಮನೆ ಮೇಲೆ ನಕಾರಾತ್ಮಕ ಶಕ್ತಿ (negative energy) ಬೀಳುತ್ತದೆ ಅಥವಾ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಯೂ ಇದೆ ಅನ್ನೋದನ್ನು ಗ್ರಂಥಗಳಲ್ಲಿ ಬರೆಯಲಾಗಿದೆ. ಅವುಗಳನ್ನು ಬಗ್ಗೆ ಪೂರ್ತಿಯಾಗಿ ತಿಳಿಯೋಣ. 
 

Tap to resize

ಕೂದಲನ್ನು ಓಪನ್ ಆಗಿ ಬಿಡೋದ್ರಿಂದ ನಕಾರಾತ್ಮಕ ಶಕ್ತಿ (Negative Energy) ಹೆಚ್ಚುತ್ತೆ
ಜ್ಯೋತಿಷ್ಯ ಮತ್ತು ಅನೇಕ ಸಾಂಪ್ರದಾಯಿಕ ನಂಬಿಕೆಗಳು ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳು ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತೆ ಎಂದು ಹೇಳುತ್ತವೆ. ಕೂದಲನ್ನು ಓಪನ್ ಆಗಿ ಬಿಟ್ಕೊಂಡ್ರೆ ಇದರಿಂದ ಕೆಟ್ಟ ದೃಷ್ಟಿ ನಿಮ್ಮೆಡೆಗೆ ಬೇಗ ಆಕರ್ಷಿತವಾಗುತ್ತವೆ. ಕೂದಲು ಯಾವುದೇ ವ್ಯಕ್ತಿಯ ದೇಹದ ಪ್ರಬಲ ಭಾಗವಾಗಿರುವುದರಿಂದ, ನಕಾರಾತ್ಮಕ ಶಕ್ತಿ ಬಹು ಬೇಗ ಕೂದಲಿನತ್ತ ಆಕರ್ಷಿತವಾಗುತ್ತದೆ ಎಂದು ಗ್ರಂಥಗಳು ತಿಳಿಸಿವೆ. ಇದರಿಂದಾಗಿ ನೀವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು (mental problem) ಹೊಂದಬಹುದು. ಹಾಗಾಗಿ ರಾತ್ರಿ ಹೊತ್ತು ಕೂದಲು ಓಪನ್ ಆಗಿ ಬಿಟ್ಕೊಂಡು ಹೊರಗೆ ಹೋಗಬೇಡಿ. 

ರಾತ್ರಿ ಮನೆಯಿಂದ ಹೊರಗೆ ಹೋಗೋದಾದರೆ ಕೂದಲನ್ನು ಕಟ್ಟಿಕೊಂಡೇ ಹೊರಗೆ ಹೋಗಿ. ಕೂದಲನ್ನು ಕಟ್ಟುವುದು ವ್ಯಕ್ತಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ನಿಮ್ಮ ಕೂದಲನ್ನು ಓಪನ್ ಆಗಿ ಬಿಟ್ಕೊಂಡು, ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿ ಹೇರಳವಾಗಿರುವ ಸ್ಥಳಕ್ಕೆ ಪ್ರವೇಶಿಸಿದರೆ, ಅದು ಬೇಗ ಕೂದಲಿನ ಮೂಲಕ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತೆ. 
 

ಓಪನ್ ಹೇರ್ ಬಿಡೋದು ಅಂದ್ರೆ ಅದು ಕ್ರೋಧದ ಸಂಕೇತವಾಗಿದೆ
ಓಪನ್ ಹೇರ್ (open hair) ಬಿಡೋದು ಪ್ರಾಚೀನ ಕಾಲದಿಂದಲೂ ಕ್ರೋಧ ಮತ್ತು ಕೋಪದೊಂದಿಗೆ ಸಂಬಂಧ ಹೊಂದಿದೆ. ರಾಮಾಯಣದ ಕಾಲದಲ್ಲಿಯೂ ಕೈಕೇಯಿ ಕೋಪಗೊಂಡಿದ್ದಾಗ, ಆಕೆ ಕೂದಲನ್ನು ಬಿಚ್ಚಿ ಕುಳಿತಿದ್ದಳು, ಅಂದಿನಿಂದಲೇ ಕೂದಲು ಓಪನ್ ಆಗಿ ಬಿಡೋದು ಅಂದ್ರೆ ಕ್ರೋಧದ ಸಂಕೇತ ಅನ್ನೋದನ್ನು ಸೂಚಿಸುತ್ತದೆ. ಅದಕ್ಕಾಗಿಯೇ ರಾತ್ರಿ ವೇಳೆ ಮಹಿಳೆಯರು ಕೂದಲು ಬಿಟ್ಟು ಹೊರ ಹೋಗಬಾರದು ಎನ್ನುತ್ತಾರೆ. 

ಕೆಲವು ಸಂಸ್ಕೃತಿ, ಆಚರಣೆಗಳಲ್ಲಿ, ಕೂದಲನ್ನು ಓಪನ್ ಆಗಿ ಬಿಡೋದನ್ನೇ ವಿರೋಧಿಸಲಾಗಿದೆ. ಮಹಿಳೆಯರು ಹೆಚ್ಚಾಗಿ ದುಃಖ, ನೋವಿನ ಸಮಯದಲ್ಲಿ ಕೂದಲನ್ನು ಓಪನ್ ಆಗಿ ಬಿಡ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ಜ್ಯೋತಿಷ್ಯದ ಪ್ರಕಾರ, ಮಹಿಳೆಯರು ರಾತ್ರಿಯಲ್ಲಿ ಕೂದಲು ಓಪನ್ ಆಗಿ ಬಿಟ್ಕೊಂಡು ಮನೆಯಿಂದ ಹೊರಗೆ ಹೋಗುವುದು ದುಃಖ ಮತ್ತು ದುರದೃಷ್ಟವನ್ನು ಆಹ್ವಾನಿಸುತ್ತದೆ ಮತ್ತು ಇದು ನಕಾರಾತ್ಮಕ ಸಂಕೇತವನ್ನು ಸೂಚಿಸುತ್ತದೆ.

ರಜೋ ಗುಣ ಹೆಚ್ಚುತ್ತೆ
ಮಹಿಳೆ ತನ್ನ ಕೂದಲನ್ನು ಓಪನ್ ಆಗಿ ಬಿಟ್ರೆ , ಅವಳ ಕೂದಲಿನಲ್ಲಿರುವ ರಜೋಗುಣ ಇನ್ನಷ್ಟು ಹೆಚ್ಚಾಗುತ್ತದೆ. ರಜೋ ಗುಣ ಹೆಚ್ಚಾದರೆ ವ್ಯಕ್ತಿಯ ಮನಸ್ಸು ಹೆಚ್ಚು ಚಂಚಲವಾಗುತ್ತದೆ ಮತ್ತು ದುಂದು ವೆಚ್ಚದ ಪ್ರವೃತ್ತಿ ಹೆಚ್ಚಾಗುತ್ತದೆ. ಮನಸ್ಸಿನ ಈ ಚಂಚಲತೆಯಿಂದ ನಕಾರಾತ್ಮಕ ಶಕ್ತಿಗಳು ಮಹಿಳೆಯಿಂದ ಕೆಟ್ಟ ಕೆಲಸಗಳನ್ನು ಮಾಡಿಸುವ ಸಾಧ್ಯತೆ ಇದೆ. 

ಮಹಿಳೆಯರು ತಮ್ಮ ಕೂದಲನ್ನು ಓಪನ್ ಆಗಿ ಬಿಟ್ರೆ, ಆ ಮಹಿಳೆಯರು ತಮ್ಮ ಐದು ಇಂದ್ರಿಯಗಳು ತಮ್ಮ ದೇಹದ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಇದರಿಂದ ಬೇಗ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಇದರಿಂದಾಗಿ ಆ ಮಹಿಳೆಯರು ಬೇಗನೆ ಖಿನ್ನತೆ (Depression), ಆತಂಕ ಮೊದಲಾದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಇದು ಸಣ್ಣ ಕೂದಲಿನ ಮಹಿಳೆಯರಿಗೂ ಕೆಟ್ಟದ್ದಾಗಿದೆ.

ರಾತ್ರಿ ಮಲಗೋವಾಗ್ಲೂ ಕೂದಲು ತೆರೆದಿಡಬಾರದಂತೆ 
ಕೂದಲು ಓಪನ್ ಆಗಿ ಬಿಟ್ಟು ರಾತ್ರಿಯಲ್ಲಿ ಹೊರಗೆ ಹೋಗುವುದನ್ನು ನಿಷೇಧಿಸಿದಂತೆಯೇ, ಮಲಗುವಾಗ ಕೂದಲನ್ನು ತೆರೆಯುವುದನ್ನು ಸಹ ನಿಷೇಧಿಸಲಾಗಿದೆ. ಮಹಿಳೆ ತನ್ನ ಕೂದಲನ್ನು ತೆರೆದಿಟ್ಟು ಮಲಗಿದರೆ ಕೂದಲಿನ ತುದಿಗಳು ಸ್ಪ್ಲಿಟ್ ಆಗುತ್ತವೆ. ಮಲಗುವಾಗ, ಪರಿಸರದಲ್ಲಿ ರಾಜ-ತಮದ ಹೆಚ್ಚಿದ ಕಂಪನಗಳಿಂದಾಗಿ ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ನಕಾರಾತ್ಮಕ ಶಕ್ತಿಗಳ ದಾಳಿಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚು. 

Latest Videos

click me!