ಹನುಮ ಜಯಂತಿಯಂದು ಹನುಮಂತನನ್ನು ಪೂಜಿಸುವುದು ಹೇಗೆ?
ಇನ್ನು ಕೆಲವು ಜ್ಯೋತಿಷಿಗಳ ಪ್ರಕಾರ ಇಂದು ಹನುಮ ಜಯಂತಿ. ಹನುಮಾನ್ ಜಯಂತಿಯ ದಿನದಂದು, ಶ್ರೀ ರಾಮ ಮತ್ತು ಹನುಮಂತರ ಚಿತ್ರ ಅಥವಾ ಪ್ರತಿಮೆಯನ್ನು ಪೀಠದ ಮೇಲೆ ಸ್ಥಾಪಿಸಿ. ಅವರ ಮುಂದೆ ತುಪ್ಪದ ದೀಪ ಬೆಳಗಿಸಿ. ಅವರಿಗೆ ಹಣ್ಣುಗಳು, ಹೂವುಗಳು ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಮೊದಲು ಶ್ರೀರಾಮನನ್ನು (Shri Rama) ಪೂಜಿಸಿ, ನಂತರ ಹನುಮಂತನನ್ನು ಪೂಜಿಸಬೇಕು. ಪೂಜೆಯ ನಂತರ, ನೀವು ಬಯಸಿದರೆ ಹನುಮಾನ್ ಚಾಲೀಸಾವನ್ನು ಸಹ ಪಠಿಸಬಹುದು. ಅಂತಿಮವಾಗಿ, ಹನುಮಂತನಿಗೆ ಆರತಿಯನ್ನು ಮಾಡಿ, ನಿಮ್ಮ ಇಚ್ಚೆಗಳನ್ನು ಹೇಳಿದರೆ, ಸಮಸ್ಯೆ ಈಡೇರುತ್ತದೆ ಎಂದು ಅರ್ಥ.