ಅಕ್ಷಯ ತೃತೀಯ (Akshaya Tritiya) ದಿನವನ್ನು ಶುಭ ದಿನವೆಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನದಂದು ಶುಭ ಕೆಲಸ ಮಾಡಿದರೆ ಶುಭ ಫಲ ಲಭ್ಯವಾಗುತ್ತದೆ. ಆದರೆ ನೀವು ಮಾಡುವ ಕೆಲವು ಕೆಲಸಗಳನ್ನು ನಿಮ್ಮ ಜೀವನವನ್ನೇ ಹಾಳು ಮಾಡಬಹುದು. ಅವುಗಳನ್ನು ಮಾಡಲೇಬಾರದು. ಅಂತಹ ಕೆಲಸಗಳು ಯಾವುವು?
ಅಕ್ಷಯ ತೃತೀಯ ಯಾವಾಗ?
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯ ಆರಂಭ 10 ಮೇ, 2024 ರ ಮುಂಜಾನೆ 4 ಗಂಟೆ 17 ನಿಮಿಷಕ್ಕೆ ಆರಂಭವಾಗಲಿದೆ. ಜೊತೆಗೆ ಈ ತಿಥಿಯ ಮುಕ್ತಾಯ 11 ಮೇ ರಾತ್ರಿ 2 ಗಂಟೆ 50 ನಿಮಿಷದವರೆಗೆ ಇರುತ್ತದೆ.
ಈ ದಿನ ಯಾವ ಕೆಲಸ ಮಾಡಬಾರದು ನೋಡೋಣ…
ಸಂಜೆ ಹೊತ್ತು ಗುಡಿಸಬೇಡಿ :
ಅಕ್ಷಯ ತೃತೀಯದಂದು ಸಂಜೆಯ ಹೊತ್ತು ಅಪ್ಪಿ ತಪ್ಪಿಯೂ ಮನೆಯಲ್ಲಿ ಕಸ ಗುಡಿಸಬೇಡಿ. ಇದರಿಂದ ಲಕ್ಷ್ಮೀ ದೇವಿ (Goddess Lakshmi) ಕೋಪಗೊಳ್ಳುತ್ತಾಳೆ.
ಕೊಳಕು ಇಡಬೇಡಿ
ಅಕ್ಷಯ ತೃತೀಯ ದಿನ ಮಾತೆ ಲಕ್ಷ್ಮೀ ದೇವಿಗೆ ಸಮರ್ಪಿತವಾಗಿರುತ್ತೆ. ಹಾಗಾಗಿ ಈ ದಿನ ಅಪ್ಪಿ ತಪ್ಪಿಯೂ ನಿಮ್ಮ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳಬಾರದು. ಇದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ.
ಜಗಳ ಮಾಡಬೇಡಿ
ಅಕ್ಷಯ ತೃತೀಯ ದಿನದಂದು ತಪ್ಪಿಯೂ ಕೂಡ ಮನೆಯಲ್ಲಿ ಯಾರೊಂದಿಗೂ ಜಗಳ (Quarrel) ಮಾಡಬೇಡಿ. ಜೊತೆಗೆ ಈ ದಿನ ಮನೆಯ ಹಿರಿಯರ ಜೊತೆಗೆ ಅಥವಾ ಮಹಿಳೆಯರಿಗೆ ಅವಮಾನ ಮಾಡಬಾರದು.
ಯಾರಿಗೂ ಇಲ್ಲ ಎಂದು ಹೇಳಬೇಡಿ
ಯಾರಾದರೂ ಅಗತ್ಯ ಇದ್ದವರು, ಹಸಿವಿನಿಂದ ಬಳಲುತ್ತಿರುವ ವ್ಯಕ್ತಿ ನಿಮ್ಮ ಬಳಿ ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸಬೇಡಿ. ಅವರಿಗೆ ನಿಮಗೆ ಸಾಧ್ಯವಾದಷ್ಟು ಕೊಟ್ಟು ಕಳುಹಿಸಿ.
ದೀಪ ಹಚ್ಚಿ
ಅಕ್ಷಯ ತೃತೀಯದಂದು ತಾಯಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಸಂಜೆಯ ಹೊತ್ತು ಮನೆಯ ಬಾಗಿಲಿನಲ್ಲಿ ದೀಪ (light diya) ಇಡಿ. ಇದರಿಂದ ಮನೆಯಲ್ಲಿ ಸಂತೋಷ ಸದಾ ನೆಲೆಸಿರುತ್ತದೆ.