ನಿಮ್ಮ ರಾಶಿ ಪ್ರಕಾರ ಯಾವ ಕರಿಯರ್ ಆಯ್ಕೆ ಮಾಡ್ಕೊಂಡ್ರೆ ಸಕ್ಸಸ್ ಆಗ್ತೀರಿ?

Published : Jul 10, 2024, 05:35 PM ISTUpdated : Jul 10, 2024, 06:11 PM IST

ನಿಮ್ಮ ರಾಶಿ ಚಕ್ರದ ಅನುಸಾರವಾಗಿ ಯಾವ ಕರಿಯರ್ ಆಯ್ಕೆ ಮಾಡಿಕೊಂಡ್ರೆ ನಿಮ್ಮ ಭವಿಷ್ಯ ಉನ್ನತವಾಗಿರುತ್ತೆ ಅನ್ನೋದು ನಿಮಗೆ ಗೊತ್ತಾ? ಇಲ್ಲಾಂದ್ರೆ ಇಲ್ಲಿದೆ ನಿಮಗಾಗಿ ಮಾಹಿತಿ.   

PREV
112
ನಿಮ್ಮ ರಾಶಿ ಪ್ರಕಾರ ಯಾವ ಕರಿಯರ್ ಆಯ್ಕೆ ಮಾಡ್ಕೊಂಡ್ರೆ ಸಕ್ಸಸ್ ಆಗ್ತೀರಿ?

ಮೇಷ ರಾಶಿ : ಮೇಷ ರಾಶಿಯವರು ಹೆಚ್ಚಾಗಿ ಸೈನಿಕರು, ಉದ್ಯಮಿ, ಪರ್ಸನಲ್ ಟ್ರೈನರ್, ರಕ್ಷಣಾ ಕಾರ್ಯಕರ್ತ (rescue worker) ಹಾಗೂ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ತಮ್ಮ ಕರಿಯರ್ ಕಂಡುಕೊಳ್ಳುತ್ತಾರೆ. 
 

212

ವೃಷಭ ರಾಶಿ : ಈ ರಾಶಿಯವರು ಶೆಫ್ ಆಗಿ, ಡಿಸೈನರ್, ಲಾಯರ್, ಶಿಕ್ಷಣತಜ್ಞ (educator), ಅಕೌಂಟಟ್ ಮೊದಲಾದ ಕರಿಯರ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. 
 

312

ಮಿಥುನ ರಾಶಿ : ಮಿಥುನ ರಾಶಿಯ ಜನರು ಟ್ರಾನ್ಸಲೇಟರ್, ಪತ್ರಕರ್ತ, ಸ್ಟಾಕ್ ಬ್ರೋಕರ್, ಸ್ಟೈಲಿಸ್ಟ್, ಮೇಕಪ್ ಆರ್ಟಿಸ್ಟ್ ಆಗಿ ಭವಿಷ್ಯ ರೂಪಿಸುತ್ತಾರೆ. 
 

412

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರು ಶಿಕ್ಷಕರಾಗಿ, ಸೈನಿಕರಾಗಿ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ, ಗಾರ್ಡನರ್ ಆಗಿ ಅಥವಾ ಸಮಾಜ ಸೇವಕರಾಗಿ ಕರಿಯರ್ ರೂಪಿಸಿಕೊಳ್ಳುವುದು ಬೆಸ್ಟ್. 
 

512

ಸಿಂಹ ರಾಶಿ : ಸಿಂಹ ರಾಶಿಯ ಜನರು ರಿಯಲ್ ಎಸ್ಟೇಟ್ ಏಜೆಂಟ್, ಪರ್ಫಾರ್ಮರ್, ಫ್ಯಾಷನ್ ಡಿಸೈನರ್, ನೀವು ಉತ್ತಮ ಮಾತುಗಾರಾಗಿದ್ರೆ ಮೋಟಿವೇಶನಲ್ ಸ್ಪೀಕರ್, ಅಥವಾ ರಾಜಕಾರಣಿಯಾಗಿಯೂ ಅದ್ಭುತ ಕರಿಯರ್ ಹೊಂದಬಹುದು. 
 

612

ಕನ್ಯಾ ರಾಶಿ : ಕನ್ಯಾ ರಾಶಿಯ ಜನರು ಡಿಟೆಕ್ಟಿವ್, ಬರಹಗಾರರು, ಎಡಿಟರ್, ಲ್ಯಾಂಡ್ ಸ್ಕೇಪರ್, ವಿಮರ್ಶಕ, ಸಂಖ್ಯಾಶಾಸ್ತ್ರಜ್ಞ (statistician) ಆಗುವ ಮೂಲಕ ಉನ್ನತ ಕರಿಯರ್ ರೂಪಿಸಬಹುದು. 
 

712

ತುಲಾ ರಾಶಿ : ತುಲಾ ರಾಶಿಯ ಜನರು ಸಾಂಸ್ಕೃತಿಕ ವಿಮರ್ಶಕ, ಸಮಾಲೋಚಕ (negotiator), ರಾಜತಾಂತ್ರಿಕ, ಸೇಲ್ಸ್ ಪರ್ಸನ್, ಸೂಪರ್ ವೈಸರ್ ಆಗಿ ಕರಿಯರ್ ಶುರು ಮಾಡೋದು ಬೆಸ್ಟ್. 
 

812

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಯಶಸ್ವಿ ವೈದ್ಯ ಅಥವಾ ಸರ್ಜನ್ ಆಗ್ತಾರೆ, ಅಷ್ಟೇ ಅಲ್ಲ ಡಿಟೆಕ್ಟೀವ್, ಸೋಶಿಯಲ್ ವರ್ಕರ್, ಲಾಯರ್, ವಿಜ್ಞಾನಿ ಆಗೋದು ಸಹ ಇವರಿಗೆ ಬೆಸ್ಟ್ ಕರಿಯರ್ ಆಯ್ಕೆ. 
 

912

ಧನು ರಾಶಿ : ಧನು ರಾಶಿಯವರಿಗೆ ಪೈಲರ್, ಏರ್ ಹೋಸ್ಟೆಸ್, ಪಬ್ಲಿಕ್ ರಿಲೇಶನ್ ಅಧಿಕಾರಿ, ಟೀಚರ್, ಕೋಚ್ ಟ್ರಾವೆಲ್ ಗೈಡ್ ಮೊದಲಾದ ಕ್ಷೇತ್ರದಲ್ಲಿ ಉನ್ನತ ಭವಿಷ್ಯ ಇದೆ. 
 

1012

ಮಕರ ರಾಶಿ : ಮಕರ ರಾಶಿಯವರು ಆಡಳಿತಾಧಿಕಾರಿ, ಮ್ಯಾನೇಜರ್, ಬ್ಯಾಂಕರ್ ಅಥವಾ ಎಡಿಟರ್ ಆಗಿ ಉತ್ತಮ ಕರಿಯರ್ ಕಂಡುಕೊಳ್ಳಬಹುದು. 
 

1112

ಕುಂಭ ರಾಶಿ : ಈ ರಾಶಿಯವರು ಚುರುಕು ಬುದ್ದಿಯವರಾಗಿದ್ದು, ಡಿಸೈನರ್, ಆವಿಷ್ಕಾರಕ (inventor), ವಿಜ್ಞಾನಿ, ಗಗನಯಾತ್ರಿ, ಟೆಕ್ನಾಲಾಜಿಕಲ್ ಇನೊವೇಟರ್ ಆದ್ರೆ ಕರಿಯರ್ ಯಶಸ್ವಿಯಾಗಿರುತ್ತೆ. 
 

1212

ಮೀನ ರಾಶಿ : ಕೊನೆಯದಾಗಿ ಮೀನಾ ರಾಶಿಯವರು ಫಿಲಾಂಥ್ರೋಪಿಸ್ಟ್ (philanthropist), ಸೈಕಲಾಜಿಸ್ಟ್, ಆರ್ಟಿಸ್ಟ್, ಪಶುವೈದ್ಯ (veterinarian) ಆಗಿ ಉನ್ನತ ಭವಿಷ್ಯ ಕಂಡುಕೊಳ್ಳಬಹುದು. 
 

Read more Photos on
click me!

Recommended Stories