ಬೆಳಿಗ್ಗೆ ಎದ್ದ ನಂತರ, ನಾವು ಇಂದು ನಮ್ಮ ಕನಸಿನಲ್ಲಿ ಏನನ್ನು ನೋಡಿದ್ದೇವೆ ಎಂದು ದಿನವಿಡೀ ಯೋಚಿಸುತ್ತಲೇ ಇರುವ ಸಂದರ್ಭಗಳು ಇರುತ್ತವೆ. ಯಾಕಂದ್ರೆ ಕೆಲವೊಂದು ಕನಸುಗಳು ನೆನಪಿಗೆ ಬರೋದಿಲ್ಲ. ಕೆಲವೊಂದು ಕನಸುಗಳನ್ನು (dream) ನೆನಪಿಸಿದಾಗ ನಾವು ಭಯಭೀತರಾಗುತ್ತೇವೆ ಮತ್ತು ಕೆಲವೊಮ್ಮೆ ನಾವು ತುಂಬಾ ಸಕಾರಾತ್ಮಕ ಭಾವನೆ (positive feeling) ಹೊಂದುತ್ತೇವೆ ಅಲ್ವಾ? ವೈಜ್ಞಾನಿಕವಾಗಿ ಹೇಳೋದಾದ್ರೆ ನಾವು ದಿನವಿಡೀ ಏನು ಯೋಚಿಸುತ್ತೇವೆ ಅಥವಾ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವದನ್ನು ಮಾತ್ರ ನಾವು ಕನಸಿನಲ್ಲಿ ನೋಡುತ್ತೇವೆ. ಅನೇಕ ಬಾರಿ ನಾವು ಕನಸಿನಲ್ಲಿ ನಮಗೆ ಅಚ್ಚರಿ ನೀಡುವಂತಹ ಕೆಲವೊಂದು ವಿಚಾರಗಳನ್ನು ನೋಡುತ್ತೇವೆ.
ನಾವು ಕನಸಿನಲ್ಲಿ ದೇವರನ್ನು (dream of God) ನೋಡಿದಾಗ ಅಥವಾ ನಮ್ಮನ್ನು ದೇವರೊಂದಿಗೆ ಸಂಪರ್ಕಿಸುವ ಕೆಲವು ಶಕ್ತಿ ಅಥವಾ ಬೆಳಕನ್ನು ನೋಡಿದಾಗ ಅಚ್ಚರಿಯಾಗೋದು ಖಚಿತ. ದೇವರೊಂದಿಗೆ ನಿಮ್ಮನ್ನು ಸಂಪರ್ಕಿಸುವ ಕನಸನ್ನು ನೀವು ಎಂದಾದರೂ ಕಂಡಿದ್ದೀರಾ? ವಾಸ್ತವವಾಗಿ, ಹಿಂದೂ ಧರ್ಮದಲ್ಲಿ, ನೀವು ಕನಸಿನಲ್ಲಿ ಏನನ್ನು ನೋಡುತ್ತಿದ್ದೀರಿ ಮತ್ತು ನೀವು ಯಾವ ಫಲಿತಾಂಶಗಳನ್ನು ಪಡೆಯಬಹುದು ಅಥವಾ ಕನಸು ನಿಮಗೆ ಯಾವ ಸಂದೇಶವನ್ನು ನೀಡಲು ಬಯಸುತ್ತದೆ, ಈ ಎಲ್ಲಾ ವಿಷಯಗಳನ್ನು ಹೇಳಲಾಗಿದೆ.
ಜೋತಿಷ್ಯರು ಹೇಳುವಂತೆ ದೇವರಿಗೆ ಸಂಬಂಧಿಸಿದ ಕನಸುಗಳು ನಮಗೆ ಸಾಕಷ್ಟು ಸಂದೇಶಗಳನ್ನು (message) ನೀಡುತ್ತವೆ. ಕೆಲವೊಮ್ಮೆ ಅವು ಒಂದು ಘಟನೆಯ ಸಂಕೇತವಾಗಿರುತ್ತವೆ, ಕೆಲವೊಮ್ಮೆ ಅವು ನಮ್ಮನ್ನು ಶಕ್ತಿಯುತಗೊಳಿಸಲು ಬರುತ್ತವೆ. ದೇವರ ಕನಸು ಬೀಳೋದರ ಅರ್ಥವನ್ನು ವಿವರಾಗಿ ತಿಳಿಯೋಣ.
ಶ್ರೀಕೃಷ್ಣನನ್ನು ನೋಡುವುದು
ಭಗವಾನ್ ಕೃಷ್ಣನನ್ನು (Lord Shri Krishna) ಪ್ರೀತಿಯ ದೇವರು ಎಂದು ಪರಿಗಣಿಸಲಾಗಿದೆ. ನಿಮ್ಮ ಕನಸಿನಲ್ಲಿ ಶ್ರೀ ಕೃಷ್ಣನು ಕೊಳಲು ನುಡಿಸುವುದನ್ನು ನೀವು ನೋಡಿದರೆ, ನಿಮ್ಮ ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದರ್ಥ. ಶ್ರೀ ಕೃಷ್ಣನು ರಾಸಲೀಲೆ ಮಾಡೋದನ್ನು ನೋಡಿದರೆ, ಅದು ನಿಮ್ಮ ಜೀವನದಲ್ಲಿ ಪ್ರೀತಿ ಹೊರಬರಲಿದೆ ಎಂಬುದರ ಸಂಕೇತ. ಕನಸಿನಲ್ಲಿ ಶ್ರೀ ಕೃಷ್ಣನನ್ನು ರಾಧಾ ದೇವಿ ಜೊತೆ ನೋಡಿದರೆ, ಈ ಕನಸು ನಿಮ್ಮ ಪ್ರೇಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ ಎಂಬ ಸಂದೇಶ ನೀಡುತ್ತದೆ.
ಗಣೇಶನನ್ನು ನೋಡುವುದು
ಇದು ಬಹಳ ಒಳ್ಳೆ ಸಂಕೇತ. ನಿಮ್ಮ ಕನಸಿನಲ್ಲಿ ಗಣೇಶನು (Lord Ganesha) ಏನನ್ನಾದರೂ ತಿನ್ನುವುದನ್ನು ನೀವು ನೋಡುತ್ತಿದ್ದರೆ, ದೀರ್ಘಕಾಲದಿಂದ ಈಡೇರದ ನಿಮ್ಮ ಯಾವುದೇ ಆಸೆಗಳನ್ನು ಪೂರೈಸುವ ಸಮಯ ಬಂದಿದೆ ಎಂದರ್ಥ. ಮತ್ತೊಂದೆಡೆ, ಶ್ರೀ ಗಣೇಶ ಮನೆಯಿಂದ ಹೊರಗೆ ಹೋಗುವುದನ್ನು ನೀವು ಕಂಡರೆ, ನಿಮ್ಮ ಜೀವನದಲ್ಲಿ ವಿಪತ್ತು ಬರಲಿದೆ ಎಂದರ್ಥ. ಶ್ರೀ ಗಣೇಶ ಏನನ್ನಾದರೂ ಬರೆಯುವುದನ್ನು ನೀವು ನೋಡಿದರೆ, ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದರ್ಥ.
ಮಹಾದೇವನನ್ನು ನೋಡುವುದು
ನಿಮ್ಮ ಕನಸಿನಲ್ಲಿ ಮಹಾದೇವನು (Lord Shiva) ತಾಂಡವವನ್ನು ಮಾಡುವುದನ್ನು ನೋಡುತ್ತಿದ್ದರೆ, ನೀವು ತಪ್ಪು ಮಾಡಿರಬೇಕು ಮತ್ತು ಅದರಿಂದ ನೀವು ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದರ್ಥ. ಶಿವ ಮತ್ತು ಪಾರ್ವತಿ ಕೈಲಾಸದಲ್ಲಿ ಒಟ್ಟಿಗೆ ಕುಳಿತಿರುವುದನ್ನು ನೋಡುವುದು ನಿಮ್ಮ ವೈವಾಹಿಕ ಜೀವನದಲ್ಲಿ(married life) ಸಂತೋಷದ ಸಂಕೇತ. ನೀವು ಮಹಾದೇವನ ತ್ರಿಶೂಲವನ್ನು ನೋಡುತ್ತಿದ್ದರೆ, ಅದು ಶುಭ ಸಂಕೇತ. ಏಕೆಂದರೆ ಅದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಏನನ್ನಾದರೂ ಮಾಡುತ್ತದೆ. ಮತ್ತೊಂದೆಡೆ, ನೀವು ಮಹಾದೇವನನ್ನು ಧ್ಯಾನ ಭಂಗಿಯಲ್ಲಿ ನೋಡುತ್ತಿದ್ದರೆ, ನಿಮ್ಮ ಜೀವನದಲ್ಲಿ ಶಾಂತಿ ಇರುತ್ತದೆ ಎಂದರ್ಥ.
ಶನಿ ಮಹಾರಾಜರನ್ನು ನೋಡುವುದು
ಶನಿ ಮಹಾರಾಜರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ ಮತ್ತು ನಿಮ್ಮ ಕನಸಿನಲ್ಲಿ ಶನಿ ಕಂಡುಬಂದರೆ, ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಅಗತ್ಯವಿಲ್ಲ. ಶನಿಯ ಕೆಟ್ಟ ಪರಿಣಾಮಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಒಳ್ಳೆಯ ಪರಿಣಾಮಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಕನಸಿನಲ್ಲಿ ನೀವು ಮನೆಯ ಹಿರಿಯರನ್ನು ಗೌರವಿಸುವುದು ಅಥವಾ ಮನೆಯಲ್ಲಿ ಕೆಲಸ ಮಾಡುವ ಜನರಿಗೆ ದಾನ ಮಾಡುವುದನ್ನು ನೀವು ನೋಡಿದರೆ, ಶನಿ ಮಹಾರಾಜ ನಿಮ್ಮ ಬಗ್ಗೆ ಸಂತೋಷಪಟ್ಟಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕನಸಿನಲ್ಲಿ ಶನಿ ಮಹಾರಾಜರ ಪ್ರತಿಮೆಯನ್ನು ನೋಡಿದರೆ, ಪ್ರತಿ ಶನಿವಾರ ಶನಿಯ ದರ್ಶನ ಪಡೆಯಬೇಕು ಎಂದರ್ಥ. ಕನಸಿನಲ್ಲಿ ನೀವು ಯಾರಿಗಾದರೂ ಕೆಟ್ಟದ್ದನ್ನು ಮಾಡುತ್ತಿರುವುದನ್ನು ಕಂಡರೆ ಶನಿ ಮಹಾರಾಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದರ್ಥ.
ದುರ್ಗಾ ದೇವಿ
ನಿಮ್ಮ ಕನಸಲ್ಲಿ ದುರ್ಗಾ ದೇವಿಯ (Durga Devi) ಪ್ರತಿಮೆಯನ್ನು ನೀವು ನೋಡಿದರೆ, ದೇವರ ಬಳಕೆಯ ವಸ್ತುವನ್ನು ನೀವು ಕನ್ಯೆಗೆ ದಾನ ಮಾಡಬೇಕು ಎಂದರ್ಥ. ಮತ್ತೊಂದೆಡೆ, ನೀವು ದುರ್ಗಾ ದೇವಿ ದೇವಾಲಯವನ್ನು ನೋಡಿದರೆ, ಮನೆಯಲ್ಲಿ ಹವನ-ಪೂಜೆಯನ್ನು ಆಯೋಜಿಸಬೇಕು ಮತ್ತು ನಿಮ್ಮ ಕನಸಿನಲ್ಲಿ ದುರ್ಗಾ ದೇವಿಯ ಪ್ರತಿಮೆಗೆ ಪ್ರದಕ್ಷಿಣೆ ಹಾಕುವುದನ್ನು ನೋಡಿದರೆ, ಶೀಘ್ರದಲ್ಲೇ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಅರ್ಥಮಾಡಿಕೊಳ್ಳಬೇಕು.