Published : Feb 28, 2025, 04:53 PM ISTUpdated : Feb 28, 2025, 05:36 PM IST
ಪ್ರೇಮಾನಂದ ಜೀ ಮಹಾರಾಜ್, ಜ್ಯೋತಿಷ್ಯದ ಪ್ರಕಾರ, ಶುಕ್ರವಾರ ಮತ್ತು ಬುಧವಾರ ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸಲು ಉತ್ತಮ ದಿನಗಳು. ಆದರೆ ನೀವು ಭಾನುವಾರ ಕೂದಲು ಕತ್ತರಿಸುತ್ತೀರಿ ಅಂದರೆ ಅದರಿಂದ ಸಮಸ್ಯೆಗಳು ಬರುತ್ತೆ.
ಮಹಾರಾಜ್ ಪ್ರೇಮಾನಂದರು ತಮ್ಮ ಪ್ರವಚನಗಳಲ್ಲಿ ಧರ್ಮಗ್ರಂಥಗಳ ಪ್ರಕಾರ ಬದುಕುವಂತೆ ಜನರಿಗೆ ಸಲಹೆ ನೀಡುತ್ತಾರೆ. ಇವರು ಹಲವಾರು ಜ್ಯೋತಿಷ ಮಾರ್ಗಗಳನ್ನು ತಿಳಿಸಿದ್ದಾರೆ.
27
ಪ್ರೇಮಾನಂದ ಮಹಾರಾಜ್ (Premamand Maharaj) ಅವರು ತಮ್ಮ ಪ್ರವಚನವೊಂದರಲ್ಲಿ ವಾರದ ಯಾವ ದಿನಗಳಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಬೇಕು ಎಂದು ಉಲ್ಲೇಖಿಸಿದ್ದಾರೆ. ಅದನ್ನು ನೀವು ತಿಳಿದುಕೊಂಡು ಮಾಡೋದ್ರಿಂದ ನಿಮ್ಮ ಜೀವನದಲ್ಲಿ ಅಶುಭ ಉಂಟಾಗೋದನ್ನು ತಡೆಯಬಹುದು.
37
ಮಂಗಳವಾರ ಮತ್ತು ಶನಿವಾರ ಹೇರ್ ಕಟ್ (hair cut) ಮಾಡೀಸೋದನ್ನು ಆದಷ್ಟು ತಪ್ಪಿಸಬೇಕು. ಯಾಕಂದ್ರೆ, ಮಂಗಳವಾರ ಮತ್ತು ಶನಿವಾರ ಹೇರ್ ಕಟ್ ಮಾಡಿಸಿಕೊಳ್ಳುವುದರಿಂದ ಅಕಾಲಿಕ ಮರಣದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಮಹಾರಾಜ್ ಪ್ರೇಮಾನಂದ್ ಹೇಳಿದ್ದಾರೆ.
47
ಅಷ್ಟೇ ಅಲ್ಲ, ಸೋಮವಾರ ಕೂಡ ಹೇರ್ ಕಟ್ (Monday Haircut) ಮಾಡಿಸೋದನ್ನು ತಪ್ಪಿಸಬೇಕು. ಯಾಕಂದ್ರೆ ಈ ದಿನ ಅಂದ್ರೆ, ಸೋಮವಾರ ಹೇರ್ ಕಟ್ ಮಾಡೋದ್ರಿಂದ ಮಕ್ಕಳ ಪ್ರಗತಿಗೆ ಅಡ್ಡಿಯಾಗುತ್ತದೆ.
57
ನೀವು ಭಾನುವಾರ ರಜಾ ಅಲ್ವಾ? ಆ ದಿನ ಆರಾಮವಾಗಿ ಕೂದಾಲು ಕತ್ತರಿಸಿದ್ರೆ ಆಯ್ತು ಎಂದು ಅಂದುಕೊಂಡರೆ ಅದು ಕೂಡ ತಪ್ಪು. ಯಾಕಂದ್ರೆ ಭಾನುವಾರ ಕೂದಲನ್ನು ಕತ್ತರಿಸುವುದು ಬುದ್ಧಿವಂತಿಕೆ, ಸಂಪತ್ತು ಮತ್ತು ಖ್ಯಾತಿಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.
67
ಅಷ್ಟೇ ಅಲ್ಲ ಗುರುವಾರ ಕೂಡ ಕೂದಲು ಕತ್ತರಿಸೋದನ್ನು ಅವಾಯ್ಡ್ ಮಾಡಬೇಕು, ಯಾಕಂದ್ರೆ ಗುರುವಾರ ಕೂದಲನ್ನು ಕತ್ತರಿಸುವುದು ಗೌರವ ಮತ್ತು ಪ್ರತಿಷ್ಠೆ ಕಡಿಮೆ ಮಾಡುತ್ತದೆ.
77
ಹಾಗಿದ್ರೆ ಯಾವಾಗ ಕೂದಲು ಕತ್ತರಿಸೋದು ಉತ್ತಮ ಎಂದು ನೀವು ಕೇಳಬಹುದು ಅಲ್ವಾ?, ಹೇಳ್ತೀನಿ ಕೇಳಿ ವಾರದ ಬುಧವಾರ ಮತ್ತು ಶುಕ್ರವಾರದಂದು ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸುವುದು ಒಳ್ಳೆಯದು. ಇದು ಆರೋಗ್ಯ, ಖ್ಯಾತಿ ಮತ್ತು ಸಮೃದ್ಧಿಯನ್ನು ತರುತ್ತದೆ.