ಗಂಡ ಹೆಂಡತಿ ವೈಮನಸ್ಯ ತೊಲಗಿಸಿ, ಅದೃಷ್ಟದ ಬಾಗಿಲೂ ತೆರೆಸುತ್ತೆ ದಾಸವಾಳ!

First Published | Apr 29, 2024, 6:04 PM IST

ದಾಸವಾಳ ಹೂವು ಹಣದ ಕೊರತೆಯನ್ನು ನಿವಾರಿಸುತ್ತದೆ, ಅಷ್ಟೆ ಅಲ್ಲ ನಿಮ್ಮ ಅದೃಷ್ಟದ ಬಾಗಿಲು ತೆರೆಯುವಂತೆ ಮಾಡುತ್ತೆ. ಗಂಡ ಹೆಂಡತಿಯ ನಡುವಿನ ದ್ವೇಷವನ್ನೂ ನಿವಾರಿಸುತ್ತದೆ. ಬನ್ನಿ ದಾಸವಾಳದಿಂದ ಏನೆಲ್ಲಾ ಸಾಧ್ಯ ನೋಡೋಣ. 
 

ವಾಸ್ತು ಶಾಸ್ತ್ರದಲ್ಲಿ, ದಾಸವಾಳದ ಹೂವನ್ನು (hibiscus flower) ಅದೃಷ್ಟದೊಂದಿಗೆ ಕನೆಕ್ಟ್ ಮಾಡಲಾಗುತ್ತೆ. ದಾಸವಾಳ ಹೂವಿನೊಂದಿಗೆ ಕೆಲವು ಪರಿಹಾರಗಳು ಅಥವಾ ತಂತ್ರಗಳನ್ನು ಮಾಡಿದರೆ, ಅದು ನಿಮ್ಮ ಜೀವನದಲ್ಲಿನ ಆರ್ಥಿಕ ನಿರ್ಬಂಧಗಳನ್ನು (Financial Restrictions) ತೆಗೆದು ಹಾಕುತ್ತದೆ ಮತ್ತು ನೀವು ಹಣದ ಪ್ರಯೋಜನಗಳನ್ನು ಪಡೆಯುತ್ತೀರಿ. ವಿಶೇಷವಾಗಿ ಲಕ್ಷ್ಮಿ ದೇವಿಗೆ (Goddess Lakshmi) ದಾಸವಾಳದ ಹೂವನ್ನು ಅರ್ಪಿಸಿದರೆ ಹಣದ ಸಮಸ್ಯೆ ಇರೋದಿಲ್ಲ. ಇದರಿಂದ ಇನ್ನು ಏನೇನು ಸಾಧ್ಯ ತಿಳಿಯೋಣ. 

ವಾಸ್ತು ಶಾಸ್ತ್ರದಲ್ಲಿ  ಹಲವಾರು ವಿಷ್ಯಗಳಿವೆ. ಅದು ನಿಮ್ಮ ನಿದ್ರಿಸುತ್ತಿರುವ ಅದೃಷ್ಟವನ್ನು ಎಚ್ಚರಗೊಳಿಸುತ್ತದೆ. ವಿಶೇಷವಾಗಿ ಅದೃಷ್ಟವು ಹೂವುಗಳೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಹೂವುಗಳನ್ನು ಸಕಾರಾತ್ಮಕ ಶಕ್ತಿಯ (Positive Energy) ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅದೃಷ್ಟ ನಿಮ್ಮನ್ನು ಬೆಂಬಲಿಸದಿದ್ದರೆ, ದಾಸವಾಳ ಹೂವಿನೊಂದಿಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದನ್ನು ಮಾಡುವುದರಿಂದ, ನಿಮ್ಮ ಕೆಲಸದಲ್ಲಿ ಅಡಚಣೆಯೂ ನಿಲ್ಲುತ್ತದೆ, ಅಷ್ಟೇ ಅಲ್ಲ ನಿಮ್ಮ ಜೀವನದಲ್ಲಿ ಹಣದ ಕೊರತೆಯೂ ಇರೋದಿಲ್ಲ. ಬನ್ನಿ, ವಾಸ್ತು ಶಾಸ್ತ್ರದ (Vastu tips) ಪ್ರಕಾರ ದಾಸವಾಳ ಹೂವಿನ ಪರಿಹಾರಗಳನ್ನು ತಿಳಿದುಕೊಳ್ಳಿ.

Latest Videos


ಸಾಲ ತೊಡೆದು ಹಾಕಲು
ಸಾಲವನ್ನು (debts) ತೊಡೆದು ಹಾಕಲು ಸುಲಭವಾದ ಪರಿಹಾರವಿದೆ. ಶುಕ್ರವಾರ, ಗಣೇಶ ಮತ್ತು ತಾಯಿ ದುರ್ಗಾ ದೇವಿಯನ್ನು ಧ್ಯಾನಿಸಿ ಮತ್ತು ಐದು ದಾಸವಾಳದ ಹೂವುಗಳನ್ನು ನಿಮ್ಮ ಹಣ ಇಡುವ ಜಾಗದಲ್ಲಿ ಅಥವಾ ಸೇಫ್ ಲಾಕರ್ ನಲ್ಲಿ ಇರಿಸಿ. ಇದನ್ನು ಕನಿಷ್ಠ 7 ದಿನಗಳ ಕಾಲ ಮಾಡಿ. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನೀವು ಸಾಲದಿಂದ ಮುಕ್ತರಾಗಿ ಹಣ ಗಳಿಸುವಿರಿ. 

ಹಣದ ಕೊರತೆ ನಿವಾರಿಸಲು 
ನಿಮ್ಮ ಮನೆಯಲ್ಲಿ ಯಾವಾಗಲೂ ಹಣದ ಕೊರತೆಯಿದ್ದರೆ (money problem), ನೀವು ದಾಸವಾಳದ ಹೂವುಗಳನ್ನು ಬಳಸಬೇಕು. ಸೂರ್ಯ ದೇವನನ್ನು ಪೂಜಿಸುವಾಗ ನೀವು ದಾಸವಾಳದ ಹೂವುಗಳನ್ನು ಅರ್ಪಿಸಬೇಕು. ದಾಸವಾಳದ ಹೂವನ್ನು ತಾಮ್ರದ ಪಾತ್ರೆಯಲ್ಲಿ ಇರಿಸಿ ಅದನ್ನು ನೀರಿನಿಂದ ತುಂಬಿಸಿ ಸೂರ್ಯದೇವನಿಗೆ ಅರ್ಪಿಸಬೇಕು. ಇದರಿಂದ ಹಣದ ಕೊರತೆ ನಿವಾರಣೆಯಾಗುತ್ತೆ. 

ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ 
ದಾಸವಾಳದ ಗಿಡವನ್ನು ನೆಟ್ಟರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ(positive energy) ನೆಲೆಸುತ್ತದೆ. ಇದಕ್ಕಾಗಿ, ನೀವು ಸರಿಯಾದ ದಿಕ್ಕಿನ ಬಗ್ಗೆಯೂ ತಿಳಿದಿರಬೇಕು. ನೀವು ದಾಸವಾಳ ಹೂವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬೇಕು. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕತೆಯನ್ನು ಕಾಪಾಡುತ್ತದೆ, ಆದರೆ ದಾಸವಾಳದ ಸಸ್ಯ ಒಣಗಬಾರದು ಎಂಬುದನ್ನು ನೆನಪಿನಲ್ಲಿಡಿ.

ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚುತ್ತೆ
ಗಂಡ ಮತ್ತು ಹೆಂಡತಿಯ ನಡುವಿನ ತಪ್ಪು ತಿಳುವಳಿಕೆಗಳನ್ನು ತೆಗೆದು ಹಾಕಲು ದಾಸವಾಳ ಹೂವು ತುಂಬಾ ಪ್ರಯೋಜನಕಾರಿ. ನಿಮ್ಮ ಜೀವನ ಸಂಗಾತಿ (life partner) ಮತ್ತು ನಿಮ್ಮ ನಡುವೆ ಯಾವಾಗಲೂ ಯಾವುದಾದರೂ ವಿಷಯದ ಬಗ್ಗೆ ಜಗಳವಾಗುತ್ತಿದ್ದರೆ ಮತ್ತು ಅನೇಕ ಪ್ರಯತ್ನಗಳ ನಂತರವೂ, ನಿಮ್ಮ ನಡುವೆ ಪರಸ್ಪರ ಅಂಡರ್ ಸ್ಟಾಂಡಿಂಗ್ ಬೆಳೆಯದಿದ್ದರೆ, ನೀವು ನಿಮ್ಮ ದಿಂಬಿನ ಕೆಳಗೆ ದಾಸವಾಳ ಹೂವನ್ನು ಇಟ್ಟು ಮಲಗಬೇಕು. ಇದು ನಿಮ್ಮ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತೆ.

ವ್ಯವಹಾರ, ಉದ್ಯೋಗದಲ್ಲಿ ಯಶಸ್ಸು 
ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು (success) ಬಯಸಿದರೆ, ಲಕ್ಷ್ಮಿ ದೇವಿಗೆ ದಾಸವಾಳ ಹೂವುಗಳೊಂದಿಗೆ ಕಲ್ಲು ಸಕ್ಕರೆಯನ್ನು ಅರ್ಪಿಸಬೇಕು. ಇದರೊಂದಿಗೆ, ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಮತ್ತು ನೀವು ಯಾವಾಗಲೂ ಪ್ರಗತಿಯನ್ನು ಪಡೆಯುತ್ತೀರಿ.
 

click me!