ನಾವು ನೀವು ಎಲ್ಲರೂ ಜೀವನದಲ್ಲಿ ಯಶಸ್ಸು (success) ಗಳಿಸಬೇಕು, ಸಾಧನೆ ಮಾಡಬೇಕು ಎಂದು ಬಯಸುತ್ತೇವೆ ಅಲ್ವಾ? ಆದರೆ ಕೆಲವೇ ಕೆಲವು ಜನರು ಮಾತ್ರ ತಾವು ಕನಸು ಕಂಡದ್ದನ್ನು ಈಡೇರಿಸಲು ಸಾಧ್ಯವಾಗುತ್ತದೆ, ಮತ್ತು ಸಫಲತೆ ಪಡೆಯುತ್ತಾರೆ.
ಸಫಲತೆ ಸಿಗಲು ಸಾಧ್ಯವಾಗದೇ ಇರೋದಕ್ಕೆ ಹಲವಾರು ಕಾರಣಗಳು ಇರಬಹುದು. ಸಫಲತೆ ಪಡೆಯುವಲ್ಲಿ ಕೆಲವು ಸಣ್ಣ ಸಣ್ಣ ವಿಷ್ಯಗಳೇ ಅಡ್ಡಿಯಾಗುತ್ತವೆ, ಅವುಗಳ ಬಗ್ಗೆ ನೀವು ಯೋಚನೆ ಮಾಡೋದಕ್ಕೂ ಸಾಧ್ಯ ಇಲ್ಲ.
ಚಾಣಕ್ಯ (Acharya Chanakya) ಹೇಳುವಂತೆ ಜನರು ಯಾವಾಗಲೂ ಕೆಲವೊಂದು ವಿಷಯಗಳನ್ನು ಇತರರಿಂದ ಮುಚ್ಚಿಡಬೇಕು ಆವಾಗ ಮಾತ್ರ ಯಶಸ್ಸು ಪ್ರಾಪ್ತಿಯಾಗಲು ಸಾಧ್ಯವಾಗುತ್ತೆ, ಇಲ್ಲವಾದರೆ ಸಫಲತೆ ಪಡೆಯೋದು ಕಷ್ಟವಾಗುತ್ತೆ.
ಆಚಾರ್ಯ ಚಾಣಕ್ಯರು ಹೇಳ್ತಾರೆ, ಯಾವತ್ತೂ ಯಾರೂ ತಮ್ಮ ಗುರಿಯನ್ನು ಇನ್ನೊಬ್ಬ ವ್ಯಕ್ತಿಯ ಮುಂದೆ ಹೇಳಬಾರದು. ಹಾಗೇ ಹೇಳಿದರೆ ಅದನ್ನು ಸಾಧಿಸೋಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.
ಯಾರು ತಮ್ಮ ಕನಸುಗಳ ಬಗ್ಗೆ, ತಮ್ಮ ಗುರಿಗಳ (aim) ಬಗ್ಗೆ ಇನ್ನೊಬ್ಬ ವ್ಯಕ್ತಿಯ ಬಳಿ ಹೇಳುತ್ತಾರೆ ಅಂತಹ ವ್ಯಕ್ತಿ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ, ಇದರಿಂದ ಗುರಿ ತಲುಪೋವಲ್ಲಿ ಅಡೆತಡೆ ಉಂಟಾಗುತ್ತೆ.
ನೀವು ಇನ್ನೊಬ್ಬರ ಬಳಿ ನಿಮ್ಮ ಕನಸುಗಳನ್ನು ಹೇಳಿದಾಗ, ಅವರು ಕೆಟ್ಟವರಾಗಿದ್ದರೆ, ನಿಮ್ಮ ಕನಸುಗಳಿಗೆ ಅಡ್ಡಿ ತರಬಹುದು, ಇದರಿಂದ ನೀವು ಸಫಲತೆ ಪಡೆಯೋಕೆ ಸಾಧ್ಯವಾಗದೇ ಇರಬಹುದು.
ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯ ಸಫಲತೆ ಆತನ ಕಠಿಣ ಪರಿಶ್ರಮ, ಹಾಕಿಕೊಳ್ಳುವ ಯೋಜನೆ, ಎಲ್ಲದರ ಮೇಲೆ ನಿರ್ಧರಿತವಾಗುತ್ತದೆ. ಆದರೆ ಇದಕ್ಕೆ ತಡೆ ಬಂದ ಹೆಜ್ಜೆ ಮುಂದಿಡಲು ಸಾಧ್ಯವಾಗೋದಿಲ್ಲ.
ಇನ್ನು ಚಾಣಕ್ಯ ಹೇಳುವಂತೆ ವ್ಯಕ್ತಿಯು ತಪ್ಪಿಯೂ ತಮ್ಮ ವೀಕ್ ನೆಸ್ ಅನ್ನು ಇತರ ಯಾವುದೇ ವ್ಯಕ್ತಿಯ ಮುಂದೆ ಹೇಳಬಾರದು. ನಿಮ್ಮ ದೌರ್ಬಲ್ಯದ ಬಗ್ಗೆ ಇತರ ವ್ಯಕ್ತಿಗೆ ಹೇಳಿದಾಗ ಅವರು ಅದರ ಲಾಭ ಪಡೆಯುವ ಸಾಧ್ಯತೆ ಇದೆ.