Bollywood Celebrities: ಆಲಿಯಾ, ಅನುಷ್ಕಾ , ಪ್ರಿಯಾಂಕ ... 6ರಂದೇ ಮಗುವಿಗೆ ಜನ್ಮ ನೀಡಿದ್ದು ಯಶಸ್ಸಿಗಾಗಿಯೇ?

Published : May 27, 2025, 06:39 PM ISTUpdated : May 28, 2025, 10:21 AM IST

ಸಂಖ್ಯಾ ಶಾಸ್ತ್ರದಲ್ಲಿ ದಿನಾಂಕ 6ನ್ನು ತುಂಬಾನೆ ಪವರ್ ಫುಲ್ ದಿನ ಎನ್ನುತ್ತಾರೆ. ಹಾಗಾಗಿಯೇ ನಟಿಯರಾದ ಆಲಿಯಾ ಭಟ್, ಅತಿಯಾ ಶೆಟ್ಟಿ ಮತ್ತು ಅನುಷ್ಕಾ ಶರ್ಮಾ, ಪ್ರಿಯಾಂಕಾ ಮಕ್ಕಳಿಗೆ ಜನ್ಮ ನೀಡಲು 6 ನೇ ಸಂಖ್ಯೆಯನ್ನು ಆರಿಸಿಕೊಂಡಿದ್ದಾರೆ.

PREV
18

ಕಾಕತಾಳೀಯವೋ ಅಥವಾ ಪ್ಲ್ಯಾನ್ ಮಾಡಿದ್ದೋ?

ಬಾಲಿವುಡ್ ತಾರೆಯರ (Bollywood celebrities) ಜೀವನ ತೆರೆದ ಪುಸ್ತಕದಂತಿರುತ್ತೆ., ಜನರು ಅವರ ಜೀವನದ ಪ್ರತಿಯೊಂದು ವಿಷಯಗಳನ್ನು ಗಮನಿಸುತ್ತಲೇ ಇರುತ್ತಾರೆ, ಅದು ಅವರ ಚಲನಚಿತ್ರಗಳಾಗಿರಬಹುದು, ಮದುವೆಯಾಗಿರಬಹುದು ಅಥವಾ ಮಗುವಿನ ಜನನವಾಗಿರಬಹುದು ಎಲ್ಲವನ್ನೂ ಜನ ಗಮನಿಸುತ್ತಾರೆ. 

28

ಇತ್ತೀಚೆಗೆ, ಒಂದು ವಿಶಿಷ್ಟ ಕಾಕತಾಳೀಯ ಬೆಳಕಿಗೆ ಬಂದಿದ್ದು, ಈ ವಿಷ್ಯ ಅನೇಕ ಜನರನ್ನು ಯೋಚಿಸುವಂತೆ ಮಾಡಿದೆ. ಆಲಿಯಾ ಭಟ್ (Alia Bhatt), ಅತಿಯಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಅನುಷ್ಕಾ ಶರ್ಮಾ, ನಾಲ್ಕು ಜನ ತಮ್ಮ ಮಕ್ಕಳಿಗೆ ಜನ್ಮ ನೀಡಲು ಸಂಖ್ಯೆ 6ನ್ನು ಆಯ್ಕೆ ಮಾಡಿಕೊಂಡಿದ್ದಾರೆ.

38

ಮೂಲಾಂಕ 6

ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರ ಮೂಲಾಂಕ 6 (Radix 6) ಎಂದು ಪರಿಗಣಿಸಲಾಗುತ್ತೆ. ಆಲಿಯಾ ಭಟ್ ಅವರ ಮಗಳು ನವೆಂಬರ್ 6 ರಂದು ಜನಿಸಿದರೆ, ಅತಿಯಾ ಶೆಟ್ಟಿ ಅವರ ಮಗಳು ಮಾರ್ಚ್ 24, 2025 ರಂದು ಜನಿಸಿದರು, ಇನ್ನು ಅನುಷ್ಕಾ ಶರ್ಮಾ (Anushka Sharma) ಅವರ ಮಗ ಅಕಾಯ್ ಫೆಬ್ರವರಿ 15, 2024 ರಂದು ಜನಿಸಿದ್ರೆ, ಪ್ರಿಯಾಂಕಾ ಚೋಪ್ರಾ ಪುತ್ರಿ ಮಾಲ್ತಿ ಜನವರಿ 15, 2022ರಂದು ಜನಿಸಿದ್ದಾರೆ. ಹಾಗಾಗಿ ಇವರೆಲ್ಲರ ಮೂಲಾಂಕ 6 ಆಗಿದೆ.

48

ಶುಕ್ರನ ಪ್ರಭಾವ

ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 6 ಹೊಂದಿರುವ ಜನರು ಶುಕ್ರ ಗ್ರಹದಿಂದ ಪ್ರಭಾವಿತರಾಗುತ್ತಾರೆ. ಜ್ಯೋತಿಷ್ಯದಲ್ಲಿ, ಶುಕ್ರನು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಆಲಿಯಾ ಭಟ್ (Alia Bhatt) ಅವರ ಪುತ್ರಿ ರಾಹಾ ಕಪೂರ್ ಕೂಡ ಈ ಮೂಲಾಂಕದಲ್ಲೇ ಹುಟ್ಟಿರೋದು.

58

ಪೋಷಕರಿಗೆ ಅದೃಷ್ಟ

ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 6 ನ್ನು ಹೊಂದಿರುವ ಮಕ್ಕಳನ್ನು ಅವರ ಹೆತ್ತವರಿಗೆ ತುಂಬಾ ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಈ ಮಕ್ಕಳ ಜನನದ ನಂತರ, ಮನೆಯಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ, ಅವರು ತಮ್ಮೊಂದಿಗೆ ಅದೃಷ್ಟವನ್ನು ತರುತ್ತಾರೆ.

68

ಸಂಖ್ಯಾಶಾಸ್ತ್ರದಲ್ಲಿ '6' ರ ಪ್ರಾಮುಖ್ಯತೆ ಏನು?

ಸಂಖ್ಯಾಶಾಸ್ತ್ರದ (numerology) ಪ್ರಕಾರ, ಸಂಖ್ಯೆ 6 ರ ಆಡಳಿತ ಗ್ರಹ ಶುಕ್ರ. ಈ ಗ್ರಹವನ್ನು ಪ್ರೀತಿ, ಸೌಂದರ್ಯ, ಕಲೆ, ವೈಭವ ಮತ್ತು ಭೌತಿಕ ಸುಖಗಳ ಸಂಕೇತವೆಂದು ಪರಿಗಣಿಸಲಾಗಿದೆ.

78

ಮೂಲಾಂಕ 6ರ ವಿಶೇಷತೆ ಏನು?

6 ನೇ ಸಂಖ್ಯೆ ಹೊಂದಿರುವ ಜನರು ಹೆಚ್ಚಾಗಿ ಆಕರ್ಷಕ ವ್ಯಕ್ತಿತ್ವವನ್ನು (attractive personality) ಹೊಂದಿರುತ್ತಾರೆ. ಅವರು ಸೃಜನಶೀಲ ಮತ್ತು ಕಲಾತ್ಮಕ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಅದೇ ಸಮಯದಲ್ಲಿ, ಅವರು ಜೀವನದಲ್ಲಿ ಭೌತಿಕ ಸಂತೋಷವನ್ನು ಪಡೆಯುತ್ತಾರೆ.

88

ಬಾಲಿವುಡ್ ದಂಪತಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಡೆಲಿವರಿ ಪ್ಲ್ಯಾನ್ ಮಾಡಿದ್ರಾ?

ಇತ್ತೀಚಿನ ದಿನಗಳಲ್ಲಿ, ವೈದ್ಯಕೀಯ ವಿಜ್ಞಾನವು (Medical Science) ತುಂಬಾ ಮುಂದುವರೆದಿದೆ, ನೀವು ನಿಮ್ಮ ಮಗುವಿನ ಜನ್ಮ ದಿನಾಂಕವನ್ನು ಸಿ-ಸೆಕ್ಷನ್ ಅಥವಾ ಸಾಮಾನ್ಯ ಹೆರಿಗೆಯ ಮೂಲಕ ಆಯ್ಕೆ ಮಾಡಬಹುದು. ಹಲವು ಬಾರಿ, ಪೋಷಕರು ತಮ್ಮ ಜ್ಯೋತಿಷಿ ಅಥವಾ ಸಂಖ್ಯಾಶಾಸ್ತ್ರಜ್ಞರನ್ನು ಸಂಪರ್ಕಿಸಿದ ನಂತರ ಹೆರಿಗೆಗೆ ಶುಭ ದಿನಾಂಕವನ್ನು ಆಯ್ಕೆ ಮಾಡುತ್ತಾರೆ.

Read more Photos on
click me!

Recommended Stories