ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿಯಿಂದ ಪ್ರಾಣಪ್ರತಿಷ್ಠೆ ವಿಧಿ ಸಂಪನ್ನ

Published : Jan 22, 2024, 12:44 PM ISTUpdated : Jan 22, 2024, 12:53 PM IST

ಬಹು ಕಾತರದಿಂದ ಕೋಟ್ಯಂತರ ಜನ ಕಾದಿದ್ದ ಸಮಯ ಬಂದೇ ಬಿಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ವಿಧಿವಿಧಾನ ಪೂರೈಸಲು ಪ್ರಧಾನಿ ನರೇಂದ್ರ ಮೋದಿ ಗರ್ಭಗುಡಿ ಪ್ರವೇಶಿಸಿದ್ದಾರೆ.

PREV
19
ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿಯಿಂದ ಪ್ರಾಣಪ್ರತಿಷ್ಠೆ ವಿಧಿ ಸಂಪನ್ನ

ಬಹು ಕಾತರದಿಂದ ಕೋಟ್ಯಂತರ ಜನ ಕಾದಿದ್ದ ಸಮಯ ಬಂದೇ ಬಿಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ವಿಧಿವಿಧಾನ ಪೂರೈಸಲು ಪ್ರಧಾನಿ ನರೇಂದ್ರ ಮೋದಿ ಗರ್ಭಗುಡಿ ಪ್ರವೇಶಿಸಿದ್ದಾರೆ.

29

ಪ್ರಾಣ ಪ್ರತಿಷ್ಠಾ ಎನ್ನುವುದು ವಿಗ್ರಹವನ್ನು ದೇವತೆಯನ್ನಾಗಿ ಪರಿವರ್ತಿಸುವ ಕಾರ್ಯವಾಗಿದೆ. ಈ ಸಂದರ್ಭದಲ್ಲಿ ವಿಗ್ರಹಕ್ಕೆ ದೇವರನ್ನು ಆಹ್ವಾನಿಸಲಾಗುತ್ತದೆ. 

 

39
narendra modi12

ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಮನನ್ನು ಕಣ್ತುಂಬಿಕೊಂಡ ಮೋದಿ ನಮಸ್ಕರಿಸಿದರು.

49

ಈ ಸಂದರ್ಭದಲ್ಲಿ ಮೋದಿ ಜೊತೆ, ಆರ್‌ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ,ಗವರ್ನರ್ ಆನಂದಿಬೆನ್ ಪಟೇಲ್ ಅವರು ಕುಳಿತಿದ್ದಾರೆ. 

59

ಈ ಕಾರ್ಯಕ್ರಮದ ನಂತರ ಮೋದಿ ಅವರು ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ನಡೆಯಲಿರುವ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

69

ಈಗಾಗಲೇ ಅಯೋಧ್ಯೆಯಲ್ಲಿ ಸಾವಿರಾರು ದೇಶದ ಪ್ರಮುಖರು ಸೇರಿದ್ದು, ಲಕ್ಷಾಂತರ ಭಕ್ತರು ರಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. 

 

79

ಅಯೋಧ್ಯೆಯ ತುಂಬಾ ರಾಮ, ಜೈ ಶ್ರೀ ರಾಮ್, ಸ್ವಸ್ತಿಕ್ ಮುಂತಾದ ಧಾರ್ಮಿಕ ಹೋರ್ಡಿಂಗ್‌ಗಳನ್ನು ಕಾಣಬಹುದು. ಜೊತೆಗೆ, ಎಲ್ಲೆಲ್ಲೂ ಕೇಸರಿಮಯ ಧ್ವಜಗಳು ಹಾರಾಡುತ್ತಿವೆ.

89

ಪ್ರಾಣಪ್ರತಿಷ್ಠೆಗಾಗಿ ದೇವಾಲಯ ಮೆಟ್ಟಿಲುಗಳನ್ನ ಹತ್ತಿ ಪ್ರವೇಶಿಸುವಾಗ ಪ್ರಧಾನಿ ಮೋದಿ ಕೆಂಪು ವಸ್ತ್ರ ಹಾಗೂ ಬೆಳ್ಳಿ ಛಾತ್ರ ಹಿಡಿದು ಸಾಗಿದರು.

99
Modi Ayodhya 2

ಕ್ರೀಂ ಬಣ್ಣದ ಕುರ್ತಾ ಪೈಜಾಮ ಧರಿಸಿ ಬಿಳಿ ಶಲ್ಯದಲ್ಲಿ ಕಂಗೊಳಿಸುತ್ತಿದ್ದ ಮೋದು ಭಕ್ತಿಭಾವದಿಂದ ದೇವಾಲಯಕ್ಕೆ ಪ್ರವೇಶಿಸಿದರು.

Read more Photos on
click me!

Recommended Stories