ಗ್ರಹಗಳ ರಾಜಕುಮಾರ ಬುಧ ಮತ್ತು ಗ್ರಹಗಳ ರಾಜ ಸೂರ್ಯನು ತುಲಾ ರಾಶಿಯಲ್ಲಿದ್ದಾನೆ. ಸೂರ್ಯ ಮತ್ತು ಬುಧ ಸಂಯೋಗದಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಬುಧಾದಿತ್ಯ ಯೋಗವು ಅತ್ಯಂತ ಮಂಗಳಕರವಾಗಿದೆ.
ಸೂರ್ಯ ಮತ್ತು ಬುಧ ಸಂಯೋಗವು ನವೆಂಬರ್ 6 ರವರೆಗೆ ತುಲಾ ರಾಶಿಯಲ್ಲಿ ಇರುತ್ತದೆ. ನವೆಂಬರ್ ರಂದು ಬುಧನು ವೃಶ್ಚಿಕ ರಾಶಿ ಪ್ರವೇಶಿಸುತ್ತಾನೆ.
ಸೂರ್ಯ ಮತ್ತು ಬುಧ ಸಂಯೋಗವು ಮಿಥುನ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಸಾಂಸಾರಿಕ ಸುಖ ಪ್ರಾಪ್ತಿಯಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಹೊಸ ವಾಹನ ಆಸ್ತಿ ಖರೀದಿಸಲು ಅತ್ಯುತ್ತಮ ಸಮಯವಾಗಿದೆ.
ಸಿಂಹ ರಾಶಿಯ ಜನರು ಬುಧಾದಿತ್ಯ ರಾಜಯೋಗದ ಪ್ರಭಾವದಿಂದ ಆರ್ಥಿಕ ಸಮೃದ್ದಿಯನ್ನು ಪಡೆಯುತ್ತಾರೆ. ಯಶಸ್ಸಿನ ಸಾಧ್ಯತೆ ಹೆಚ್ಚು. ವ್ಯಾಪಾರ ಪಾಲುದಾರಿಕೆ ಅಥವಾ ಹೂಡಿಕೆಯಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಇದು ಉತ್ತಮ ಸಮಯವಾಗಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಬುಧಾದಿತ್ಯ ರಾಜಯೋಗವು ಧನು ರಾಶಿಯವರಿಗೆ ತುಂಬಾ ಶುಭಕರವಾಗಿರಲಿದೆ.ಲಾಭವನ್ನು ಗಳಿಸಬಹುದು.ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಯಶಸ್ಸಿನ ಸಾಧ್ಯತೆಗಳು ಹೆಚ್ಚಿವೆ. ಆರೋಗ್ಯ ಉತ್ತಮವಾಗಿರುತ್ತದೆ.