ಶನಿ ಜಯಂತಿಯಂದು ಬುಧಾದಿತ್ಯ ರಾಜಯೋಗ: ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್!

Published : May 12, 2026, 09:55 AM IST

ಶನಿ ಅಮಾವಾಸ್ಯೆಯ ದಿನದಂದು ವೃಷಭ ರಾಶಿಯಲ್ಲಿ ಅಪರೂಪದ ಯೋಗವೊಂದು ರೂಪುಗೊಳ್ಳುತ್ತಿದೆ. ಈ ಯೋಗವು ಕೆಲವು ರಾಶಿಚಕ್ರದವರಿಗೆ ಬಯಸಿದ ವರಗಳನ್ನು ನೀಡಲಿದೆ. ಕೇವಲ ಒಂದು ವಾರ ತಾಳ್ಮೆಯಿಂದ ಇದ್ದರೆ ಸಾಕು, ಇವರ ಜೀವನದಲ್ಲಿ ಯಶಸ್ಸು ಖಚಿತ.

PREV
16
ಸೂರ್ಯ, ಬುಧ ಸಂಯೋಗ
ಈ ವರ್ಷ ಮೇ 16 ರಂದು ಶನಿ ಅಮಾವಾಸ್ಯೆ ಇದೆ. ಇದೇ ದಿನ ಶನಿ ಜಯಂತಿಯನ್ನೂ ಆಚರಿಸಲಾಗುತ್ತದೆ. ಈ ದಿನ ಗ್ರಹಗಳ ರಾಜನಾದ ಸೂರ್ಯ, ಬುಧ ಗ್ರಹದೊಂದಿಗೆ ಸೇರಲಿದ್ದಾನೆ. ಮೇ 16ರಂದು ಸೂರ್ಯ ವೃಷಭ ರಾಶಿಗೆ ಪ್ರವೇಶಿಸಿದರೆ, ಅದೇ ಸಮಯದಲ್ಲಿ ಬುಧ ಕೂಡ ವೃಷಭ ರಾಶಿಗೆ ಬರಲಿದ್ದಾನೆ. ಇದರಿಂದ ಬುಧಾದಿತ್ಯ ರಾಜಯೋಗ ಉಂಟಾಗುತ್ತಿದೆ. ಈ ಯೋಗದಿಂದ ಐದು ರಾಶಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಆ ರಾಶಿಗಳು ಯಾವುವು ನೋಡೋಣ.
26
1. ಮೇಷ ರಾಶಿ
ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಈ ಯೋಗವು ಮೇಷ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರಲಿದೆ. ವಿಶೇಷವಾಗಿ ವ್ಯಾಪಾರದಲ್ಲಿ ಉತ್ತಮ ಯಶಸ್ಸನ್ನು ಗಳಿಸುವಿರಿ. ಆದಾಯವು ಅನಿರೀಕ್ಷಿತವಾಗಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೂ ಇದು ಅನುಕೂಲಕರ ಸಮಯ. ಅನಿರೀಕ್ಷಿತವಾಗಿ ಬರುವ ಹಣದಿಂದ ಈ ರಾಶಿಯವರ ಎಲ್ಲಾ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ.
36
2. ಕನ್ಯಾ ರಾಶಿ
ಕನ್ಯಾ ರಾಶಿಯವರ ಅದೃಷ್ಟ ಹೆಚ್ಚಾಗಲಿದೆ. ಕೆಲಸದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಹೊಸದಾಗಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದರಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ಸಂಬಳ ಹೆಚ್ಚಳವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಈ ಸಮಯ ತುಂಬಾ ಒಳ್ಳೆಯದು. ದುಪ್ಪಟ್ಟು ಲಾಭ ಗಳಿಸುವಿರಿ.
46
3. ಧನು ರಾಶಿ
ವೃಷಭ ರಾಶಿಯಲ್ಲಿ ರೂಪುಗೊಳ್ಳುವ ಬುಧಾದಿತ್ಯ ರಾಜಯೋಗವು ಧನು ರಾಶಿಯವರಿಗೆ ತುಂಬಾ ಅದ್ಭುತವಾಗಿರುತ್ತದೆ. ಅಂದುಕೊಂಡ ಕೆಲಸಗಳೆಲ್ಲಾ ನೆರವೇರುತ್ತವೆ. ಹಿಂದೆ ಮಾಡಿದ ಸಾಲಗಳನ್ನೆಲ್ಲ ಈಗ ತೀರಿಸುತ್ತೀರಿ. ಅನಿರೀಕ್ಷಿತ ಮೂಲಗಳಿಂದ ಹಣ ಕೈ ಸೇರುತ್ತದೆ. ಸಮಸ್ಯೆಗಳೆಲ್ಲಾ ಒಂದೇ ಬಾರಿಗೆ ದೂರವಾಗಿ ಜೀವನವು ನೆಮ್ಮದಿಯಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.
56
4. ಮಕರ ರಾಶಿ
ಈ ಬುಧಾದಿತ್ಯ ರಾಜಯೋಗವು ಮಕರ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಒಂದು ಸುವರ್ಣಾವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆದಾಯ ದುಪ್ಪಟ್ಟಾಗಲಿದೆ. ವ್ಯಾಪಾರದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಜೀವನವು ಸಂತೋಷದಿಂದ ಕೂಡಿರುತ್ತದೆ.
66
5. ಕುಂಭ ರಾಶಿ
ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಈ ಬುಧಾದಿತ್ಯ ರಾಜಯೋಗವು ಕುಂಭ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೆಲಸದಲ್ಲಿನ ಆತಂಕ ಕಡಿಮೆಯಾಗುತ್ತದೆ. ಧೈರ್ಯ ಮತ್ತು ಪರಿಶ್ರಮ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕೈಗೆ ಹಣ ಬರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿನ ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ದುಪ್ಪಟ್ಟು ಸಂತೋಷವನ್ನು ಪಡೆಯುತ್ತೀರಿ.
Read more Photos on
click me!

Recommended Stories