ಸೌಂದರ್ಯ ಅಥವಾ ಹಣವನ್ನು ಹೊಂದಿರುವುದು ತಾತ್ಕಾಲಿಕ, ಆದರೆ ಮನುಷ್ಯನ ಮೂಲ ಸ್ವಭಾವ ಎಲ್ಲದಕ್ಕಿಂತ ಮುಖ್ಯ. ಆದ್ದರಿಂದ ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ (selection partner) ಮಾಡುವಾಗ, ಗುಣಗಳನ್ನು ಮಾತ್ರ ನೋಡಬೇಕು. ಮಹಿಳೆಯರನ್ನು ಮದುವೆಯಾಗಲು ಯಾವ ಗುಣಗಳು ಉತ್ತಮವೆಂದು ತಿಳಿಯೋಣ.
ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಸಂಗಾತಿಯು ತನ್ನ ಮನಸ್ಸಿನಲ್ಲಿರುವ ಎಲ್ಲ ವಿಷಯಗಳನ್ನು ಹಂಚಿಕೊಳ್ಳಬಲ್ಲ ರೀತಿಯಲ್ಲಿರಬೇಕು ಮತ್ತು ಮದುವೆಯಾದ ನಂತರ ತಮ್ಮ ಜೀವನವು ಮೊದಲಿಗಿಂತ ಹೆಚ್ಚು ಸುಂದರವಾಗಿರಬೇಕು ಎಂದು ಭಾವಿಸುತ್ತಾನೆ, ಆದರೆ ಎಲ್ಲರಿಗೂ ಅತ್ಯುತ್ತಮ ಜೀವನ ಸಂಗಾತಿ ಸಿಗೋದಿಕ್ಕೆ ಸಾಧ್ಯವಿಲ್ಲ. ಕೆಲವರು ಉತ್ತಮ ಗುಣವುಳ್ಳ ಮಹಿಳೆಯರಿಗಿಂತ ಸುಂದರ ಅಥವಾ ಹಣವಂತ ಸಂಗಾತಿಯನ್ನು ಬಯಸಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಆಚಾರ್ಯ ಚಾಣಕ್ಯ (Chanakya Niti) ತನ್ನ ಚಾಣಕ್ಯ ನೀತಿಯಲ್ಲಿ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಮದುವೆಯಾದರೆ, ಆ ಪುರುಷನ ಜೀವನವು ಭೂಮಿಯ ಮೇಲಿನ ಸ್ವರ್ಗದಂತೆ ಆಗುತ್ತದೆ ಎಂದು ಬರೆದಿದ್ದಾರೆ. ಅಂತಹ ಯಾವ ಗುಣ ಮಹಿಳೆಯರಲ್ಲಿ ಇರಬೇಕು ಅನ್ನೋದನ್ನು ನೋಡೋಣ.
ಕೆಟ್ಟ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುವ ಮಹಿಳೆ
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಕೆಟ್ಟ ಸಮಯ (bad time) ಬಂದೇ ಬರುತ್ತೆ. ನಿಮ್ಮ ಸಂಗಾತಿಯ ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ನಿಂತಾಗ ಜೀವನದ ಹೋರಾಟಗಳನ್ನು ಎದುರಿಸುವುದು ಇನ್ನಷ್ಟು ಸುಲಭ. ಕೆಟ್ಟ ಸಮಯದಲ್ಲೂ ತನ್ನ ಸಂಗಾತಿಯನ್ನು ಬಿಡದ ಗುಣವನ್ನು ಹೊಂದಿರುವ ಮಹಿಳೆಯನ್ನು ಮದುವೆಯಾಗುವ ಪುರುಷರು ಯಾವಾಗಲೂ ಸಂತೋಷವಾಗಿರುತ್ತಾರೆ. ಅಂತೆಯೇ, ಪ್ರತಿಕೂಲ ಪರಿಸ್ಥಿತಿಯಲ್ಲಿ ಯಾವಾಗಲೂ ತಮ್ಮೊಂದಿಗೆ ನಿಲ್ಲುವ ಪುರುಷರನ್ನು ಮಹಿಳೆಯರು ಸಹ ಮದುವೆಯಾಗಬೇಕು.
ನಿಮ್ಮ ತಪ್ಪು ಎತ್ತಿ ತೋರಿಸುವ ಮಹಿಳೆ
ನಮ್ಮಲ್ಲಿ ತಪ್ಪು ಮಾಡದವರು ಯಾರು ಇರಲಾರರು. ತಮ್ಮ ತಪ್ಪುಗಳನ್ನು ಕೇಳಲೂ ಇಷ್ಟಪಡದ ಅನೇಕ ಜನರಿದ್ದಾರೆ ಆದರೆ ನೀವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಬೇಕಾದರೆ. ನೀವು ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ಅವುಗಳನ್ನು ಸುಧಾರಿಸಲು ಸಿದ್ಧರಾಗಿರಬೇಕು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು ಅದನ್ನು ಸರಿಪಡಿಸಲು ಸೂಕ್ತ ಮಾರ್ಗ ತೋರಿಸುವ ಮಹಿಳೆ ನಿಮಗೆ ಉತ್ತಮ ಜೀವನ ಸಂಗಾತಿಯಾಗಬಹುದು.
ನಿಮ್ಮನ್ನುಗೌರವಿಸುವ ಮಹಿಳೆ
ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಕೆಲವು ಸಾಧನೆಗಳನ್ನು ಮಾಡುತ್ತಾನೆ. ಜೀವನದಲ್ಲಿ ತಪ್ಪುಗಳನ್ನು ಹೇಳುವುದರ ಜೊತೆಗೆ, ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆಪಡುವ ವ್ಯಕ್ತಿಯೂ ಇರಬೇಕು. ನೀವು ಅಂತಹ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಕಂಡುಕೊಂಡರೆ, ನಿಮ್ಮ ಜೀವನ ಸ್ವರ್ಗವಾಗುತ್ತದೆ. ಒಬ್ಬ ಮಹಿಳೆ ಪ್ರೀತಿಯ ಜೊತೆಗೆ ಗೌರವವನ್ನು ನೀಡಿದರೆ, ಆ ಮಹಿಳೆಯನ್ನು ಮದುವೆಯಾದ ವ್ಯಕ್ತಿಯು ತುಂಬಾ ಸಂತೋಷವಾಗಿರುತ್ತಾನೆ. ಭೂಮಿ ಮೇಲೆ ಸ್ವರ್ಗವನ್ನು (heaven on earth) ಪಡೆದಂತೆ ಅವರ ಜೀವನ ಇರುತ್ತದೆ.
ಲುಕ್‌ಗಿಂತ ನಿಮ್ಮ ಗುಣಗಳನ್ನು ಹೆಚ್ಚು ಪ್ರೀತಿಸುವ ಮಹಿಳೆ
ಈ ಜಗತ್ತಿನಲ್ಲಿ ವಯಸ್ಸಾಗದೇ ಇರುವ ವ್ಯಕ್ತಿಯೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲೊಂದು ದಿನ ವಯಸ್ಸಾಗಬೇಕು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಲುಕ್‌ಗಿಂತ ನಿಮ್ಮ ಗುಣಗಳನ್ನು ಹೆಚ್ಚು ಇಷ್ಟಪಡುವ ಮಹಿಳೆಯನ್ನು ನೀವು ಜೀವನ ಸಂಗಾತಿಯಾಗಿ ಕಂಡುಕೊಂಡರೆ, ಅಂತಹ ಮಹಿಳೆಯನ್ನು ಮದುವೆಯಾದ ನಂತರ, ನಿಮ್ಮ ಜೀವನವು ಸ್ವರ್ಗದಂತೆ ಆಗುತ್ತದೆ ಏಕೆಂದರೆ ವಯಸ್ಸು ಒಂದು ದಿನ ಕೊನೆಯಾಗುತ್ತದ್ದೆ ಆದರೆ ನಿಮ್ಮ ಗುಣಗಳು ಯಾವಾಗಲೂ ಹಾಗೆಯೇ ಉಳಿಯುತ್ತವೆ, ಅಂತಹ ಪರಿಸ್ಥಿತಿಯಲ್ಲಿ, ಆ ಮಹಿಳೆಯ ಪ್ರೀತಿ ಯಾವಾಗಲೂ ಉಳಿಯುತ್ತದೆ.
ಜೀವನದಲ್ಲಿ ಒಂದು ಮಹತ್ತರ ಗುರಿ ಇರುವ ಮಹಿಳೆ
ಆಚಾರ್ಯ ಚಾಣಕ್ಯನ (Acharya Chanakya) ಪ್ರಕಾರ, ಜೀವನದಲ್ಲಿ ಮಹತ್ತರ ಗುರಿಯನ್ನು ಹೊಂದಿರುವ ಮಹಿಳೆ ನಿಮ್ಮ ಜೀವನದಲ್ಲಿದ್ದರೆ ಯಾವುದೇ ಪುರುಷನ ಜೀವನವು ಸ್ವರ್ಗದಂತೆ ಆಗುತ್ತದೆ, ಏಕೆಂದರೆ ಅಂತಹ ಮಹಿಳೆ ತನ್ನ ಗುರಿಯನ್ನು ಪೂರೈಸಲು ಸಂಪೂರ್ಣ ಸಮರ್ಪಣೆಯಿಂದ ಒಂದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಾಳೆ ಮತ್ತು ನಿಷ್ಪ್ರಯೋಜಕ ವಿಷಯಗಳಿಂದ ದೂರವಿರುತ್ತಾಳೆ. ಜೀವನದಲ್ಲಿ ಒಂದು ಗುರಿಯನ್ನು ಹೊಂದಿರುವ ಮಹಿಳೆ ಪುರುಷರಿಗೆ ತಮ್ಮ ಗುರಿಗಳನ್ನು ಸಾಧಿಸಲು ಸ್ಫೂರ್ತಿ ನೀಡುತ್ತಾರೆ.